ದಾವಣಗೆರೆ: ರಸ್ತೆಯಲ್ಲಿ ವೀಲ್ಹಿಂಗ್ ಮಾಡಿ ಮಂಗ್ಯಾನಾಟವಾಡಬೇಡಿ, ಆಡಿದರೆ ಜೀವ ಕಳೆದುಕೊಳ್ಳಬೇಕಾಯಿತು ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶ್ರೀ ವಿಜಯಕುಮಾರ್ ಎಂ.ಸಂತೋಷ್ ಪೋಷಕರಿಗೆ ಎಚ್ಚರಿಸಿದರು.
ನಗರದ ಅರುಣ ವೃತ್ತದಲ್ಲಿರುವ ಸಂಚಾರ ವೃತ್ತ ನಿರೀಕ್ಷಕರ ಕಛೇರಿ ಆವರಣದಲ್ಲಿ ಅಪ್ರಾಪ್ತ ವಯಸ್ಸಿನ ಚಾಲಕರ ಪೋಷಕರಿಗೆ ಜಾಗೃತಿ ಮೂಡಿಸುವ ಕಾರ್ಯಾಗಾರದಲ್ಲಿ ಮಾತನಾಡಿದರು.
ಮಕ್ಕಳ ಕೈಗೆ ವಾಹನಗಳನ್ನು ಕೊಡಬಾರದು. ಮಕ್ಕಳಿಗೆ ವಾಹನ ಚಲಾಯಿಸುವ ಕ್ರೇಜ್ ಬಹಳ ಇರುತ್ತದೆ. ಇದರಿಂದ ಅನಾಹುತಗಳಾಗಬಹುದು. ಆದ್ದರಿಂದ ಪೋಷಕರು ತಾವೇ ಮಕ್ಕಳನ್ನು ಕರೆದುಕೊಂಡು ಹೋಗುವುದು ಉತ್ತಮ ಎಂದರು.
ದಾವಣಗೆರೆ ಜಿಲ್ಲೆಯಲ್ಲಿ ದಿನಾಂಕ -11-01-2024 ರಿಂದ ದಿನಾಂಕ – 17-01-2024 ರವರೆಗೆ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಸಪ್ತಾಹದ ಉದ್ದೇಶ ಅಪಘಾತಗಳನ್ನು ತಡೆಗಟ್ಟುವುದು, ಸಂಚಾರ ನಿಯಮಗಳ ಪಾಲನೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಆಗಿದೆ.
ನಿನ್ನೆಯಿಂದ ಅಪ್ರಾಪ್ತ ವಯಸ್ಸಿನ ಚಾಲಕರ ವಿರುದ್ಧ ವಿಷಯ ಕಾರ್ಯಾಚರಣೆ ನಡೆಸಿ ಸುಮಾರು 30 ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ವಶಪಡಿಸಿ ಕೊಂಡಿದ್ದಾರೆ.
ಅಪ್ರಾಪ್ತ ವಯಸ್ಸಿನ ಚಾಲಕರ ವಿರುದ್ಧ ಪ್ರಕರಣ ದಾಖಲಿಸಿದರೆ 25 ಸಾವಿರ ದವರೆಗೆ ದಂಡ ಹಾಗೂ 25 ವರ್ಷ ಆಗುವವರೆಗೂ ಡ್ರೈವಿಂಗ್ ಲೈಸೆನ್ಸ್ ನೀಡಲಾಗುವುದಿಲ್ಲ.
ಈ ದಂಡವು ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸವಿದೆ. ಅಪ್ರಾಪ್ತರಿಗೆ ವಾಹನ ಚಲಾಯಿಸಲು ನೀಡಿದಂತಹ ವಾಹನ ಮಾಲೀಕರಿಗೆ ಸಹ ಸಂಚಾರ ನಿಯಮ ಉಲ್ಲಂಘನೆ ದಂಡಕ್ಕೆ ಅರ್ಹರಾಗಿರುತ್ತಾರೆ. ಆದ್ದರಿಂದ ಸಾರ್ವಜನಿಕ ಈ ಬಗ್ಗೆ ಹೆಚ್ಚಿನ ಜಾಗೃತಿ ವಹಿಸಬೇಕು. ತಾವುಗಳು ಸಂಚಾರ ನಿಯಮಗಳ ಪಾಲನೆ ಬಗ್ಗೆ ತಿಳಿದುಕೊಂಡು ಅದನ್ನು ಪಾಲನೆ ಮಾಡುವ ಜೊತೆಗೆ ನಿಮ್ಮ ಮಕ್ಕಳಿಗೂ ತಿಳಿಸಬೇಕು ಎಂದು ತಿಳಿಸಿದರು
ನಗರ ಡಿವೈಎಸ್ ಪಿ ಮಲ್ಲೇಶ್ ದೊಡ್ಡಮನಿ ಮಾತನಾಡಿ, ಮಕ್ಕಳಿಗೆ ಬೈಕ್ ಕೊಟ್ಟರೆ ಊರು ಸುತ್ತಬಹುದು. ಆದ ಕಾರಣ ಪೋಷಕರು ಪರ್ಯಾಯ ವ್ಯವಸ್ಥೆ ಮಾಡುವುದು ಉತ್ತಮ.
ಸಣ್ಣ ಮಕ್ಕಳಿಗೆ ವಾಹನ ನೀಡಿದರೆ ಪೋಲಿಸ್ ಇಲಾಖೆಯಿಂದ ದಂಡ ವಿಧಿಸಲಾಗುತ್ತದೆ. ಆದ ಕಾರಣ ಆಟೋ ಸೇರಿದಂತೆ ಪರ್ಯಾಯ ವ್ಯವಸ್ಥೆ ಮಾಡುವುದು ಸೂಕ್ತ. ಬಹುತೇಕ ಟ್ಯೂಷನ್ ಗಳಿಗೆ ತೆರಳುವ ಮಕ್ಕಳ ಕೈಗೆ ಬೈಕ್ ಗಳನ್ನು ಅದರಲ್ಲೂ ಶಾಲಾ ಮಕ್ಕಳಿಗೆ ಕೊಡುತ್ತಿದ್ದಾರೆ.
ಇದು ಸರಿಯಲ್ಲ ಅದರ ಬದಲು ಆಟೋ ವ್ಯವಸ್ಥೆ ಮಾಡುವುದು ಬಹಳ ಒಳ್ಳೆಯದು.ಪೋಷಕರಿಗೆ ಕಾನೂನಿನ ಬಗ್ಗೆ ತಿಳುವಳಿಕೆ ನೀಡುವ ಉದ್ದೇಶದಿಂದ ಪ್ರತಿ ವರ್ಷ ಜನವರಿ ಜನವರಿ ತಿಂಗಳಲ್ಲಿ ರಸ್ತೆ ಸುರಕ್ಷಾ ಸಪ್ತಾಹ ಮಾಸಾಚರಣೆ ಮಾಡಲಾಗುತ್ತದೆ.ಈ ಬಾರಿ ಧ್ಯೇಯ ಸಮರ್ಥನೀಯ ದೇಶಕ್ಕಾಗಿ ಒಂದು ಸುರಕ್ಷತೆ ಎಂಬುದಾಗಿದೆ.ಕೊರೊನಾದಿಂದ ಎಷ್ಟು ಜನ ಸಾವನ್ನಪ್ಪಿದ್ದಾರೋ ಅದಕ್ಕಿಂತ ಹತ್ತುಪಟ್ಟು ರಸ್ತೆ ಅಪಘಾತದಿಂದ ಸಾವನ್ನಪ್ಪುತ್ತಾರೆ. ಜನರ ನಿರ್ಲಕ್ಷ್ಯ, ಮೆಕ್ಯಾನಿಕಲ್ ತೊಂದರೆ ಹಾಗೂ ಕುಡಿದು ವಾಹನ ಚಲಾಯಿಸುವುದರಿಂದ ಅಥವಾ ಸರಿಯಾಗಿ ವಾಹನ ಚಲಾಯಿಸದೇ ಅಪಘಾತದಲ್ಲಿ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗುತ್ತಿದೆ.
ಒಬ್ಬ ವ್ಯಕ್ತಿಯ ಸಾವಿನಿಂದ ಆತನ ಕುಟುಂಬಕ್ಕೆ ಭರಿಸಲಾಗದ ತೊಂದರೆ ಆಗುತ್ತದೆ.ಕೆಲವು ವೇಳೆ ಸಮರ್ಪಕವಾಗಿ ವಾಹನ ಚಲಾಯಿಸಿದರೂ ಕೂಡ ಎದುರಿನಿಂದ ಬರುವ ವಾಹನ ಸರಿಯಾಗಿ ಚಲಾಯಿಸದಿದ್ದ ವೇಳೆ ನಮ್ಮ ತಪ್ಪಿಲ್ಲದಿದ್ದರೂ ಕೂಡ ಸಾವು ನೋವು ಸಂಭವಿಸುತ್ತದೆ.
ಪೋಷಕರಿಗೆ ಬಿಡುವಿಲ್ಲ ಕೆಲಸದ ಕಾರಣ ಮಕ್ಕಳಿಗೆ ಟ್ಯೂಷನ್ ಸೇರಿದಂತೆ ಇತರೆ ಚಟುವಟಿಕೆಗಳಿಗೆ ಕಳುಹಿಸಲು ಸಾಧ್ಯವಾಗದ ಕಾರಣ ವಾಹನಗಳನ್ನು ಅವರ ಕೈಗೆ ಕೊಡುತ್ತಾರೆ ಇದು ತಪ್ಪು.ಮೈನರ್ ಮಕ್ಕಳಿಗೆ ವಾಹನ ನೀಡಿ ಅಪಘಾತಕ್ಕೆ ಕಾರಣವಾಗುವುದು ಬೇಡ.ಪರೀಕ್ಷೆ ಸಮಯವಾಗಿದೆ ಈ ಸಮಯದಲ್ಲಿ ವಾಹನಗಳನ್ನು ಹಿಡಿದು ದಂಡ ವಿಧಿಸಿ ನ್ಯಾಯಾಲಯಕ್ಕೆ ಕಳುಹಿಸಿದರೆ ಮಕ್ಕಳ ಭವಿಷ್ಯಕ್ಕೆ ತೊಂದರೆಯಾಗಲಿದೆ.
ವಾಹನ ಮಾಲೀಕರಿಗೆ ಕನಿಷ್ಠ ಹತ್ತರಿಂದ ೨೫ ಸಾವಿರ ದಂಡ ವಿಧಿಸಲಾಗುತ್ತದೆ. ವಾಹನ ಸೀಜ್ ಕೂಡ ಮಾಡಲಾಗುತ್ತದೆ ಹಾಗೂ ಪೊಲೀಸರು ದಂಡ ಹಾಕುವುದಿಲ್ಲ. ನ್ಯಾಯಾಲಯವೇ ದಂಡ ವಿಧಿಸುತ್ತದೆ ಎಂದರು.ಈ ಬಗ್ಗೆ ಅರಿವು ಮೂಡಿಸುವ ಸಕುವಾಗಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದರು.
ಅಪಘಾತದಲ್ಲಿ 284 ಜನ ಮೃತ
ಸಂಚಾರಿ ಪೋಲಿಸ್ ಠಾಣೆಯಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ಕಳೆದ ಜ.1 ರಿಂದ 700 ಜನ ಗಾಯಗೊಂಡಿದ್ದಾರೆ.284 ಜನ ಸಾವನ್ನಪ್ಪಿದ್ದಾರೆ. ರಸ್ತೆಯಲ್ಲಿ ಅಪ್ರಾಪ್ತ ಮಕ್ಕಳು ವಾಹನ ಸಿಕ್ಕರೆ ವಿಲೀಂಗ್ ನಂತಹ ಅಪಾಯಕಾರಿ ಚಟುವಟಿಕೆಗಳಲ್ಲಿ ತೊಡಗುತ್ತಾರೆ.ಆದ್ದರಿಂದ ಪೋಷಕರಿಗೆ ಕಾರ್ಯಗಾರ ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ಮಕ್ಕಳಿಗೆ ಶಿಸ್ತು ಕಲಿಸಬೇಕು ಎಂದು ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ಹೇಳಿದರು.
30 ಕ್ಕೂ ದ್ವಿಚಕ್ರ ವಾಹನ ವಶ
30 ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದು, ಸಂಚಾರ ವೃತ್ತ ನಿರೀಕ್ಷಕರ ಕಛೇರಿ(ಅರುಣ ವೃತ್ತದಲ್ಲಿನ) ಆವರಣದಲ್ಲಿ ಆ ಅಪ್ರಾಪ್ತ ವಯಸ್ಸಿನ ಚಾಲಕರ ಪೋಷಕರಿಗೆ ವಾಹನಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಮಲ್ಲೇಶ್ ದೊಡ್ಮನಿ, ಪೊಲೀಸ್ ನಿರೀಕ್ಷಕ ಗುರುಬಸವರಾಜ, ಶಶಿಧರ, ಶ ಮಲ್ಲಮ್ಮ ಚೌಬೆ ರವರು, ಸಂಚಾರ ಪೊಲೀಸ್ ಉಪ ನಿರೀಕ್ಷಕ ಶೈಲಜಾ ಹಾಗೂ ಸಿಬ್ಬಂದಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.