ನ್ಯಾಮತಿ : ನ್ಯಾಮತಿ ತಾಲೂಕಿನ ದೊಡ್ಡೇರಿ ಗ್ರಾಮದಲ್ಲಿ ಕಾಣಿಸಿಕೊಂಡ ಬೃಹತ್ ಹೆಬ್ಬಾವನ್ನು ಸೆರೆ ಹಿಡಿದು, ಹರಮಘಟ್ಟ ರಾಜ್ಯ ಅರಣ್ಯ ವಲಯದಲ್ಲಿ ಬಿಡಲಾಯಿತು.
ಗ್ರಾಮದ ವೀರಭದ್ರೇಶ್ವರ ದೇವಾಲಯದ ಸಮೀಪ ಕಂಡುಬಂದ ಸುಮಾರು 9 ಅಡಿ ಉದ್ದದ ಹೆಬ್ಬಾವು ಕಂಡು ಗ್ರಾಮಸ್ಥರಲ್ಲಿ ಕೆಲಕಾಲ ಆತಂಕ ಮೂಡಿಸಿತ್ತು.
ಕೂಡಲೇ ಶಿವಮೊಗ್ಗದ ಉರಗ ರಕ್ಷಕ ಸ್ನೇಕ್ ಕಿರಣ್ ಅವರನ್ನು ಸಂಪರ್ಕಿಸಿ ಹೆಬ್ಬಾವನ್ನು ಸೆರೆ ಹಿಡಿದು ಹರಮಘಟ್ಟ ರಾಜ್ಯ ಅರಣ್ಯ ವಲಯದಲ್ಲಿ ಸುರಕ್ಷಿತವಾಗಿ ಬಿಟ್ಟರು.
ಈ ವೇಳೆ ಮಾತನಾಡಿದ ಉರಗ ರಕ್ಷಕ ಕಿರಣ್, ಹೆಬ್ಬಾವು ವಿಷಕಾರಕ ಅಲ್ಲದಿದ್ದರೂ ಸಹಿತ ಅದರ ಕಡಿತದಿಂದ ಹಲವಾರು ಸಮಸ್ಯೆ ಎದುರಿಸಬೇಕಾಗುತ್ತದೆ. ಸಾರ್ವಜನಿಕರು ಯಾವುದೇ ಹಾವು ಕಂಡರೂ ಅವುಗಳನ್ನು ಕೊಲ್ಲದೆ, ರಕ್ಷಣೆ ಮಾಡಬೇಕು ಮತ್ತು ರಕ್ಷಣೆಗೆ ಎಲ್ಲಿಯಾದರೂ ಕಂಡುಬಂದಲ್ಲಿ ಉರಗ ರಕ್ಷಕರನ್ನ್ನು ಸಂಪರ್ಕಿಸುವಂತೆ ಮನವಿ ಮಾಡಿದರು