ಚಿತ್ರದುರ್ಗ : ಸಾಮಾನ್ಯವಾಗಿ ಎಲ್ಲರೂ ಹಣವನ್ನು ಸೂಟ್ ಕೇಸ್, ಬ್ಯಾಗ್ ನಲ್ಲಿ ತಂಗೊಂಡು ಹೋಗುವುದು ಕಾಮನ್. ಆದರೆ ಇಲ್ಲೊಬ್ಬ ವ್ಯಾಪಾರಿ ಸರಕಾರಕ್ಕೆ ತೆರಿಗೆ ಕಟ್ಟಬೇಕೆಂದು ಕಳ್ಳ ಮಾರ್ಗದಲ್ಲಿ ತೆಗೆದುಕೊಂಡು ಹೋಗಿ ಅಷ್ಟೂ ಹಣವನ್ನು ಕಳೆದುಕೊಂಡಿದ್ದಾರೆ.
ಹೌದು…ಚಿತ್ರದುರ್ಗದ ಈಚಲನಾಗೇನಹಳ್ಳಿ ಬಳಿ 1ಕೋಟಿ 50ಲಕ್ಷ ರೂ. ಹಣ ದರೋಡೆಯಾಗಿದೆ. ಈ ವ್ಯಾಪಾರಿ ಕೋಟಿ ರೂ. ಹಣವನ್ನು ಗೋಣಿ ಚೀಲದಲ್ಲಿ ಹಾಕಿಕೊಂಡು ಬೈಕ್ ನಲ್ಲಿ ಹೋಗುತ್ತಿದ್ದ.
ಹೊಸಹಳ್ಳಿಯ ಇರ್ಫಾನ್ & ಜಾಕೀರ್ ಬಳಿಯಿದ್ದ ಹಣ ದರೋಡೆಯಾಗಿದ್ದು, ಬೈಕಿನಲ್ಲಿ ಹಣ ಕೊಂಡೊಯ್ಯುವ ವೇಳೆ ದರೋಡೆ ಆರೋಪ ಕೇಳಿ ಬಂದಿದೆ.
ಕಾರಲ್ಲಿ ಬಂದಿದ್ದ ನಾಲ್ವರು ದುಷ್ಕರ್ಮಿಗಳಿಂದ ದರೋಡೆ ನಡೆದಿದ್ದು, ಮಾರಕಾಸ್ತ್ರ ತೋರಿಸಿ ಹಣವನ್ನು ದುಷ್ಕರ್ಮಿಗಳು ದರೋಡೆ ಮಾಡಿದ್ದಾರೆ.
ಈ ಹಣವನ್ನು ಅಡಕೆ ವ್ಯಾಪಾರಕ್ಕಾಗಿ ಹೈದರಾಬಾದ್ ನಿಂದ ಊರಿಗೆ ತರಲಾಗುತ್ತಿತ್ತು ಎಂದು ಹೇಳಲಾಗಿದೆ. ಡಿಸೆಂಬರ್ 4 ರಂದು ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ
ಈಚಲನಾಗೇನಹಳ್ಳಿ ಮಾರ್ಗವಾಗಿ ಹೊಸಹಳ್ಳಿಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ದರೋಡೆಕೋರರ ತಲಾಷ್ ನಲ್ಲಿದ್ದಾರೆ.