ಚನ್ನಗಿರಿ: ಚನ್ನಗಿರಿ ತಾಲೂಕು ವಾಲ್ಮೀಕಿ ನಾಯಕ ಸಮಾಜದ ತಾಲೂಕು ಅಧ್ಯಕ್ಷರ ಆಯ್ಕೆಯಾಗಿ
ಸತತ 3 ನೇ ಬಾರಿ ಹೊದಿಗೆರೆ ರಮೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಪಟ್ಟಣದ ಮಹರ್ಷಿ ವಾಲ್ಮೀಕಿ ಸಮುದಾಯ ಭವನದಲ್ಲಿ ನಡೆದ ತಾಲೂಕು ವಾಲ್ಮೀಕಿ ನಾಯಕ ಸಮಾಜದ ಸಭೆಯಲ್ಲಿ ಸಮಾಜದ ಮುಖಂಡರ ನೇತೃತ್ವದಲ್ಲಿ ಮರು ಆಯ್ಕೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ವಾಲ್ಮೀಕಿ ಜಾತ್ರಾ ಮಹೋತ್ಸವದ ಅಧ್ಯಕ್ಷರಾಗಿ ಸಂತೆಬೆನ್ನೂರು ಕೃಷ್ಣಮೂರ್ತಿಯವರನ್ನು ಆಯ್ಕೆ ಮಾಡಲು ತೀರ್ಮಾನಿಸಲಾಯಿತು.
ನಂತರ ಹೊದಿಗೆರೆ ರಮೇಶ್ ಮಾತನಾಡಿ ಸಮಾಜದ ಜವಾಬ್ದಾರಿಯನ್ನು ಜವಾಬ್ದಾರಿ ವ್ಯಕ್ತಿಗಳಿಗೆ ವಹಿಸುವಂತಹ ಆಶಯವನ್ನು ಹೊಂದಿದ್ದೆ. ಆದರೆ ಸಮಾಜದ ಯುವಕರು ಮತ್ತು ಮುಖಂಡರ ಸಲಹೆಯಂತೆ ಈ ಬಾರಿ ಸಹ ನಾನು ಒಪ್ಪಿಕೊಂಡಿದ್ದೇನೆ.
ರಾಜ್ಯದಲ್ಲಿ ನಾಯಕ ಸಮಾಜವು ಒಂದು ಬಲಿಷ್ಟ ಸಮಾಜವಾಗಿದ್ದು ಮತ್ತಷ್ಟು ಬಲಿಷ್ಟವಾಗಲು ಸಂಘಟನೆ ಆಗತ್ಯವಿದೆ. ಚನ್ನಗಿರಿ ತಾಲೂಕಿನಲ್ಲಿ ಸದೃಡ ನಾಯಕ ಸಮಾಜದ ಸಂಘಟನೆ ಮಾಡಲು ಪ್ರತಿಯೊಬ್ಬ ಸಮಾಜದ ಬಾಂಧವರ ಸಹಕಾರ ಆಗತ್ಯವಾಗಿದೆ ಎಂದರು
ಈ ಸಂದರ್ಭದಲ್ಲಿ ನಾಯಕ ಸಮಾಜದ ಮುಖಂಡರಾದ ನಿವೃತ್ತ ಪ್ರೋಪೆಸರ್ ಎ.ಬಿ. ರಾಮಚಂದ್ರಪ್ಪ, ಪಿ.ಲೋಹಿತ್ಕುಮಾರ್, ಮಾಜಿ ಜಿ.ಪಂ. ಸದಸ್ಯ ಲೋಕೇಶಪ್ಪ, ಪುರಸಭೆ ಸದಸ್ಯ ಗಾದ್ರಿ ರಾಜು, ಮಾಜಿ ಸದಸ್ಯ ಪಿ.ಬಿ.ನಾಯಕ್,ಬುಳಸಾಗರದ ನಾಗರಾಜಣ್ಣ, ಚನ್ನಗಿರಿ ನಗರಘಟಕದ ಅಧ್ಯಕ್ಷ ಜಯರಾಂ, ಕೊಂಡದಹಳ್ಳಿ ಜಯ್ಯಣ್ಣ, ತ್ಯಾವಣಿಗೆ ಜ್ಞಾನೇಶ್, ಹರೋನಹಳ್ಳಿ ಅಶೋಕ್ ಇತರರು ಹಾಜರಿದ್ದರು