ದಾವಣಗೆರೆ : ಮಧ್ಯ ಪ್ರದೇಶ್. ರಾಜಸ್ಥಾನ ಹಾಗೂ ಛತ್ತೀಸ್ ಗಡ್ ನ ರಾಜ್ಯ ಚುನಾವಣೆಗಳಲ್ಲಿ ಬಿಜೆಪಿ ಅಭೂತಪೂರ್ವ ಜಯ ಸಾಧಿಸಿದ್ದು, ಬಿಜೆಪಿ ಸಿದ್ಧಾಂತಗಳ ಗೆಲುವು ಎಂದು ಬಿಜೆಪಿ ವಕ್ತಾರ ಡಿಎಸ್ ಶಿವಶಂಕರ್ ಪ್ರತಿಕ್ರಿಯಿಸಿದ್ದಾರೆ.
ದಾವಣಗೆರೆ ವಿಜಯದೊಂದಿಗೆ ಮಾತನಾಡಿ ,ಇದು ಪ್ರಧಾನಿ ಮೋದಿ ಅವರ ಜನಪರ ಯೋಜನೆಗಳ ಗೆಲುವಾಗಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಗೆಲುವಿಗೆ ಮುನ್ಸೂಚನೆಯಾಗಿದೆ. ವಿರೋಧ ಪಕ್ಷಗಳನ್ನು ಸಾರಾ ಸೆಗಟ್ಟಾಗಿ ಮತದಾರ ತಿರಸ್ಕರಿಸಿದ್ದಾನೆ ಎಂದು ಅವರು ಹೇಳಿದ್ದಾರೆ.