ಚಿತ್ರದುರ್ಗ : ಭೀಮಸಮುದ್ರ ಗ್ರಾಮದಲ್ಲಿ ಶ್ರೀ ಉತ್ಸವಾಂಭ ಸೇವಾ ಸಮಿತಿ ಹಾಗೂ ಶ್ರೀ ಪಾಂಡುರಂಗ ಭಜನಾ ಮಂಡಳಿ ವತಿಯಿಂದ ನಾಲ್ಕನೇ ವಾರ್ಷಿಕೋತ್ಸವ ಹಾಗೂ ಭಜನಾ ಕಮ್ಮಟ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.
ಬಿಜೆಪಿ ಯುವ ಮುಖಂಡ ಜಿಎಸ್ ಅನಿತ್ ಕುಮಾರ್ ಭಾಗವಹಿಸಿ ಮಾತನಾಡಿ, ಭಜನೆ ಎಂಬುದು ನಮ್ಮ ಸಂಸ್ಕೃತಿ. ಇದನ್ನು ನಾವುಗಳು ಬೆಳೆಸಿ ಉಳಿಸಿಕೊಳ್ಳಬೇಕು. ನಾವು ನಮ್ಮ ಸಂಸ್ಕೃತಿ ಯನ್ನು ಮರೆಯಬಾರದು.
ಯುವಕರು ಸಹ ಇದನ್ನೂ ಮುಂದುವರಿಸಿಕೊಂಡು ಹೋಗಬೇಕು ಎಂದು ಸಭಿಕರನ್ನು ಉದ್ದೇಶಿಸಿ ಹೇಳಿದರು. ಈ ಸಂಧರ್ಭದಲ್ಲಿ ಕಾರ್ಯಕ್ರಮದ ಆಯೋಜಕರು ಭಜನಾ ತಂಡಗಳು ಉಪಸ್ಥಿತರಿದ್ದರು.