ದಾವಣಗೆರೆ : ಹರಿಹರ ತಾಲೂಕಿನ ರಾಜನಹಳ್ಳಿಯ ಮಹರ್ಷಿ ವಾಲ್ಮೀಕಿ ಗುರುಪೀಠದ ಆವರಣದಲ್ಲಿ ಫೆಬ್ರವರಿ 8, 9ರಂದು ವಾಲ್ಮೀಕಿ ಜಾತ್ರಾ ಮಹೋತ್ಸವ ಹಾಗೂ ಲಿಂ.ಪುಣ್ಯಾನಂದಪುರಿ ಶ್ರೀಗಳ 18ನೇ ವರ್ಷದ ಪುಣ್ಯಾರಾಧನೆ, ಜಗದ್ಗುರು ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ 17ನೇ ವರ್ಷದ ಪಟ್ಟಾಧಿಕಾರ ಮಹೋತ್ಸವ ನಡೆಸಲು ಜಾತ್ರಾ ಸಮಿತಿ ನಿರ್ಧ ರಿಸಿದ್ದು,ಸಂಚಾಲಕರಾಗಿ ಶ್ರೀನಿವಾಸ್ ದಾಸಕರಿಯಪ್ಪರನ್ನು ನೇಮಿಸಲಾಗಿದೆ.
ನಾಯಕ ಸಮಾಜದ ಮುಖಂಡರು ಆಗಿರುವ ಶ್ರೀನಿವಾಸ ದಾಸಕರಿಯಪ್ಪ ಎಲೆ ಮರೆಯಂತೆ ಕೆಲಸ ಮಾಡುವ ವ್ಯಕ್ತಿ. ಎಲ್ಲರನ್ನೂ ಒಟ್ಟುಗೂಡಿಸಿಕೊಂಡು ಹೋಗುವ ವ್ಯಕ್ತಿತ್ವ ಇರುವ ಕಾರಣ ಶ್ರೀನಿವಾಸ ದಾಸಕರಿಯಪ್ಪರನ್ನು ನೇಮಕ ಮಾಡಲಾಗಿದೆ.
ವಾಲ್ಮೀಕಿ ಗುರುಪೀಠದಲ್ಲಿ ಪ್ರಸನ್ನಾನಂದ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆದ ಜಾತ್ರಾ ಮಹೋತ್ಸವ ಪೂರ್ವ ಭಾವಿ ಸಭೆಯಲ್ಲಿ ಸಂಚಾಲಕರಾಗಿ ಶ್ರೀನಿವಾಸ್ ದಾಸಕರಿಯಪ್ಪರನ್ನು ಆಯ್ಕೆ ಮಾಡಲಾಗಿದೆ.ಪೀಠ ಸ್ಥಾಪನೆಯಾಗಿ 27 ವರ್ಷಗಳು ಕಳೆದಿವೆ. ಇಲ್ಲಿಯವರೆಗೂ 6 ವಾಲ್ಮೀಕಿ ಜಾತ್ರಾ ಮಹೋತ್ಸವ ಆಚರಿಸಲಾಗಿದೆ. ಈ ವರ್ಷ 7ನೇ ಜಾತ್ರೋತ್ಸವ ಜರುಗಲಿದ್ದು, ಶ್ರೀನಿವಾಸ ದಾಸಕರಿಯಪ್ಪ ಸಾರಥ್ಯವಹಿಸಿಲಿದ್ದಾರೆ.
ಈ ವಾಲ್ಮೀಕಿ ಜಾತ್ರೆ ರಾಜ್ಯದಲ್ಲಿ ನಡೆಯುವ ಪ್ರತಿಷ್ಠಿತ ಜಾತ್ರೆಯಾಗಿದ್ದು, ಲಕ್ಷಾಂತರ ಜನ ಸೇರುವರು. ಅಲ್ಲದೇ ನಾಯಕ ಸಮಾಜದ ಗಣ್ಯರು, ಸಿಎಂ ಸಿದ್ದರಾಮಯ್ಯ, ನಟ ಸುದೀಪ್ ಆಗಮಿಸುವರು. ಹೀಗಾಗಿ ಮಠದ ಭಕ್ತರಾಗಿರುವ ಶ್ರೀನಿವಾಸ ದಾಸಕರಿಯಪ್ಪರಿಗೆ ಹೆಚ್ಚಿನ ಜವಾಬ್ದಾರಿ ವಹಿಸಲಾಗಿದೆ.