![](https://davangerevijaya.com/wp-content/uploads/2025/01/IMG-20250116-WA0145.jpg)
ದಾವಣಗೆರೆ : ದೇವ ನಗರಿ ದಾವಣಗೆರೆಯಲ್ಲಿ ಸಹಕಾರ ಚುನಾವಣೆ ಪರ್ವ ಉಂಟಾಗಿದೆ. ಅಂತೆಯೇ ಈಗ ಜ.18 ಕ್ಕೆ ಆಡಳಿತ ಮಂಡಳಿ ಚುನಾವಣೆ ನಡೆಯುತ್ತಿದ್ದು, ಘಟಾನು ಘಟಿಗಳು ಸ್ಪರ್ಧೆ ಒಡ್ಡುತ್ತಿದ್ದಾರೆ. ಹಾಗಾಗಿ ಇಲ್ಲಿಯೂ ಕದನ ಕಣ ಜೋರಾಗಿದೆ.
ಸಹಕಾರ ರತ್ನ ಜೆ.ಆರ್.ಷಣ್ಮುಖಪ್ಪ, ಬಸಪ್ಪ, ಹಾಲೇಶಪ್ಪ, ಕೆ.ಎಂ.ಸುರೇಶ್, ಸಿರಿಗೆರೆ ರಾಜಣ್ಣ, ಭೂಮೇಶಪ್ಪ ಸೇರಿದಂತೆ ಹಲವು ಘಟಾನುಘಟಿಗಳು ಸ್ಫರ್ಧೆ ಒಡ್ಡಿದ್ದಾರೆ.
ಒಟ್ಟು 13 ಸ್ಥಾನಗಳಿಗೆ ಮುಂದಿನ ಐದು ವರ್ಷಕ್ಕೆ ಚುನಾವಣೆ ನಡೆಯಲಿದ್ದು, ಸಂಘದ ಚುನಾವಣೆಯನ್ನು ಶ್ರೀ ಪ್ರ।। ಬ್ರ|| ಡಾ|ಸದ್ಯೋಜಾತ ಶಿವಚಾರ್ಯ ಮಹಾಸ್ವಾಮೀಜಿ ಟ್ರಸ್ಟ್, ಶಿವಾಚಾರ್ಯ ನಿಕೇತನ, ಹಿರೇಮಠ, ಎಂ.ಸಿ.ಸಿ ‘ಬಿ’ ಬ್ಲಾಕ್, ಶಾಮನೂರು ರಸ್ತೆ, ದಾವಣಗೆರೆ ಇಲ್ಲಿ ಬೆಳಗ್ಗೆ 9 ರಿಂದ 4 ರವರೆಗೆ ಚುನಾವಣೆ ನಡೆಯಲಿದೆ. ಜ.3 ರಿಂದ ಜ.10ರತನಕ ನಾಮ ಪತ್ರ ಸಲ್ಲಿಸಬಹುದಾಗಿದೆ. ಜ.11 ಕ್ಕೆ ನಾಮಪತ್ರ ಪರಿಶೀಲನೆ ನಡೆಯಲಿದೆ. ಇನ್ನು ಸ್ಪರ್ಧೆಯಲ್ಲಿರುವ ಅಭ್ಯರ್ಥಿಗಳಿಂದ ನಾಮಪತ್ರಗಳ ಹಿಂತೆಗೆದುಕೊಳ್ಳಲು ಜ.12 ಕೊನೆ ದಿನವಾಗಿದ್ದು ಬೆಳಗ್ಗೆ 11:00 ಘಂಟೆಯಿಂದ ಮಧ್ಯಾಹ್ನ 03:00 ಘಂಟೆಯವರೆಗೆ ಸಮಾಯವಕಾಶ ನೀಡಲಾಗಿದೆ. ಅದೇ ದಿನ ಸ್ಪರ್ಧೆಯಲ್ಲಿರುವ ಅಂತಿಮ ಅಭ್ಯರ್ಥಿಗಳ ಪಟ್ಟಿಯ ಪ್ರಕಟಣೆಗೊಳ್ಳಲಿದೆ. ಜ.18ಕ್ಕೆ ಚುನಾವಣೆ ನಡೆಯಲಿದೆ. ಅದೇ ದಿನ ಫಲಿತಾಂಶ ಹೊರಬೀಳಿದೆ
![](https://davangerevijaya.com/wp-content/uploads/2025/01/IMG-20241225-WA0105.jpg)
![](https://davangerevijaya.com/wp-content/uploads/2025/01/IMG-20250125-WA0230.jpg)
ದಾವಣಗೆರೆ ಜಿಲ್ಲೆಯಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ತಾಲ್ಲೂಕಿಗೆ ಒಬ್ಬರಂತೆ 06 ಜನ ಪ್ರತಿನಿಧಿಗಳು, ದಾವಣಗೆರೆ ತಾಲ್ಲೂಕು-01, ಹರಿಹರ ತಾಲ್ಲೂಕು-01, ಜಗಳೂರು ತಾಲ್ಲೂಕು -01, ಚನ್ನಗಿರಿ ತಾಲ್ಲೂಕು-01, ಹೊನ್ನಾಳ ತಾಲ್ಲೂಕು-01 ಮತ್ತು ನ್ಯಾಮತಿ ತಾಲ್ಲೂಕು -01, ಒಟ್ಟು 06 ಸ್ಥಾನಗಳಿವೆ.
ಒಕ್ಕೂಟದ ಸದಸ್ಯತ್ವ ಹೊಂದಿದ ಜಿಲ್ಲೆಯಲ್ಲಿಯ ಎಲ್ಲಾ ಪಟ್ಟಣ ಸಹಕಾರ ಬ್ಯಾಂಕುಗಳು, ಜಿಲ್ಲೆಯ ಎಲ್ಲಾ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕುಗಳು ಹಾಗೂ ದಾವಣಗೆರೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನಿಂದ ಒಬ್ಬ ಪ್ರತಿನಿಧಿ.ಒಕ್ಕೂಟದ ಸದಸ್ಯತ್ವ ಹೊಂದಿದ ಜಿಲ್ಲೆಯಲ್ಲಿಯ ಎಲ್ಲಾ ಕೃಷಿಯೇತರ ಪತ್ತಿನ ಸಹಕಾರ ಸಂಘಗಳಿಂದ ಒಬ್ಬ ಪ್ರತಿನಿಧಿ,ಒಕ್ಕೂಟದ ಸದಸ್ಯತ್ವ ಹೊಂದಿದ ದಾವಣಗೆರೆ, ಹರಿಹರ ಮತ್ತು ಜಗಳೂರು ತಾಲ್ಲೂಕುಗಳ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ- ಒಬ್ಬ ಪ್ರತಿನಿಧಿ.
ಒಕ್ಕೂಟದ ಸದಸ್ಯತ್ವ ಹೊಂದಿದ ಹೊನ್ನಾಳಿ, ನ್ಯಾಮತಿ ಮತ್ತು ಚನ್ನಗಿರಿ ತಾಲ್ಲೂಕುಗಳ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ – ಒಬ್ಬ ಮಹಿಳಾ ಪ್ರತಿನಿಧಿ.ಒಕ್ಕೂಟದ ಸದಸ್ಯತ್ವ ಹೊಂದಿದ ಜಿಲ್ಲೆಯಲ್ಲಿಯ ಎಲ್ಲಾ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಗಳು ಹಾಗೂ ಜಿಲೆಯ ಎಲ್ಲಾ ಕೃಷಿ ಮತ್ತು ತೋಟಗಾರಿಕೆ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘಗಳಿಂದ ಒಬ್ಬ ಪ್ರತಿನಿಧಿ. (ಹತ್ತಿ ನೂಲಿನ ಎಲ್ಲಾ ವಿಧದ ನೇಕಾರರ ಸಹಕಾರ ಸಂಘಗಳು ಮತ್ತು ಮಾರಾಟ ಸಹಕಾರ )
ಒಕ್ಕೂಟದ ಸದಸ್ಯತ್ವ ಹೊಂದಿದ ಜಿಲ್ಲೆಯ ಎಲ್ಲಾ ಮಹಿಳಾ ಸಹಕಾರ ಸಂಘಗಳಿಂದ ಒಬ್ಬ ಪ್ರತಿನಿಧಿ (
ಒಕ್ಕೂಟದ ಸದಸ್ಯತ್ವ ಹೊಂದಿದ ಜಿಲ್ಲೆಯಲ್ಲಿಯ ಇತರೆ ಎಲ್ಲಾ ಸಹಕಾರ ಸಂಘಗಳಿಂದ ಒಬ್ಬ ಹೊರತುಪಡಿಸಿ) ಪ್ರತಿನಿಧಿಗೆ ಚುನಾವಣೆ ನಡೆಯಲಿದೆ.
235 ಮತದಾರರು
ಒಟ್ಟು 235 ಮತದಾರರು ಇದ್ದು, ಎ ಮತಕ್ಷೇತ್ರ ದಾವಣಗೆರೆ 33, ಚನ್ನಗಿರಿ-18, ಹರಿಹರ- 25, ಚನ್ನಗಿರಿ-19, ಜಗಳೂರು-16, ಹೊನ್ನಾಳಿ 08, ನ್ಯಾಮತಿ ತಾಲೂಕಿಗೆ 4 ಮತದಾರರು ಇದ್ದಾರೆ. ಈ ಕ್ಷೇತ್ರಕ್ಕೆ ಜನವರಿ 9 ರ ತನಕ 10 ಅರ್ಜಿಗಳು ಬಂದಿವೆ. ಬಿ ಮತಕ್ಷೇತ್ರದಲ್ಲಿ 12 ಮತದಾರರು ಇದ್ದು, ಎರಡು ಅರ್ಜಿಗಳು ಬಂದಿವೆ. ಸಿ ಮತಕ್ಷೇತ್ರದಲ್ಲಿ 17 ಮತದಾರರು ಇದ್ದು, 3 ಅರ್ಜಿಗಳು ಬಂದಿವೆ. ಡಿ ಮತಕ್ಷೇತ್ರಗಳಾದ ದಾವಣಗೆರೆ, ಹರಿಹರ, ಜಗಳೂರು ತಾಲೂಕಿನಲ್ಲಿ 33 ಮತದಾರರು ಇದ್ದು ಎರಡು ಅರ್ಜಿಗಳು ಬಂದಿದೆ. ಹೊನ್ನಾಳಿ, ನ್ಯಾಮತಿ, ಚನ್ನಗಿರಿ ತಾಲೂಕಿನಲ್ಲಿ 14 ಮತದಾರರು ಇದ್ದು, 01 ಅರ್ಜಿ ಬಂದಿದೆ. ಉಳಿದಂತೆ ಇ ವರ್ಗದಲ್ಲಿ 10 ಮತದಾರರು ಇದ್ದು 1 ಅರ್ಜಿ ಬಂದಿದೆ. ಎಫ್ ವರ್ಗದಲ್ಲಿ ಮತದಾರರು ಇದ್ದು, ಯಾವುದೇ ಅರ್ಜಿ ಬಂದಿಲ್ಲ, ಜಿ ವರ್ಗದಲ್ಲಿ 35 ಮತದಾರರು ಇದ್ದು ಕೇವಲ ಎರಡು ಅರ್ಜಿಗಳು ಬಂದಿವೆ. ಒಟ್ಟಾರೆ ಚುನಾವಣಾ ಕಣ ರಂಗೇರಿಲಿದ್ದು, ಜ.12 ರ ನಂತರ ಯುದ್ದ ಶುರುವಾಗಲಿದೆ
![](https://davangerevijaya.com/wp-content/uploads/2025/01/IMG-20250116-WA01462.jpg)
![](https://davangerevijaya.com/wp-content/uploads/2025/01/IMG-20250125-WA0230.jpg)