ದಾವಣಗೆರೆ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿರುವ ವಿಚಾರ ರಾಜ್ಯ ಬಿಜೆಪಿಯಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಜೊತೆಗೆ ಆಡಳಿತರೂಢ ಕಾಂಗ್ರೆಸ್ ಸರ್ಕಾರಕ್ಕೂ ಸಣ್ಣಮೆಟ್ಟಿಗಿನ ಆತಂಕಕ್ಕೆ ಕಾರಣವಾಗಿದೆ.ಅದರಲ್ಲೂ, ಕಳೆದ ಎಂಟು ದಿನಗಳಲ್ಲು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಭೇಟಿ ಮಾಡಿದ್ಯಾಕೆ? ಹೊಸ ವರ್ಷದ ಆರಂಭವೇ ಅತೃಪ್ತ ಬಣದ ನಾಯಕನಿಗೆ ಸಿಗುತ್ತಾ ಗೇಟ್ ಪಾಸ್ .? ಮರಿಹುಲಿಗೆ ಅಭಯಹಸ್ತ ನೀಡಿದ್ರಾ ಅಮಿತ್ ಶಾ..?
ಕಳೆದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೊಸ ವರ್ಷದ ಮೊದಲ ದಿನವೇ ಚುನಾವಣೆ ಚಾಣಕ್ಯ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಅರ್ಧಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿರುವುದು ಬಿಜೆಪಿಯಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಅದು ಬಿಜೆಪಿ ಅತೃಪ್ತರ ಬಣ ಎರಡನೇ ಹಂತದ ಹೋರಾಟಕ್ಕೆ ಸಿದ್ಧತೆ ನಡೆಸಿರುವುವಾಗಲೇ ಭೇಟಿ ನಡೆದಿದೆ. ಅಷ್ಟಕ್ಕೂ, ರಾಜ್ಯಾಧ್ಯಕ್ಷರು ಅಮಿತ್ ಶಾ ಅವರನ್ನು ಭೇಟಿ ಮಾಡಿದ್ಯಾಕೆ.? ಈ ಮೀಟಿಂಗ್ನಲ್ಲಿ ಚರ್ಚಿಸಿದ ವಿಷಯಗಳೇನು?..
ಓದುಗರೇ, ಈ ಭೇಟಿಯ ವೇಳೆ ಪ್ರಮುಖವಾಗಿ ಎರಡು ಮೂರು ವಿಷಯಗಳ ಕುರಿತು ಚರ್ಚೆ ನಡೆಸಲಾಗಿದೆ ಎನ್ನಲಾಗಿದೆ.. ಮೊದಲನೆಯದಾಗಿ ಪಕ್ಷ ಸಂಘಟನೆ, ಬಲವರ್ಧನೆ ಹಾಗೂ ಒಂದು ವರ್ಷದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ತಮ್ಮ ನೇತೃತ್ವದಲ್ಲಿ ನಡೆದ ಹೋರಾಟದ ಕುರಿತು ಅಮಿತ್ ಶಾ ಅವರಿಗೆ ಮಾಹಿತಿ ನೀಡಿದ್ದಾರೆ ಮತ್ತು ಭವಿಷ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ಕುರಿತು ಸಲಹೆ ಸೂಚನೆ ಪಡೆದಿದ್ದಾರೆ.
ಹಾಗೇ.. ಮೀಟಿಂಗ್ನಲ್ಲಿ ಚರ್ಚಿಸಿದ ಎರಡನೇ ವಿಷಯವೆಂದರೇ, ಪಕ್ಷ ಚೌಕಟ್ಟನ್ನು ಬಿಟ್ಟು ಭಿನ್ನವಾಗಿ ವಕ್ಫ್ ವಿರುದ್ಧ ಹೋರಾಟ ನಡೆಸುತ್ತಿರುವ ಅತೃಪ್ತರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೈಕಮಾಂಡ್ ನಾಯಕರಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಅದರಲ್ಲೂ ಪ್ರಮುಖ ಭಿನ್ನಬಣದ ನಾಯಕ ಯತ್ನಾಳ್ ಅವರ ನಡೆ, ಹೇಳಿಕೆಗಳಿಂದ ಪಕ್ಷ ಸಂಘಟನೆಗಳಿಂದ ಹಿನ್ನಡೆಯಾಗುತ್ತಿದೆ. ಹೀಗಾಗಿ, ಅವರ ಕೂಡಲೇ ಕ್ರಮ ಕೈಗೊಳ್ಳಬೇಕು ಈ ಮೂಲಕ ಪಕ್ಷ ಸಂಘಟನೆ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ. ಎರಡನೇ ಹಂತದ ಹೋರಾಟಕ್ಕೆ ಸಜ್ಜಾಗುತ್ತಿದ್ದು, ಕೂಡಲೇ ಇದಕ್ಕೆ ಬ್ರೇಕ್ ಹಾಕಬೇಕು ಈ ಮೂಲಕ ಪಕ್ಷದಲ್ಲಿ ಒಗ್ಗಟ್ಟು, ಸಮನ್ವಯತೆ ಕಾಪಡಲು ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಾರೆ.
ಸದ್ಯ ರಾಜ್ಯದಲ್ಲಿ ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಮತ್ತು ಆಡಳಿತರೂಢ ಸರ್ಕಾರದ ಕೆಲ ಪ್ರಭಾವಿಗಳ ಹಿಂಬಾಲಕರ ಒತ್ತಡದಿಂದ ಈ ಪ್ರಕರಣ ಸಂಭವಿಸಿದೆ. ಈ ವಿಚಾರ ಹಿಡಿದುಕೊಂಡು ಪಕ್ಷ ನಡೆಸುತ್ತಿರುವ ಹೋರಾಟವನ್ನು ಗಮನಕ್ಕೆ ತಂದಿದ್ದಾರೆ ಎನ್ನಲಾಗಿದೆ. ಒಟ್ಟಾರೆ, ಅಮಿತ್ ಶಾ ವಿಜಯೇಂದ್ರ ಅವರ ಭೇಟಿ ಬಿಜೆಪಿಯಲ್ಲಿ ಅಷ್ಟೇ ಅಲ್ಲ, ಕಾಂಗ್ರೆಸ್ ನಲ್ಲೂ ಕುತೂಹಲ ಮೂಡಿಸಿದೆ.