ಭದ್ರಾವತಿ : ಒಂದು ಮನೆ ಸುಂದರವಾಗಿ ಇರಲು ಬಣ್ಣದ ಅವಶ್ಯಕತೆ ಬಹಳ ಮುಖ್ಯ..ಅದರಲ್ಲೂ ಮನೆಯ ಅಂದಕ್ಕೆ ಬಣ್ಣ ಹೊಡೆಯುವುದು ಸುಲಭದ ಮಾತಲ್ಲ…ಆದರೆ ಇಲ್ಲೊಬ್ಬ ವ್ಯಕ್ತಿ ಬಣ್ಣದಿಂದಲೇ ಬದುಕು ಕಟ್ಟಿಕೊಂಡು ಈಗ ವೀರಶೈವ ಲಿಂಗಾಯತ ಸಮಾಜದ ತಾಲೂಕು ನಿರ್ದೇಶಕ ಹಾಗೂ ಉಕ್ಕಿನ ನಗರಿ ಭದ್ರಾವತಿಯಲ್ಲಿ ಪ್ರತಿಷ್ಠಿತ ಸಂಸ್ಥೆಯಾದ ಶಿವ ಪತ್ತಿನ ಸಹಕಾರ ಸಂಘದ ನಿರ್ದೇಶಕ.
ಹೌದು…ಈತನ ಹೆಸರು ಮಂಜುನಾಥ, ಜನ್ನಾಪುರ ಲಿಂಗಾಯಿತ ಬೀದಿ ನಿವಾಸಿ…ಓದಿದ್ದು ಎಸ್ಸೆಸ್ಸೆಲ್ಸಿ..ಮನೆಯಲ್ಲಿ ಕಡು ಬಡತನ, ತಂದೆ ಹೊನ್ನಪ್ಪ ಎಮ್ಮೆ ಸಾಕಿ ಮಕ್ಕಳನ್ನು ಸಾಕಿದರು. ಮಂಜುನಾಥ್ ಕೂಡ ಶ್ರಮ ಜೀವಿಯಾಗಿದ್ದು, ಬಣ್ಣದ ಕಲೆ ಗೊತ್ತಿತ್ತು..ಈ ಕಲೆಯೇ ಅವರ ಬದುಕು ಉನ್ನತ ಮಟ್ಟಕ್ಕೆ ಏರಲು ಸಹಾಯವಾಯಿತು.
ಈ ಭಾಗದಲ್ಲಿ ಪೇಂಟರ್ ಮಂಜಣ್ಣ ಅಂತಲೇ ಇವರು ಫೇಮೇಸ್ ಆಗಿದ್ದು, ಇವರ ಬಳಿ ಸುಮಾರು ಹತ್ತಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಿದ್ದಾರೆ. ಇನ್ನು ಮಾನವನ ಜೀವನದಲ್ಲಿ ಬಣ್ಣಗಳಿಗೆ ವಿಶೇಷ ಮಹತ್ವವಿದ್ದು,ಇವರ ಬದುಕು ಈಗ ಬಣ್ಣದ ಬದುಕಾಗಿ ಹೊರ ಹೊಮ್ಮುತ್ತಿದೆ.
ಹೇಗಿದ್ದ ಮಂಜಣ್ಣ ಹೇಂಗಾದ ಗೊತ್ತಾ?
ಮನೆಯಲ್ಲಿ ಕಿತ್ತು ಬಡತನವಿದ್ದರೂ, ಛಲ ಬಿಡದೇ ಹಗಲು ರಾತ್ರಿ ಬಣ್ಣದ ಮನೆಯಲ್ಲಿ ಮಿಂದೆದ್ದರು…ಆಗಾಗ ಮಾತ್ರ ಪೇಂಟ್ ಕೆಲಸವಿದ್ದು, ಉಳಿದ ದಿನಗಳಲ್ಲಿ ಖಾಲಿ ಇರಬೇಕಿತ್ತು. ಕೈಯಲ್ಲಿ ಹಣವಿಲ್ಲದ ಕಾರಣ ಯಾರು ಕೂಡ ಗೌರವ ಕೊಡುತ್ತಿರಲಿಲ್ಲ..ಬರ ಬರುತ್ತಾ ಮನೆ ಕಟ್ಟೋರು ಜಾಸ್ತಿಯಾದರೂ, ಗುಣಮಟ್ಟದ ಕೆಲಸ ಮಾಡುತ್ತಿದ್ದ ಕಾರಣ ಆರ್ಡರ್ ಕೂಡ ಹೆಚ್ಚು ಬಂದವು…ಅಲ್ಲಿಂದ ಮುಂದುವರೆದ ಮಂಜಣ್ಣ ಹಿಂತಿರುಗಿ ನೋಡಿದ್ದೇ ಇಲ್ಲ. ಮುಟ್ಟಿದ್ದೇಲ್ಲ ಚಿನ್ನವಾಯಿತು. ಏರಿಯಾದಲ್ಲಿ ಒಂದಿಷ್ಟು ಸಂಪರ್ಕ ಹೆಚ್ಚಾಯಿತು. ಸ್ನೇಹಿತರು ಕೈ ಹಿಡಿದರು…ನಂತರ ಮಂಜಣ್ಣ ಹೊರಟಿದ್ದು ರಾಜಕೀಯ ಕಡೆಗೆ..
ಕಾಂಗ್ರೆಸ್ ನಿಷ್ಠಾವಂತ ಕಾರ್ಯಕರ್ತ
ಭದ್ರಾವತಿಯಲ್ಲಿ ಪಕ್ಷ ರಾಜಕಾರಣಕ್ಕಿಂತ ಜಾತಿ ರಾಜಾಕಾರಣ ಹೆಚ್ಚಾಗಿದ್ದು, ಮಂಜಣ್ಣ ಶಾಸಕ ಬಿ.ಕೆ.ಸಂಗಮೇಶ್ ಗೆ ಬೆಂಬಲ ನೀಡುವ ಮೂಲಕ ರಾಜಕಾರಣಕ್ಕೆ ಎಂಟ್ರಿಯಾದರು. ಎರಡು ವಿಧಾನ ಸಭಾ ಚುನಾವಣೆಯಲ್ಲಿ ಶಾಸಕ ಬಿ.ಕೆ.ಸಂಗಮೇಶ್ ಪರ ನಿಂತು ಏರಿಯಾ ಜನರ ಮತ ಹಾಕಿಸುವಲ್ಲಿ ಪ್ರಮುಖ ಪಾತ್ರವಹಿಸಿದರು.ಇವರಿಗೆ ಏರಿಯಾದ ರಮೇಶ್ , ಹರೀಶ್, ಶರವಣ, ಹಾಲು ಚೆನ್ನಪ್ಪ, ಶಿವರಾಜ್ , ಶ್ರೀಕಂಠ ಸಾಥ್ ನೀಡಿದರು…ಪರಿಣಾಮ ತಾಲೂಕು ಕಾಂಗ್ರೆಸ್ ನಲ್ಲಿ ಉತ್ತಮ ಸ್ಥಾನ ದೊರೆಯಿತು. ಇದಾದ ಬಳಿಕ ಮಂಜಣ್ಣ ಎಂಟ್ರಿ ಕೊಟ್ಟಿದ್ದು, ಸಂಘ ಸಂಸ್ಥೆಗಳ ಚುನಾವಣೆಗೆ.
ವೀರಶೈವ ಲಿಂಗಾಯಿತ ಮಹಾಸಭೆ ಚುನಾವಣೆಗೆ ಸ್ಪರ್ಧೆ
ರಾಜಕೀಯ ನಂತರ ಮಂಜಣ್ಣ ವೀರಶೈವ ಸಮಾಜದ ತಾಲೂಕು ನಿರ್ದೇಶಕ ಚುನಾವಣೆಗೆ ನಿಂತರು. ಸುಮಾರು ವರ್ಷಗಳ ನಂತರ ಭದ್ರಾವತಿಯಲ್ಲಿ ವೀರಶೈವ ಲಿಂಗಾಯಿತ ಮಹಾಸಭಾ ಚುನಾವಣೆ ನಡೆಯಿತು. ಇದರಲ್ಲಿ ಕೂಡ ಪ್ರತ್ಯೇಕ ಎರಡು ಬಣಗಳಿದ್ದು, ಭಾರೀ ಪೈಪೋಟಿ ಏರ್ಪಟ್ಟಿತ್ತು…ಈ ನಡುವೆ ಮಂಜಣ್ಣ ನಿರ್ದೇಶಕನಾಗಿ ಆಯ್ಕೆಯಾಗಿದ್ದು ವಿಶೇಷ…ಇಲ್ಲಿಂದ ಮಂಜಣ್ಣ ಹೊರಟಿದ್ದು ಸಹಕಾರಿ ಕ್ಷೇತ್ರ.
ಪ್ರತಿಷ್ಠಿತ ಶಿವ ಪತ್ತಿನ ಸಹಕಾರ ಸಂಘಕ್ಕೆ ಅವಿರೋಧ ಆಯ್ಕೆ
ಭದ್ರಾವತಿಯಲ್ಲಿ ಅಧ್ಯಕ್ಷ ಸತೀಶ್ ನೇತೃತ್ವದಲ್ಲಿ ಯಾವುದೇ ತಂಟೆ, ತಕರಾರು ಇಲ್ಲದೇ ಲಾಭದ ಸಂಸ್ಥೆಯಾಗಿ, ಸ್ವಂತ ಕಟ್ಟಡ ಹೊಂದಿರುವ ಸಂಸ್ಥೆ ಶಿವ ಪತ್ತಿನ ಸಹಕಾರ ಸಂಘವಾಗಿದ್ದು, ಇತ್ತೀಚೆಗೆ ಚುನಾವಣೆ ಘೋಷಣೆ ಆಗಿತ್ತು..ಈ ನಡುವೆ ಲಿಂಗಾಯತ ಸಮಾಜದಲ್ಲಿ ಗೆದ್ದು ನಿರ್ದೇಶಕನಾದ ಮಂಜಣ್ಣ ಸಹಕಾರಿ ಸಂಸ್ಥೆಗೆ ಕಾಲಿಟ್ಟು ಅವಿರೋಧವಾಗಿ ನಿರ್ದೇಶಕನಾಗಿ ಆಯ್ಕೆಯಾದರು..ಮುಂದಿನ ದಿನಗಳಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ನಗರಸಭೆ ಚುನಾವಣೆ ನಡೆಯಲಿದ್ದು, ಮಂಜಣ್ಣ ಕಣ್ಣು ಎತ್ತ ಕಡೆ ಎಂದು ಕಾದು ನೋಡಬೇಕಿದೆ.
ಸಮಾಜ ಮುಖಿ ಕೆಲಸ
ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದಂತೆ ಇರುವ ಮಂಜಣ್ಣ ಏರಿಯಾದಲ್ಲಿ ಸಾಕಷ್ಟು ಸಮಾಜ ಕೆಲಸ ಮಾಡಿದ್ದಾರೆ...ತನ್ನ ವ್ಯಾಪ್ತಿಯಲ್ಲಿ ಬರುವ ಅನೇಕ ವೃದ್ದ ರಿಗೆ ಮಾಸಾಶನ, ಬಡವರಿಗೆ ಬಿಪಿಎಲ್ ಕಾರ್ಡ್, ಕೈಲಾಗದವರಿಗೆ ತಹಸೀಲ್ದಾರ್ , ನಗರಸಭೆಯಲ್ಲಿ ಸಹಾಯ..ಹೀಗೆ ಹತ್ತಾರು ಕೆಲಸದಲ್ಲಿ ಮಂಜಣ್ಣ ತೊಡಗಿದ್ದಾರೆ. ಒಟ್ಟಾರೆ ಪೇಂಟರ್ ಮಂಜಣ್ಣ ಈಗ ಉತ್ತುಂಗ ಮಟ್ಟಕ್ಕೇ ಏರುತ್ತಿದ್ದರೂ, ಏಣಿ ಹತ್ತುವಾಗ ಹಿಂದೆಯಿಂದ ಬೀಳೊಸೋರು ಇದ್ದಾರೆ..ಆ ಬಗ್ಗೆ ಎಚ್ಚರದಿಂದ ಇರುವ ಅವಶ್ಯಕತೆ ಇದೆ.. ಇನ್ನುಪ್ರಕೃತಿಯಲ್ಲಿ ಇರುವ ಎಲ್ಲಾ ಬಣ್ಣಗಳಿಂದ ಕೆಲವು ಬಣ್ಣಗಳನ್ನು ಮಾತ್ರ ಮಂಜಣ್ಣ ಆರಿಸಿಕೊಳ್ಳಬೇಕಿದ್ದು, ಬಣ್ಣಗಳು ಸೌಂದರ್ಯಕ್ಕೆ ಮೆರಗು ತರುವಂತೆ ಮಂಜಣ್ಣ ಸಮಾಜಮುಖಿ ಬದುಕು ಹೀಗೆ ಮುಂದುವರೆಯಲಿ ಎಂಬುದು ಏರಿಯಾ ಜನರ ಅಂಬೋಣ.