ಹೊಸವರ್ಷಾಚರಣೆ ಮುನ್ನ ಪೊಲೀಸರ ಭರ್ಜರಿ ಕಾರ್ಯಾಚರಣೆ 24 ಕೋಟಿ ಮೌಲ್ಯದ 12 ಕೆಜಿ ಎಂಡಿಎ ಕ್ರಿಸ್ಟಲ್
ಜಪ್ತಿ.
ಬೆಂಗಳೂರು.
ಆಕೆ ನೈಜರೀಯಾದಿಂದ ಬಂದು ದಿನಸಿ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದಳೆಂದು ಎಲ್ಲರೂ ತಿಳಿದುಕೊಂಡಿದ್ದರು. ಆದರೆ ಈ ಮಹಿಳೆ ಮಾರಾಟ ಮಾಡುತ್ತಿದ್ದದ್ದು ದಿನಸಿ ಸಾಮಾಗ್ರಿಗಳು ಅಲ್ಲ ಎಂಡಿಎಂ ಮಾದಕ ವಸ್ತುಗಳು.
ಹೊಸವರ್ಷಾಚರಣೆಗೆ ಭರ್ಜರಿ ಸಿದ್ದತೆ ನಡೆಯುವ ಮುನ್ನವೇ 24 ಕೋಟಿ ಮೌಲ್ಯದ 12 ಕೆಜಿ ಎಂಡಿಎಂ ಕ್ರಿಸ್ಟಲ್
ಮಾದಕವಸ್ತುಗಳು ಸಿಕ್ಕಿದ್ದು, ಬೆಂಗಳೂರು ಒಂದಿಷ್ಟು ಉಸಿರುಬಿಡುವಂತಾಗಿದೆ. ನೈಜಿರಿಯಾದ ರೋಸೆಲೈಮ್(40) ಬಂಧಿತ ವಿದೇಶಿ ಮಹಿಳೆ. ಈಕೆ ವಿದೇಶಿ ಪ್ರಜೆಗಳಿಗೆ ಬೇಕಾದ ಆಹಾರ ಪದಾರ್ಥಗಳನ್ನು ಮಾರಾಟ ಮಾಡುವ ಅಂಗಡಿಯನ್ನಿಟ್ಟುಕೊAಡು ಸಾಫ್ಟವೇರ್ ಎಂಜಿನಿಯರ್, ವಿದೇಶಿ ಪ್ರಜೆಗಳಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದಳು. ಇನ್ನು ಡ್ರಗ್ಸ್ ಮಾರಾಟ ಮಾಡಲು ಮುಂಬೈನಿAದ ಸರಬರಾಜು ಮಾಡುತ್ತಿದ್ದ ಮತ್ತೊಬ್ಬ ನೈಜಿರಿಯಾ ಮೂಲದ ಜ್ಯೂಲಿಯೆಟ್ ಬಂಧನಕ್ಕೆ ತೀವ್ರ ಶೋಧ ನಡೆಸಲಾಗಿದೆ.
ಬಂಧಿತ ಮಹಿಳೆಯಿಂದ 24 ಕೋಟಿ ಮೌಲ್ಯದ ಬಿಳಿ ಹಾಗೂ ಹಳದಿ ಬಣ್ಣದ 12 ಕೆಜಿ ಎಂಡಿಎಂ ಕ್ರಿಸ್ಟಲ್, ಒಂದು ಮೊಬೈಲ್, 70 ಸಿಮ್ ಕಾರ್ಡ್ ಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆಯೆಂದು ಟಿಸಿ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಟಿಸಿಪಾಳ್ಯದ ಅಂಗಡಿಯಲ್ಲಿ ಮಾರಾಟ.
ಕಳೆದ ಡಿ.13 ರಂದು ಕೆ.ಆರ್.ಪುರದ ಟಿ.ಸಿ ಪಾಳ್ಯದಲ್ಲಿ ಆರೋಪಿಯು ಅಂಗಡಿಯೊAದನ್ನು ಇಟ್ಟುಕೊಂಡು, ವಿದೇಶಿ ಪ್ರಜೆಗಳಿಗೆ ಬೇಕಾದ ಆಹಾರ ಪದಾರ್ಥಗಳ ಮಾರಾಟದ ಜೊತೆಗೆ ಡ್ರಗ್ಸ್ ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಆಧರಿಸಿ ದಾಳಿ ಬಂಧಿಸಲಾಗಿದೆ.
ಆರೋಪಿಯು ವಿಚಾರಣೆಯಲ್ಲಿ ಮೋಜಿನ ಜೀವನ ನಡೆಸಲು ಕಡಿಮೆ ಸಮಯದಲ್ಲಿ ಹೆಚ್ಚಿನ ಹಣ ಗಳಿಸಲು ಮುಂಬೈನಲ್ಲಿ ನೆಲೆಸಿದ ತಮ್ಮದೇ ದೇಶದ ಮಹಿಳೆಯೊಬ್ಬಳಿಂದ ಎಂಡಿಎಂ ಕ್ರಿಸ್ಟಲ್ನ್ನು ಕಡಿಮೆ ಬೆಲೆಗೆ ತಂದು ಕೊಡುತ್ತಿದ್ದು, ಅದನ್ನು ವಿದೇಶಿ ಪ್ರಜೆಗಳಿಗೆ, ಪರಿಚಿತ ಗಿರಾಕಿಗಳಿಗೆ, ಕಾಲೇಜು ವಿದ್ಯಾರ್ಥಿಗಳಿಗೆ, ಸಾಫ್ಟ್ ವೇರ್ ಉದ್ಯೋಗಿಗಳಿಗೆ ಅಧಿಕ ಬೆಲೆಗೆ ಮಾರಾಟ ಮಾಡಿ ಅಕ್ರಮ ಸಂಪಾದನೆಯಲ್ಲಿ ತೊಡಗಿರುವುದನ್ನು ಬಾಯ್ಬಿಟ್ಟಿದ್ದಾಳೆ.
ಇಬ್ಬರ ವಿರುದ್ದ ಕೆಆರ್ ಪುರಂ ಠಾಣೆಯಲ್ಲಿ ಎನ್ಡಿಪಿಎಸ್ ಮತ್ತು ವಿದೇಶಿಯರ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ ಎಂದು ಕಮೀಷನರ್ ದಯಾನಂದ್ ತಿಳಿಸಿದ್ದಾರೆ.
ವೀಸಾ ಅವಧಿ ಮುಗಿದಿದ್ದರೂ ಬೆಂಗಳೂರಿನಲ್ಲಿಯೇ ಇದ್ದ ವಿದೇಶಿ ಮಹಿಳೆ.
ಐದು ವರ್ಷಗಳ ಹಿಂದೆ ವ್ಯವಹಾರಿಕ ವೀಸಾ ಪಡೆದು ಬೆಂಗಳೂರಿಗೆ ಬಂದಿರುವ ಆರೋಪಿತೆ, ವೀಸಾ ಅವಧಿ ಮುಗಿದರೂ ಅಕ್ರಮವಾಗಿ ಇಲ್ಲಿಯೇ ವಾಸವಿದ್ದಳು. ಸ್ಥಳೀಯವಾಗಿ ವಿದೇಶಿ ಪ್ರಜೆಗಳಿಗೆ ಬೇಕಾಗುವ ಆಹಾರ ವಸ್ತುಗಳನ್ನು ಮಾರಾಟ ಮಾಡುತ್ತಾ ಜತೆಗೆ ಮಾದಕ ದ್ರವ್ಯಗಳನ್ನು ಮಾರಾಟ ಮಾಡುತ್ತಿದ್ದಳು.