ಶಿವಮೊಗ್ಗ
ಡಿ. 15 ರಂದು ನಗರದ ಅಂಬೇಡ್ಕರ್ ಭವನದಲ್ಲಿ ಸುರೇಂದ್ರ ಶಿವಮೊಗ್ಗ ನೇತೃತ್ವದ ಐಶ್ವರ್ಯ ಎಸ್.ಪಿ. ಪ್ರೊಡಕ್ಷನ್ ಸಂಸ್ಥೆಯ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಅದರ ಭಾಗವಾಗಿ ದಿನವೀಡಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಎಸ್.ಪಿ. ಪ್ರೊಡಕ್ಷನ್ ಸಂಸ್ಥೆಯ ಮುಖ್ಯಸ್ಥರಾದ ಸುರೇಂದ್ರ ತಿಳಿಸಿದ್ದಾರೆ.
ಅವರು ತಂಡದ ಹೊಸ ಸದಸ್ಯರು ಹಾಗೂ ಪೋಷಕರ ಮಾರ್ಗದರ್ಶನ ತಂಡದವರೊಂದಿಗೆ ಸಭೆ ನಡೆಸಿ ಮಾತನಾಡಿದರು. ಅಂದು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಅಂಬೇಡ್ಕರ್ ಭವನದಲ್ಲಿ ನೃತ್ಯ ಸಿರಿ-2024 ಕಾರ್ಯಕ್ರಮ ನಡೆಯಲಿದೆ.
ಕನ್ನಡ ಚಿತ್ರರಂಗದ ಹೆಸರಾಂತ ಕಲಾವಿದ ಗುಬ್ಬಿ ನಟರಾಜ್ ಅವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಮಾಜ ಸೇವಕ ಹಾಗೂ ಸ್ಟ್ರಕಾನ್ ಸಂಸ್ಥೆಯ ಮಾಲೀಕ ಡಾ. ರಾಬಿನ್ ಮ್ಯಾಥ್ಯೂಸ್, ಸಮಾಜ ಸೇವಕಿ ಪುಷ್ಪಾ ಶಿವಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ , ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ ರಾಜ್ಯಾಧ್ಯಕ್ಷ ಡಾ. ರವಿ ಶೆಟ್ಟಿ ಬೈಂದೂರು ಭಾಗವಹಿಸಲಿದ್ದಾರೆ ಎಂದರು.
ಆ ಬಳಿಕ ನೃತ್ಯ ಸ್ಪರ್ಧೆ, ಜೀ ಕನ್ನಡ ವಾಹಿನಿಯ ಸರಿಗಮಪ ಹಾಡುಗಾರರಿಂದ ಹಾಡುಗಾರಿಕೆ, ಆಯ್ಕೆ ಮಾಡಿದ ಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಣೆ ನಡೆಯಲಿದೆ. ಮಧ್ಯಾಹ್ನ ಚಲನಚಿತ್ರ, ಧಾರಾವಾಹಿ, ಮಹಾನಟಿ, ಕಾಮಿಡಿ ಕಿಲಾಡಿಗಳು ಕಲಾವಿದರಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ.
ಸಂಜೆ 5.40ಕ್ಕೆ ಐಶ್ವರ್ಯ ಎಸ್.ಪಿ. ಪ್ರೊಡಕ್ಷನ್ ಸಂಸ್ಥೆಯ ಉದ್ಘಾಟನೆ ಸಮಾರಂಭ ನಡೆಯಲಿದೆ. ಪೋಷಕ ಕಲಾವಿದರ ಸಂಘದ ಅಧ್ಯಕ್ಷರಾದ ಪದ್ಮಿನಿ ನಂದಾ ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್ ಕುಮಾರ್, ಮಹಾನಗರ ಪಾಲಿಕೆ ಆಯುಕ್ತರಾದ ಕವಿತಾ ಯೋಗಪ್ಪನವರ್, ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಮಾರುತಿ, ಭದ್ರಾವತಿ ಶಾಸಕ ಹಾಗೂ ಕೆಆರ್ ಐಡಿ ಎಲ್ ಅಧ್ಯಕ್ಷರಾದ ಬಿ.ಕೆ. ಸಂಗಮೇಶ್ವರ್ ಅವರು ಭಾಗವಹಿಸಲಿದ್ದಾರೆಂದು ಐಶ್ವರ್ಯ ಶಿವಮೊಗ್ಗ ತಿಳಿಸಿದ್ದಾರೆ.
ಇದೇ ವೇಳೆ ಸಾಧನ ಸಿರಿ ಕಾರ್ಯಕ್ರಮದಡಿ, ವಿವಿಧ ಕ್ಷೇತ್ರದ ವಿಶೇಷ ಸಾಧಕರಿಗೆ ಗೌರವ ಸನ್ಮಾನ, ಪೆÇೀಷಕ ಕಲಾವಿದರಿಗೆ ಸನ್ಮಾನ, ನೃತ್ಯ ಸಿರಿ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ ಎಂದಿದ್ದಾರೆ.
ಹಾಗೆಯೇ ಪೋಷಕ ಸಲಹೆ ಸದಸ್ಯರಾದ ಆನಂದ, ಮೈಕೆಲ್ ಕೆನತ್, ರಾಜೇಂದ್ರ ಎಸ್. ಶೆಟ್ಟಿ, ಮಂಜುನಾಥ್, ಪ್ರೇಮಾ ಎನ್ ಶೆಟ್ಟಿ, ಜಯಮಾಲಾ ಅರ್. ಶೆಟ್ಟಿ, ದೀಪಿಕಾ, ನಾದಿನಿ, ರೇಖಾ ಕೃಷ್ಣಮೂರ್ತಿ ಸಾಗರ, ಶಶಿಕಲಾ, ಲಕ್ಷ್ಮೀ ನಾಗೇಶ್, ಅಣ್ಣಪ್ಪ ಹಾಗೂ ಮಹಾಲಕ್ಷ್ಮೀ ಹಾಜರಿರುವರು ಎಂದು ಅವರು ತಿಳಿಸಿದ್ದಾರೆ