ಆಂಧ್ರಪ್ರದೇಶ.
ಸಾಲ ಒಂದು ರೀತಿ ಶೂಲ ಇದ್ದಂತೆ ಅಂತಾರೆ. ಸಾಲ ಎಂಬುದು ತುಂಬಾ ಕೆಟ್ಟದ್ದು ಒಮ್ಮೆ ಸಾಲದ ವ್ಯೂಹದೊಳಗೆ ಸಿಲುಕಿದ್ರೆ ಅದರಿಂದ ಹೊರಬರೋದು ಬಹಳ ಕಷ್ಟ. ಆದ್ರೆ ಈ ಆನ್ಲೈನ್ APP ಗಳಲ್ಲಿ ಅಪ್ಪಿ ತಪ್ಪಿ ಸಾಲ ತಗೊಂಡೂ ಬದುಕಿದ್ದಾಗಲೇ ನರಕ ತೋರಿಸ್ತಾರೆ ಅಥವಾ ಬದುಕೆ ಬೇಡ ಎನ್ನಿಸುವಂತೆ ಮಾಡಿಬಿಡ್ತಾರೆ.
ಲೋನ್ ಅಪ್ಲಿಕೇಶನ್ ನಲ್ಲಿ ಕೇವಲ ಎರಡು ಸಾವಿರ ಸಾಲ ಪಡೆದ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ನರೇಂದ್ರ ಎಂಬ ವ್ಯಕ್ತಿ app ಸಿಬ್ಬಂದಿಯ ಕಿರುಕುಳದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ ನರೇಂದ್ರ ಅಕ್ಟೋಬರ್ ನಲ್ಲಿ ಅಖಿಲ ಎಂಬ ಯುವತಿಯನ್ನು ಮದುವೆಯಾಗಿದ್ದರು.
ವೃತ್ತಿಯಲ್ಲಿ ಮೀನುಗಾರ ಆಗಿದ್ದ ನರೇಂದ್ರ ಇತ್ತೀಚೆಗೆ ಹವಾಮಾನ ವೈಪರೀತ್ಯದಿಂದ ಸಮುದ್ರಕ್ಕಿಳಿಯಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಅಪ್ಲಿಕೇಶನ್ ನಲ್ಲಿ ನರೇಂದ್ರ ೨ ಸಾವಿರ ಲೋನ್ ತಗೊಂಡಿದ್ರು.
ಆದ್ರೆ ಇದನ್ನು ಪಾವತಿ ಮಾಡಲು ತಡವಾಗಿದ್ದಕ್ಕೆ ಈ ಅಪ್ಲಿಕೇಶನ್ ಸಿಬ್ಬಂದಿ ನರೇಂದ್ರ ಪತ್ನಿಯ ಫೋಟೋಗಳನ್ನು ಅಶ್ಲೀಲವಾಗಿ ಮಾರ್ಫ್ ಮಾಡಿ ನರೇಂದ್ರನ ಸ್ನೇಹಿತರು ಮತ್ತು ಸಂಬಂಧಿಕರಿಗೆ ಕಳುಹಿಸಿದ್ದಾರೆ. ಇದ್ರಿಂದ ಮನನೊಂದ ನರೇಂದ್ರ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಈ ರೀತಿಯ ಲೋನ್ ಅಪ್ಲಿಕೇಶನ್ ಗಳ ಕಾಟದಿಂದ,ಆತ್ಮಹತ್ಯೆಗೆ ಶರಣಾಗುವ ಪ್ರಕರಣಗಳು ಮೇಲಿಂದ ಮೇಲೆ ವರದಿಯಾಗುತ್ತಲೇ ಇದ್ದು ಕಾನೂನಾತ್ಮಕವಾಗಿ ಇದಕ್ಕೆ ಕಡಿವಾಣ ಹಾಕದಿದ್ದಲ್ಲಿ ಅಮಾಯಕರು ಪ್ರಾಣ ಕಳೆದುಕೊಳ್ಳೋದ್ರಲ್ಲಿ ಸಂಶಯವಿಲ್ಲ.