ದಾವಣಗೆರೆ,
; ದಾವಣಗೆರೆ ಸ್ಮಾರ್ಟ್ ಸಿಟಿ ಯೋಜನೆಗಳ ಯಶಸ್ಸಿನ ಫಲಶೃತಿಗೆ ಇಲ್ಲಿಯವರೆಗೂ 10 ಪ್ರಶಸ್ತಿಗಳು ಲಭಿಸಿವೆ. ಅದರಲ್ಲೂ ಕಳೆದ 1 ವರ್ಷದಲ್ಲಿ 4 ಪ್ರಶಸ್ತಿಗಳು ದಾವಣಗೆರೆ ಸ್ಮಾರ್ಟ್ ಸಿಟಿ ಮುಡಿಗೇರಿದ್ದು ಸಂತೋಷ ತಂದಿದೆ ಎಂದು ಗಣಿ, ಭೂವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ ಹೇಳಿದರು.
ಸ್ಮಾರ್ಟ್ ಸಿಟಿ ಅಧಿಕಾರಿಗಳನ್ನು ಅಭಿನಂದಿಸಿ ಮಾತನಾಡಿದ ಅವರು, ಕಳೆದ 1 ವರ್ಷದಲ್ಲಿ ಐಸಿಟಿ ಯೋಜನೆಯ ಯಶಸ್ಸಿಗೆ 3 ರಾಷ್ಟ್ರ ಮಟ್ಟದ ಪ್ರಶಸ್ತಿಗಳಾದ `ಐಎಂಎಎಫ್ 2.0 ಸೈಕಲ್ 1 ‘ಪಬ್ಲಿಕ್ ಸೇಫ್ಟಿ ಇನ್ನೊವೇಷನ್, `ಬೆಸ್ಟ್ ಸ್ಮಾರ್ಟ್ ಸಿಟಿ ಇನ್ಫ್ರಾಸ್ಟ್ರಕ್ಚರ್’ ಲಭಿಸಿದೆ ಹಾಗೂ ಕೆಎಸ್ಸಾರ್ಟಿಸಿ ಮುಖ್ಯ ಬಸ್ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅಲ್ಟ್ರಾ ಟೆಕ್ ಕಂಪನಿಯಿಂದ ಕೊಡಲ್ಪಡುವ 1 ರಾಜ್ಯ ಮಟ್ಟದ `ಔಟ್ಸ್ಟ್ಯಾಂಡಿಂಗ್ ಕಾಂಕ್ರೀಟ್ ಸ್ಟ್ರಕ್ಚರ್ ಆಫ್ ನಾರ್ಥ್ ಕರ್ನಾಟಕ’ (ಇನ್ಫ್ರಾ ಕೆಟಗರಿ) ಪ್ರಶಸ್ತಿ ಲಭಿಸಿರುವುದು ಸ್ಮಾರ್ಟ್ ಸಿಟಿಗೆ ಹೆಮ್ಮೆಯ ವಿಷಯ ಎಂದರು.
ನಂತರ ಸ್ಮಾರ್ಟ್ ಸಿಟಿ ಕಾಮಗಾರಿಗಳ ಕುರಿತು ಚರ್ಚಿಸಿದ ಸಚಿವರು, ಬಾಕಿ ಉಳಿದ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಗುಣಮಟ್ಟದೊಂದಿಗೆ ಪೂರ್ಣಗೊಳಿಸುವಂತೆ ಸೂಚಿಸಿದರು.
ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅವರು, ಸ್ಮಾರ್ಟ್ ಸಿಟಿ ಕಾರ್ಯಕ್ಕೆ ಪ್ರಶಸ್ತಿ ಬಂದಿರುವುದಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ವ್ಯವಸ್ಥಾಪಕ ನಿರ್ದೇಶಕ ವೀರೇಶಕುಮಾರ, ಸ್ವತಂತ್ರ ನಿರ್ದೇಶಕ ಎಂ. ನಾಗರಾಜ್, ಪ್ರಧಾನ ವ್ಯವಸ್ಥಾಪಕ (ತಾಂತ್ರಿಕ) ಕೃಷ್ಣಪ್ರಸಾದ್ ಹೆಚ್.ಎನ್., ಡಿಜಿಎಂ-ಐಟಿ ಶ್ರೀಮತಿ ಮಮತಾ, ಜಲವಾಹಿನಿ ಪಿಎಂಸಿ ಟೀಮ್ ಲೀಡ್ ಉಮಾಪತಿ ಹೊಂಬಣ್ಣ, ಮತ್ತಿತರರು ಉಪಸ್ಥಿತರಿದ್ದರು