ದಾವಣಗೆರೆ : ರಾಜ್ಯದ ಜನತೆಗೆ ಅನ್ಯಾಯ ಆಗ್ತಿರುವ ವಕ್ಫ್ ಕರಾಳ ಕಾನೂನು ಹೋಗಬೇಕು ಅಂತಾ ಹೋರಾಟ ಮಾಡುತ್ತಿದ್ದೇವೆ. ನಮ್ಮ ಈ ಹೋರಾಟವು ದಾವಣಗೆರೆಯಲ್ಲಿ ಮುಕ್ತಾಯಗೊಳ್ಳಲಿದೆ.ದೆಹಲಿಯ ವರಿಷ್ಠರ ಭೇಟಿ ನಂತರ ಕೊನೆಗೆ ದಾವಣಗೆರೆಯಲ್ಲಿ ದೊಡ್ಡ ಹಿಂದೂ ಸಮಾವೇಶ ಮಾಡಿ 10 ಲಕ್ಷಕ್ಕೂ ಹೆಚ್ಚು ಜನರನ್ನು ಸೇರಿಸುತ್ತೇವೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಾವೇಶವನ್ನು ಬಿಜೆಪಿಯಿಂದಲೇ ಮಾಡುತ್ತೇವೆ. ಈ ಸಮಾವೇಶಕ್ಕೆ ಬೆಳಗಾವಿ ಜಿಲ್ಲೆಯ ಬಿಜೆಪಿ ಕಾರ್ಯಕರ್ತರು ಒಂದು ಕೋಟಿ ನಿಧಿ ಕೊಡ್ತೇವಿ ಅಂತಾ ವಾಗ್ದಾನ ಮಾಡಿದ್ದಾರೆ.
ನಾನು ಒಬ್ಬನೇ ಅಲ್ಲ, ಯತ್ನಾಳ್, ಜೊಲ್ಲೆ ಅವರು ಖರ್ಚು ಮಾಡಬೇಕು ಎಂದು ಹೇಳಿದರು. ಬೀದರ್ ಜಿಲ್ಲೆಯಿಂದ ಪ್ರಾರಂಭವಾದ ಹೋರಾಟ ಇಂದು ಮುಕ್ತಾಯ ಆಗುತ್ತೆ.
ದೆಹಲಿಗೆ ಹೋಗಿ ಚರ್ಚೆ ಮಾಡಿ ಎರಡನೇ ಹಂತದ ಹೋರಾಟ ಪ್ರಕಟ ಮಾಡುತ್ತೇವೆ. ಬೀದರ್, ರಾಯಚೂರು,ಯಾ ದಗಿರಿಯಲ್ಲಿ ಬಹಳ ಅನಾಹುತ ಆಗುವಂತಹದ್ದು ಕಂಡು ಬಂದಿದೆ.
ವಕ್ಫ್ ಅನ್ನೋದು ಇಷ್ಟು ಕೆಟ್ಟ ಕಾನೂನು ಅಂ ತಾ ಗೊತ್ತಿರಲಿಲ್ಲ. ಯತ್ನಾಳ್ ಅವರು ಆರಂಭಿಸಿದ ಮೇಲೆ ನಮಗೆ ಗೊತ್ತಾಯಿತು. ಇದು ಸಂಪೂರ್ಣವಾಗಿ ಭಾರತದಿಂದ ತೊಲಗಬೇಕು ಅಂತಾ ಪ್ರಧಾನಿಯವರು ಮಂಡನೆ ಮಾಡಿದ್ದಾರೆ.ದೇಶದಲ್ಲಿ ವಕ್ಫ್ ದಿಂದ ಎಷ್ಟು ಅನ್ಯಾಯ ಆಗಬೇಕು. ಮುಸ್ಲಿಂರ ವಿರೋಧ ಮಾಡುತ್ತಿದ್ದೇವೆ ಅಂತಾ ಕೆಲವರು ಮಾತಾಡ್ತಿದ್ದಾರೆ. ಇದರಲ್ಲಿ ಮುಸ್ಲಿಂರ ಭೂಮಿಯನ್ನ ಮುಸ್ಲಿಂ ನಾಯಕರು ತಿಂದಿದ್ದಾರೆ.ಕರ್ನಾಟಕದಲ್ಲಿ ಮಾತ್ರಅಲ್ಲಾ ಇಡೀ ದೇಶದ ಮೂಲೆ ಮೂಲೆಗೆ ಅನ್ಯಾಯ ಆಗಿದೆ ಎಂದು ಹೇಳಿದರು.
ರಾಜ್ಯದ ಜನತೆಗೆ ಅನ್ಯಾಯ ಆಗ್ತಿರುವ ವಕ್ಫ್ ಕರಾಳ ಕಾನೂನು ಹೋಗಬೇಕು ಅಂತಾ ಹೋರಾಟ ಮಾಡುತ್ತಿದ್ದೇದೆಹಲಿಗೆ ಹೋಗಿ ಭೇಟಿಯಾಗಿ ವರದಿ ನೀಡುತ್ತೇವೆ. ನಂತರ ನಮ್ಮ ತಂಡ ಯಾರು ಯಾರಿಗೆ ಭೇಟಿಯಾಗಿ ಮನವಿ ಕೊಡಬೇಕು ಅಂತಾ ತಿಳಿಸುತ್ತೇವೆ.ಕೊನೆಗೆ ದಾವಣಗೆರೆಯಲ್ಲಿ ದೊಡ್ಡ ಸಮಾವೇಶವನ್ನ ಬಿಜೆಪಿಯಿಂದ ಮಾಡ್ತೇವಿ ಎಂದಿದ್ದಾರೆ.
ಕರ್ನಾಟಕದಲ್ಲಿರುವ ಕಾಂಗ್ರೆಸ್ ಸರ್ಕಾರ ವಕ್ಫ್ ಮಾಸ್ಟರ್ ಮೈಂಡ್. ವಕ್ಫ್ ಹೋರಾಟದ ಬಗ್ಗೆ ಎಲ್ಲರೂ ಗಟ್ಟಿಯಾಗಿ ನಿಲ್ಲೋಣ. ಬೆಳಗಾವಿ ಜಿಲ್ಲೆ ಹೋರಾಟದ ನೆಲ. ವಿರೋಧಿಗಳ ಸುಳ್ಳು ಪ್ರಚಾರಕ್ಕೆ ಕಿವಿಗೊಡಬಾರದು. ಯಾರು ಸ್ವಾರ್ಥಕ್ಕಾಗಿ ದೆಹಲಿಗೆ ಹೋಗ್ತಾರೆ, ಮನೆಯಲ್ಲಿ ಕುಡ್ತಾರೆ ನೋಡಬೇಕು
ಎಂದು ಟಾಂಗ್ ಕೊಟ್ಟರು.