ಕಬ್ಬಿಗೆ 5500 ಬೆಂಬಲ ಬೆಲೆ ನಿಗದಿ ಮಾಡಬೇಕೆಂದು ಒತ್ತಾಯಿಸಿ ಕರ್ನಾಟಕ ಕಬ್ಬು ಬೆಳೆಗಾರರ ಸಂಘದಿಂದ ಡಿ.12 ರಂದು ಬೆಳಗ್ಗೆ 11 ಕ್ಕೆ ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧ ಚಲೋ
ದಾವಣಗೆರೆ. ; ಕಬ್ಬಿಗೆ 5500 ಬೆಂಬಲ ಬೆಲೆ ನಿಗದಿ ಮಾಡಬೇಕೆಂದು ಒತ್ತಾಯಿಸಿ ಕರ್ನಾಟಕ ಕಬ್ಬು ಬೆಳೆಗಾರರ ಸಂಘದಿಂದ ಡಿ.12 ರಂದು ಬೆಳಗ್ಗೆ 11 ಕ್ಕೆ ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಎನ್.ಎಲ್ ಭರತ್ ರಾಜ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಶೇ.9.50 ಸಕ್ಕರೆ ಇಳುವರಿ ಆಧಾರದಲ್ಲಿ ಟನ್ ಕಬ್ಬಿಗೆ 5500 ರೂ ಬೆಂಬಲ ಬೆಲೆ ನಿಗದಿ ಮಾಡಬೇಕು. ಕರ್ನಾಟಕ ಕಬ್ಬು ಖರೀದಿ ಮತ್ತು ಸರಬರಾಜು ಅದಿನಿಯಮ 2013ರ ಕಾಯ್ದೆ ರದ್ದು ಪಡಿಸಿ ಹಿಂದಿನ ಎಸ್ ಎಪಿ. ನಿಗದಿಪಡಿಸಬೇಕು.ರೈತ ವಿರೋಧಿ ಕಬ್ಬು ನಿಯಂತ್ರಣ ತಿದ್ದುಪಡಿ ಕರಡು ಆದೇಶ 2024ರ ಮಸೂದೆಯನ್ನು ಕೇಂದ್ರ ಸರ್ಕಾರ ವಾಪಸ್ ಪಡೆಯಬೇಕು ಎಂದರು.
ರಾಜ್ಯ ಸರ್ಕಾರ 2022-23 ನೇ ಸಾಲಿಗೆ ಪ್ರತಿ ಟನ್ ಗೆ 150 ರೂಗಳ ಎಸ್ ಎಪಿ ನೀಡಲು ಆದೇಶಿಸಿದ್ದು ಅದರ ಬಾಕಿ ಹಣವನ್ನು ರೈತರಿಗೆ ಶೀಘ್ರವಾಗಿ ನೀಡಬೇಕು.ಹರಿಯಾಣ. ಪಂಜಾಬ್ ಮಾದರಿಯಲ್ಲಿ ಎಫ್ ಆರ್ ಪಿ ಜೊತೆಗೆ ರಾಜ್ಯ ಸರ್ಕಾರ ಪ್ರತಿ ಟನ್ ಗೆ 900ರೂ ಎಸ್ ಎಪಿ ನಿಗದಿಪಡಿಸಿದೆ ಅದೇರೀತಿ ನಮ್ಮ ಸರ್ಕಾರವು ಕನಿಷ್ಠ 500 ರೂ ಎಸ್ ಎ ಪಿ ನಿಗದಿಪಡಿಸಬೇಕು.ಕಟಾವು ಮತ್ತು ಸಾಗಾಣಿಕ ವೆಚ್ಚವನ್ನು ನಿಯಮಕ್ಕೆ ವಿರುದ್ಧವಾಗಿ ಹೆಚ್ಚುವರಿ ಪಡೆದಿರುವ ಬಾಗಲಕೋಟೆ ಹಳಿಯಾಳ ರಾಮದುರ್ಗದ ಇ ಐಡಿ ಪ್ಯಾರಿ ಶುಗರ್ ಮತ್ತು ಅಫಜಲಪುರದ ರೇಣುಕಾ ಶುಗರ್, ಕೆಪಿಆರ್ ಶುಗರ್ ಕಾರ್ಖಾನೆಗಳಿಂದ ರೈತರಿಗೆ ಹಣವನ್ನು ವಾಪಸ್ ಕೊಡಿಸಬೇಕು ಮತ್ತು ಅವುಗಳ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಬೇಕು ಹಾಗೂ ಇತರೆ ಕಾರ್ಖಾನೆಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದರು.
ಕಬ್ಬು ಬೆಳೆದ 12 ತಿಂಗಳಿಗೆ ಕಟಾವು ಮಾಡಬೇಕು ಹೆಚ್ಚುವರಿ ತಿಂಗಳುಗಳಾಗಿ ರೈತರಿಗಾಗುವ ನಷ್ಟವನ್ನು ಕಾರ್ಖಾನೆ ಮತ್ತು ಸರ್ಕಾರ ನೀಡಬೇಕು.ಕಬ್ಬು ನಿಯಂತ್ರಣ ಆದೇಶ 1966 ಹಾಗೂ 5ಎ ಕಾಯ್ದೆಯನ್ನು ಮತ್ತಷ್ಟು ಬಲಪಡಿಸಬೇಕು ಮತ್ತು ಈ ಕಾಯ್ದೆಯನುಸಾರ ಕಬ್ಬು ಬೆಳೆಗಾರರ ಹಕ್ಕುಗಳ ರಕ್ಷಣೆಗೆ ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಆಯುಕ್ತರು, ಜಿಲ್ಲಾಧಿಕಾರಿಗಳು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು.ಕಳೆದ ಹತ್ತು ವರ್ಷಗಳಿಂದ ಸಕ್ಕರೆ ಕಾರ್ಖಾನೆಗಳು ಗಳಿಸಿರುವ ಲಾಭದಲ್ಲಿ ಆದಾಯದ ಪಾಲಿನ ಪ್ರಕಾರ ರೈತರಿಗೆ ಬಾಕಿ ಹಣ ನೀಡಬೇಕು ಎಂದರು.ಸುದ್ದಿಗೋಷ್ಠಿಯಲ್ಲಿ ಈ.ಶ್ರೀನಿವಾಸ್, ಆನಂದರಾಜು, ಭರಮಪ್ಪ ಉಪಸ್ಥಿತರಿದ್ದರು