ದಾವಣಗೆರೆ : ಜಗತ್ತಿನ ಗಮನ ಸೆಳೆದಿರುವ ಅಮೆರಿಕಾದ ಅಧ್ಯಕ್ಷ ಸ್ಥಾನದ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು ಪ್ರಧಾನಿ ನರೇಂದ್ರ ಮೋದಿ ಅವರ ಗೆಳೆಯ ಡೊನಾಲ್ಡ್ ಟ್ರಂಪ್ ಭರ್ಜರಿ ದಿಗ್ವಿಜಯ ಸಾಧಿಸಿದ್ದಾರೆ. ಭಾರತ ಮೂಲಕ ಸಂಚಾತೆ ಕಮಲಾ ಹ್ಯಾರೀಸ್ ಸೋಲು ಒಪ್ಪಿಕೊಂಡಿದ್ದು ಭಾರತದ ಪಾಲಿಗೆ ಮಹತ್ವದ ಬೆಳವಣಿಗೆಯಾಗಿದೆ. ಹಾಗಾದ್ರೆ ಟ್ರಂಪ್ ಗೆಲ್ಲುವುದರಿಂದ ಭಾರತಕ್ಕೆ ಆಗುವ ಲಾಭವೇನು? ನರೇಂದ್ರ ಮೋದಿಗೆ ಅನುಕೂಲ ಹೇಗಾಗುತ್ತೇ? ಈ ಕುರಿತು ಮಹತ್ವದ ಸ್ಟೋರಿ ಇಲ್ಲಿದೆ.
ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಸ್ಪಷ್ಟ ಚಿತ್ರಣ ಹೊರಬೀಳುತ್ತಿದ್ದು, ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಉತ್ತರ ಕೆರೊಲಿನಾ ಮತ್ತು ಜಾರ್ಜಿಯಾ ರಾಜ್ಯಗಳಲ್ಲಿ ಗೆಲುವು ಕಂಡಿದ್ದು, ಶ್ವೇತಭವನದ ಅಧಿಕಾರದ ಚುಕ್ಕಾಣಿ ಹಿಡಿಯುವುದು ಬಹುತೇಕ ಸಮೀಪವಾಗಿದೆ. ಟ್ರಂಪ್ ಮತ್ತು ಅವರ ಡೆಮಾಕ್ರಟಿಕ್ ಪ್ರತಿಸ್ಪರ್ಧಿ ಕಮಲಾ ಹ್ಯಾರಿಸ್ ಅವರು ಭದ್ರಕೋಟೆಯ ರಾಜ್ಯಗಳಿಗೆ ಲಗ್ಗೆಯಿಟ್ಟಿದ್ದಾರೆ. ಟ್ರಂಪ್ ಈಗ 266 ಚುನಾವಣಾ ಮತಗಳೊಂದಿಗೆ ಮುನ್ನಡೆ ಸಾಧಿಸಿದ್ದಾರೆ.
ಈ ಮೂಲಕ ಮೊಟ್ಟಮೊದಲ ಬಾರಿಗೆ ಅಮೆರಿಕ ಇತಿಹಾಸದಲ್ಲಿ ಮಹಿಳಾ ಅಧ್ಯಕ್ಷೆಯಾಗುವ ಕಮಲಾ ಹ್ಯಾರಿಸ್ ಕನಸು ಭಗ್ನಗೊಳ್ಳುವ ಲಕ್ಷಣ ಕಾಣುತ್ತಿದೆ.
ಪೆನ್ಸಿಲ್ವೇನಿಯಾ, ವಿಸ್ಕಾನ್ಸಿನ್, ಮಿಚಿಗನ್, ಅರಿಝೋನಾ ಮತ್ತು ನೆವಾಡಾ ಎಂಬ ಐದು ನಿರ್ಣಾಯಕ ರಾಜ್ಯಗಳ ಚುನಾವಣೆ ಬಾಕಿ ಉಳಿದಿದ್ದು ಮುಂದಿನ ಅಧ್ಯಕ್ಷರನ್ನು ನಿರ್ಧರಿಸುತ್ತದೆ.
ನ್ಯೂ ಹ್ಯಾಂಪ್ಶೈರ್ ಕಳೆದ ಎಂಟು ಅಧ್ಯಕ್ಷೀಯ ಚುನಾವಣೆಗಳಲ್ಲಿ ಏಳರಲ್ಲಿ ಡೆಮೋಕ್ರಾಟ್ಗಳನ್ನು ಬೆಂಬಲಿಸಿದೆ. ಇದು ಮೂರನೇ ಬಾರಿಗೆ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ನ್ಯೂ ಹ್ಯಾಂಪ್ಶೈರ್ನ್ನು ಪ್ರಾಥಮಿಕವನ್ನು ಗೆದ್ದಿದ್ದಾರೆ ಆದರೆ ಸಾರ್ವತ್ರಿಕ ಚುನಾವಣೆಯಲ್ಲಿ ರಾಜ್ಯವನ್ನು ಕಳೆದುಕೊಂಡಿದ್ದಾರೆ.
ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜಾರ್ಜಿಯಾವನ್ನು ಗೆದ್ದರು, 2020ರಲ್ಲಿ ಜೊ ಬೈಡನ್ ಇಲ್ಲಿ ಗೆಲುವು ಕಂಡಿದ್ದರು. ಆದರೆ ರಿಪಬ್ಲಿಕನ್ನರು 1996ರಿಂದ ಎಲ್ಲಾ ಜಾರ್ಜಿಯಾ ಅಧ್ಯಕ್ಷೀಯ ಮತಗಳನ್ನು ಗೆದ್ದಿದ್ದಾರೆ. ಟ್ರಂಪ್ ಅವರು ಜಾರ್ಜಿಯಾದಲ್ಲಿ 2020ರ ಸೋಲನ್ನು ಅಕ್ರಮ ಎಂದು ಆರೋಪಿಸಿದ್ದರು. ರಾಜಕೀಯ ಮತ್ತು ಕಾನೂನು ಹೋರಾಟಕ್ಕೆ 4 ವರ್ಷಗಳ ಹಿಂದೆ ಕಾರಣವಾಗಿತ್ತು.
ರಾಜ್ಯವು ಇಬ್ಬರು ಡೆಮಾಕ್ರಟಿಕ್ ಯುಎಸ್ ಸೆನೆಟರ್ಗಳನ್ನು ಹೊಂದಿದ್ದರೆ, ಟ್ರಂಪ್ರ ಗೆಲುವು ಜಾರ್ಜಿಯಾ ಇನ್ನೂ ರಿಪಬ್ಲಿಕನ್ ಬೆಂಟ್ ನ್ನು ಹೊಂದಿದೆ ಎಂದು ಸಾಬೀತುಪಡಿಸುತ್ತದೆ. ಸದ್ಯಕ್ಕೆ ಡೊನಾಲ್ಡ್ ಟ್ರಂಪ್ಗೆ 266 ಎಲೆಕ್ಟೋರಲ್, ಕಮಲಾ ಹ್ಯಾರಿಸ್: 188 ಮತ ಪಡೆದಿದ್ದಾರೆ. ಬಹುಮತ ಪಡೆಯಲು 270 ಮತಗಳು ಬೇಕಿದ್ದು, ಡೊನಾಲ್ಡ್ ಟ್ರಂಪ್ಗೆ ಇನ್ನು ಮೂರು ಎಲೆಕ್ಟೋರಲ್ ಮತಗಳು ಬೇಕಿದೆ.
ಒಟ್ಟಾರೆಯಾಗಿ ಅಮೆರಿಕಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಆತ್ಮೀಯ ಗೆಳೆಯ ಡೊನಾಲ್ಡ್ ಟ್ರಂಪ್ ಗೆಲುವು ಸಾಧಿಸಿರುವುದು ಭಾರತಕ್ಕೆ ಪ್ಲಸ್ ಪಾಯಿಂಟ್ ಆಗಲಿದೆ. 2000ರ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಮೆರಿಕಾಗೆ ತೆರಳಿ ಟ್ರಂಪ್ಪರ ಕೆಲಸ ಮಾಡಿದ್ದರು. ಈಗ ಟ್ರಂಪ್ ಗೆದ್ದಿರುವುದು ಭಾರತಕ್ಕೆ ಅನುಕೂಲವಾಗಲಿದೆ.