ದಾವಣಗೆರೆ : ನಗರದ ಪ್ರತಿಷ್ಠಿತ ಕಾಲೇಜ್ ಅದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದ ಪ್ರೋ ದಾದಾಪೀರ್ ನವಿಲೇಹಾಳ್ ರವರು ನಿವೃತ್ತರಾದ ಪ್ರಯುಕ್ತ ಕಾಲೇಜಿನ ಇತಿಹಾಸ ವಿಭಾಗದ ಪ್ರಾಧ್ಯಾಪಕರು ಹಾಗೂ ಸರ್ಕಾರಿ ಪ್ರಥಮ ದರ್ಜೆ ಸಂಜೆ ಕಾಲೇಜಿನ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸುತ್ತಿದ್ದ ಡಾ ಕೊಟ್ರಪ್ಪ ಸಿ ಕೆ ರವರು ಪ್ರಾಂಶುಪಾಲರಾಗಿ ಅಧಿಕಾರ ವಹಿಸಿಕೊಂಡರು.
ಸರ್ಕಾರಿ ಪ್ರಥಮ ದರ್ಜೆ ಸಂಜೆ ಕಾಲೇಜಿನ ಪ್ರಾಂಶುಪಾಲರಾಗಿ ಇತಿಹಾಸ ವಿಭಾಗದ ಪ್ರಾಧ್ಯಾಪಕರಾಗಿರುವ ಡಾ ಟಿ ಮಂಜಣ್ಣ ಅಧಿಕಾರ ವಹಿಸಿಕೊಂಡರು.
ಎಲ್ಲಾ ಅಧ್ಯಾಪಕರ ಸಹಕಾರದಿಂದ ಕಾಲೇಜಿನಲ್ಲಿ ಉತ್ತಮವಾದ ಗುಣಮಟ್ಟದ ಶಿಕ್ಷಣವನ್ನು ನೀಡಿ ವಿದ್ಯಾರ್ಥಿಗಳನ್ನು ಸಮಾಜದ ಉತ್ತಮ ನಾಗರಿಕರನ್ನಾಗಿ ಕೊಡುಗೆ ನೀಡುವ ಪ್ರಯತ್ನ ಮಾಡುತ್ತೇವೆ ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಪ್ರಾಂಶುಪಾಲರಾದ ಮಂಜಣ್ಣ ಟಿ ರವರು ಹೇಳಿದರು.
ಅಧಿಕಾರ ವಹಿಸಿಕೊಂಡ ಇಬ್ಬರು ಪ್ರಾಂಶುಪಾಲರಿಗೆ ಕಾಲೇಜಿನ ಅಧ್ಯಾಪಕರ ಸಂಘದ ಕಾರ್ಯದರ್ಶಿಗಳಾದ ಪ್ರೊ ವೆಂಕಟೇಶ್ ಬಾಬು ಎಸ್ ಉಪಾಧ್ಯಕ್ಷರಾದ ಪ್ರೊ.ಜಗದೀಶ್ ಹಾಗೂ ಪ್ರೊ ಷಣ್ಮುಖ ರವರು ಅಭಿನಂದಿಸಿದರು.