ನಂದೀಶ್ ಭದ್ರಾವತಿ, ದಾವಣಗೆರೆ
ದೇವನಗರಿ ದಾವಣಗೆರೆಯಲ್ಲಿ ಲೋಕಸಭೆ ಕದನ ಕುತುಹೂಲ ರಂಗೇರಿದ್ದು, ಪಕ್ಷೇತರ ಅಭ್ಯರ್ಥಿ ಎಷ್ಟು ಮತಗಳನ್ನು ತೆಗೆದುಕೊಳ್ಳುತ್ತಾರೆ ಅದರ ಮೇಲೆ ಪಕ್ಷದ ಗೆಲುವು ನಿರ್ಧಾರವಾಗಲಿದೆ.
ಬಿಜೆಪಿಯಿಂದ ಸಂಸದರ ಪತ್ನಿ ಗಾಯಿತ್ರಿ ಸಿದ್ದೇಶ್ವರ ಸ್ಪರ್ಧೆ ಮಾಡಿದ್ದರೇ, ಇತ್ತ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಪತ್ನಿ ಪ್ರಭಾ ಮಲ್ಲಿಕಾರ್ಜುನ್ ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡಿದ್ದಾರೆ. ಇತ್ತ ಪಕ್ಷೇತರ ಅಭ್ಯರ್ಥಿ ವಿನಯ್ ಕುಮಾರ್ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದಾರೆ. ರಾಷ್ಟ್ರೀಯ ಪಕ್ಷಗಳಿಗೆ ಇವರು ಸೆಡ್ಡು ಹೊಡೆದಿದ್ದು, ಇವರು ತೆಗೆದುಕೊಳ್ಳುವ ಮತಗಳೇ ಇತರೆ ಸ್ಪರ್ಧಾಳುಗಳ ಗೆಲುವು ಖಚಿತವಾಗಲಿದೆ.
ಆರಂಭದಲ್ಲಿ ಬಿಜೆಪಿ ಪಾದರಸದಂತೆ ಎಲ್ಲ ಕ್ಷೇತ್ರಗಳಲ್ಲಿ ತಿರುಗಾಡಿತು. ನಾಮ ಪತ್ರ ವೇಳೆ ರಾಜ್ಯದ ನಾಯಕರೆಲ್ಲ ಬಿಜೆಪಿಗೆ ಆಗಮಿಸಿದ್ದರು. ಈ ನಡುವೆ ಪ್ರಧಾನಿ ಮೋದಿ ಶಿವಮೊಗ್ಗ ಹಾಗೂ ದಾವಣಗೆರೆಗೆ ಬಂದು ಬಿಜೆಪಿ ಪ್ರಚಾರ ಮಾಡಿದ್ದರು, ಅತ್ತ ಕಾಂಗ್ರೆಸ್ ನಾಯಕಿ, ಇಂದಿರಾಗಾಂಧಿ ಪ್ರತಿ ರೂಪ ಪ್ರಿಯಾಂಕ ಗಾಂಧಿ ಪ್ರಚಾರ ಮಾಡಿದ್ದರು. ಇದಾದ ಬಳಿಕ ಸಿಎಂ ಸಿದ್ದರಾಮಯ್ಯ ಅಂತಿಮ ಕ್ಷಣದಲ್ಲಿ ಬಂದು ನನ್ನ ಮೇಲೆ ಗೌರವ ಇದ್ದರೇ, ಪ್ರಭಾ ಮಲ್ಲಿಕಾರ್ಜುನ್ ಗೆಲ್ಲಿಸಿ, ಪಕ್ಷೇತರ ಅಭ್ಯರ್ಥಿ ವಿನಯ್ ಕುಮಾರ್ ಗೆ ಮತ ಹಾಕಬೇಡಿ ಎಂದು ಹೇಳಿದ್ದರು. ಅಂದ್ರೆ ಕಾಂಗ್ರೆಸ್ ಗೆ ವಿನಯ್ ಕುಮಾರ್ ತೆಗೆದುಕೊಳ್ಳುವ ಮತಗಳ ಭಯವಿತ್ತು.
ಈ ನಡುವೆ ವಿನಯ್ ಕುಮಾರ್ ಮನವೊಲಿಸಲು ಕಾಗಿನೆಲೆ ಶ್ರೀಗಳು, ಕುರುಬ ಸಮಾಜದ ನಾಯಕ ಎಚ್.ಎಂ.ರೇವಣ್ಣ, ಸ್ವತಃ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ , ಸಿಎಂ ಸಿದ್ದರಾಮಯ್ಯ ವಿನಯ್ ಕುಮಾರನ್ನು ಕರೆಸಿ ಚುನಾವಣೆಗೆ ನಿಲ್ಲಬೇಡಿ ಎಂದಿದ್ದರು. ಅಲ್ಲದೇ ನಿಮಗೆ ಇನ್ನೂ ಚಿಕ್ಕ ವಯಸ್ಸು, ಪಕ್ಷದಲ್ಲಿ ಉತ್ತಮ ಸ್ಥಾನ ಸಿಗಲಿದೆ ಎಂದು ಹೇಳಿದ್ದರು. ಆದರೆ ವಿನಯ್ ಕುಮಾರ್ ಚುನಾವಣಾ ಅಖಾಡಕ್ಕೆ ಇಳಿದಿದ್ದರು.
ಆರಂಭದಲ್ಲಿ ಬಿಜೆಪಿ ಪ್ರಚಾರ ಜೋರಾಗಿದ್ದರೂ, ಕೊನೆ ಎರಡು ದಿನ ಮೌನವಹಿಸಿತ್ತು. ಕಾರ್ಯಕರ್ತರು ಕೂಡ ಅಷ್ಟೋಂದು ಉತ್ಸಾಹದಿಂದ ಇರಲಿಲ್ಲ, ಆದರೆ ಕಾಂಗ್ರೆಸ್ ಪಾಳಯದಲ್ಲಿ ಉತ್ಸಾಹ ಮನೆ ಮಾಡಿತ್ತು. ಅದರಲ್ಲೂ ಶಾಸಕ ಶಾಮನೂರು ಶಿವಶಂಕರಪ್ಪ ಒಂದು ರೂಪಾಯಿಗೆ ನೂರು ರೂಪಾಯಿ ಬೆಟ್ಟಿಂಗ್ ಕಟ್ಟಿ ಅಂತ ಚಾಲೆಂಜ್ ಮಾಡಿದ್ದರು. ಇನ್ನು ವಿನಯ್ ಕುಮಾರ್ ಕೂಡ ತಟಸ್ಥರಾಗಿದ್ದರು.
ಒಟ್ಟು 13 ಲಕ್ಷ ವೋಟಿಂಗ್ ಆಗಿದ್ದು, ಗೆಲುವಿನ ನಿರ್ಧಾರ ಪಕ್ಷೇತರ ತೆಗೆದುಕೊಳ್ಳುವ ಮತಗಳ ಮೇಲಿನ ನಿಂತಿದೆ. ಕಾಂಗ್ರೆಸ್ ಹೇಳುವ ಪ್ರಕಾರ ನಮಗೆ ಗ್ಯಾರಂಟಿ ವರ್ಕ್ ಆಗಿದೆ. ಮಹಿಳೆಯರು ಹೆಚ್ಚು ಮತದಾನ ಮಾಡಿದ್ದಾರೆ. ತ್ರಿಬಲ್ ಎಂಜಿನ್ ಸರಕಾರ ಬರಬೇಕೆಂದು ಜನರು ಅಪೇಕ್ಷೇ ಪಟ್ಟಿದ್ದಾರೆ. ಹೆಚ್ಚು ಮತಗಳು ಬೀಳಲಿವೆ. ಮೂರು ಲಕ್ಷ ಮುಸ್ಲಿಂ ಮತಗಳಲ್ಲಿ ಶೇ 70 ರಷ್ಟು ಮತ ಕಾಂಗ್ರೇಸ್ ಗೆ ಬಿದ್ದಿದೆ. ಇನ್ನು ಕ್ರಿಶ್ಚಿಯನ್ ಮತಗಳು ಕಾಂಗ್ರೆಸ್ ಗೆ ಬೀಳಲಿದೆ ಅಲ್ಲದೇ ನಮ್ಮದೇ ಆದ ತಂತ್ರಗಾರಿಕೆ ಮಾಡಿದ್ದೇವೆ ಎನ್ನುತ್ತಾರೆ. ಇನ್ನು ಬಿಜೆಪಿ ನೋಟ್ ಕಾಂಗ್ರೆಸ್ ನದ್ದು, ವೋಟು ಬಿಜೆಪಿಗೆ ಬಂದಿದೆ. ಯಾವುದೇ ಹಣ ವರ್ಕೌಟ್ ಆಗಿಲ್ಲ. ಅಂಚೆ ಮತಗಳು 17 ಸಾವಿರ ಇದ್ದು, ಹೊಸ ಮತದಾರರು ನಲವತ್ತು ಸಾವಿರ ಇದ್ದು, ಅದಿಷ್ಟು ಮತಗಳು ಬಿಜೆಪಿಗೆ ಬೀಳಲಿವೆ. ಇನ್ನು ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ವಿನಯ್ ಕುಮಾರ್ ತೆಗೆದುಕೊಳ್ಳುವ ಮತಗಳ ಮೇಲೆ ಬಿಜೆಪಿ ಕಣ್ಣೀಟ್ಟಿದೆ.
ಒಂದು ವೇಳೆ ಐವತ್ತು ಸಾವಿರಕ್ಕೂ ಹೆಚ್ಚು ಮತಗಳು ವಿನಯ್ ಕುಮಾರ್ ತೆಗೆದುಕೊಂಡ್ರೆ ಬಿಜೆಪಿ ಗೆಲುವು ಖಚಿತ. ವಿನಯ್ ಕುಮಾರ್ ತೆಗೆದುಕೊಳ್ಳುವ ಮತಗಳೆಲ್ಲ ಕಾಂಗ್ರೆಸ್ ನದ್ದಾಗಿದೆ. ಒಂದು ವೇಳೆ ವಿನಯ್ ಕುಮಾರ್ ನಿಲ್ಲದೇ ಹೋಗಿದ್ದರೇ, ಕಾಂಗ್ರೆಸ್ ಗೆಲುವು ಖಚಿತವಾಗಿತ್ತು.ಇನ್ನು ವಿನಯ್ ಕುಮಾರ್ ಹೇಳುವ ಪ್ರಕಾರ ಹೊನ್ನಾಳಿ ಹಾಗೂ ಜಗಳೂರು, ಹರಿಹರದಲ್ಲಿ ಹೆಚ್ಚು ಮತಗಳು ಬೀಳಲಿದ್ದು, ಸುಮಾರು ಒಂದೂವರೆ ಲಕ್ಷ ಮತಗಳು ತೆಗೆದುಕೊಳ್ಳುತ್ತೇನೆ ಎನ್ನುತ್ತಾರೆ. ವಿನಯ್ ಕುಮಾರ್ ಹೇಳಿದ ಹಾಗೆ ಇಷ್ಟು ಮತಗಳನ್ನು ತೆಗೆದುಕೊಂಡರೆ ಬಿಜೆಪಿ ಗೆಲುವು ಖಚಿತ. ಒಟ್ಟಾರೆ ಕಾಂಗ್ರೆಸ್ ಗೂ ಬಿಜೆಪಿಗೂ ನೇರಾಹಣಾಹಣಿ ಇದ್ದು, ಯಾರೇ ಗೆದ್ದರೂ ಒಂದು ಸಾವಿರದಿಂದ ಎರಡು ಸಾವಿರ ಮತಗಳಿಂದ ಗೆಲ್ಲುತ್ತಾರೆ ಎಂಬ ಮಾತಿದೆ. ಈ ಮಾತು ನಿಜವಾಗುತ್ತಾ ಅಥವಾ ಸುಳ್ಳಾಗತ್ತಾ ಫಲಿತಾಂಶ ಬಂದ ಬಳಿಕ ತಿಳಿಯಲಿದೆ.