![](https://davangerevijaya.com/wp-content/uploads/2025/01/IMG-20250116-WA0145.jpg)
ಶಿವಮೊಗ್ಗ: ಶಿವಮೊಗ್ಗ ಗ್ಯಾಂಗ್ ವಾರ್ ನಲ್ಲಿ ನಡೆದ ಮೂರು ಜನರ ಮರ್ಡರ್ ಪ್ರಕರಣದಲ್ಲಿ ಬಂಧಿಸಲಾದ 21 ಜನರಲ್ಲಿ ಯಾಸಿನ್ ಖುರೇಷಿಯ ಗ್ಯಾಂಗ್ನ್ನ ಉಡುಪಿ ಜೈಲಿಗೆ ಶಿಫ್ಟ್ ಮಾಡಲಾಗಿದೆ.
ಸದ್ಯ ಅದಿಲ್ ಪಾಶನ ಗ್ಯಾಂಗ್ ನ್ನುಶಿವಮೊಗ್ಗದ ಜೈಲ್ ನಲ್ಲೇ ಇರಿಸಲಾಗಿದೆ. ಯಾಸಿನ್ ಗ್ಯಾಂಗ್ ನಲ್ಲಿ ಮೊಹ್ಮದ್ ರಿಜ್ವಾನ್ , ಆರ್ಯನ್ ಖಾನ್, ಶಾಬಾಜ್ ಖಾನ್, ಅಜರ್, ಯಾಸಿನ್, ಶೋಯೆಬ್ , ಶೋಯೆಲ್ , ರಿಜ್ವಾನ್ ಪಾಶರನ್ನ ಬಂಧಿಸಲಾಗಿತ್ತು. ಆದಿಲ್ ಪಾಶ ಗ್ಯಾಂಗ್ ನಲ್ಲಿ ಅದಿಲ್, ಶಕೀಬ್, ಸಗೀರ್, ಸಮೀರ್ , ಇಬ್ರಾರ್ ಅಲಿ, ಇಮ್ರಾನ್, ಪರ್ವೇಜ್, ಪ್ರತಾಪ್ ಸೇರಿದಂತೆ13 ಜನರನ್ನ ಶಿವಮೊಗ್ಗ ಜೈಲಿನಲ್ಲೇ ಇರಿಸಲಾಗಿದೆ.ಈ ಸಂಬಂಧ ಕೋಟೆ ಮತ್ತು ವಿವಿಧ ಠಾಣೆಗಳಲ್ಲಿ ಮೂರು ಎಎಫ್ಆರ್ ದಾಖಲಾಗಿದೆ. ಅಲ್ಲದೇ ಯಾಸಿನ್ ಖುರೇಶಿಯನ್ನ ಮರ್ಡರ್ ಮಾಡಿದಂತೆ ಮತ್ತೋರ್ವನನ್ನ ಕೊಲೆ ಮಾಡಲಾಗುವುದು ಎಂಬ ಸಂಭಾಷಣೆ ಇಲಿಯಾಜ್ ನಗರದ ಚಹಾದ ಅಂಗಡಿ ಮುಂದೆ ಇಬ್ಬರು ಪರಿಚಯಸ್ಥರ ನಡುವೆ ನಡೆದಿದೆ. ಈ ಸಂಬಂಧ ಎಫ್ಐಆರ್ ಆಗಿದೆ ಎಂದು ಮೂಲಗಳು ತಿಳಿಸಿವೆ.
![](https://davangerevijaya.com/wp-content/uploads/2025/01/IMG-20250116-WA01462.jpg)
![](https://davangerevijaya.com/wp-content/uploads/2025/01/IMG-20250125-WA0230.jpg)