ಸಾಗರ: ಲೋಕಸಭಾ ಚುನಾವಣೆಯ ನಂತರದ ಆರು ತಿಂಗಳಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರ ಪತನಗೊಳ್ಳಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ರಿಪ್ಪನ್ ಪೇಟೆ ಅಮೃತ ಗ್ರಾಮದಲ್ಲಿ ಆಯೋಜಿಸಿದ್ದ ಲೋಕಸಭಾ ಚುನಾವಣೆಯ ಪ್ರಚಾರ ಸಭೆಯಲ್ಲಿ ಮತಯಾಚಿಸಿ ಮಾತನಾಡಿದರು.
ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಡ ಮಹಿಳೆಯರಿಗೆ ಒಂದು ಲಕ್ಷ ರೂಪಾಯಿ ನೀಡುವ ಭರವಸೆ ಕೊಟ್ಟಿದೆ. ನಿಮ್ಮ ಮನೆ ಬಾಗಿಲಿಗೆ ಮತಯಾಚಿಸಲು ಬರುವ ಪಕ್ಷದ ಮುಖಂಡರಲ್ಲಿ 10 ಸಾವಿರ ರೂ ಮುಂಗಡ ಕೇಳಿ. ಉಳಿದ 90 ಸಾವಿರ ರೂ ಅಧಿಕಾರ ಸಿಕ್ಕ ಬಳಿಕ ಪಡೆಯಿರಿ ಎಂದು ಸಲಹೆ ನೀಡಿದರು.