ಬೆಂಗಳೂರು.
ವ್ಯಕ್ತಿಯೊಬ್ಬರಿಗೆ 88 ಲಕ್ಷ ರೂ. ವಂಚಿಸಿದ್ದ 10 ಸೈಬರ್ ಖದೀಮರನ್ನು ಉತ್ತರ ವಿಭಾಗದ ಸೆನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆಕಾಶ್, ರವಿಶಂಕರ್, ಪ್ರಕಾಶ್, ಪ್ರಜ್ವಲ್, ಸುನಿಲ್, ಸುರೇಶ್, ಓಬಳರೆಡ್ಡಿ, ಮಧುಸೂಧನ್, ಶ್ರೀನಿವಾಸ್ರೆಡ್ಡಿ, ಕಿಶೋರ್ ಕುಮಾರ್ ಬಂಧಿತ ಆರೋಪಿಗಳು. ಬಂಧಿತರಿAದ 51 ಮೊಬೈಲ್ಗಳು, 27 ಡೆಬಿಟ್ ಕಾರ್ಡ್ðಗಳು, 108 ಬ್ಯಾಂಕ್ ಪಾಸ್ಬುಕ್, 480 ಸಿಮ್ ಕಾರ್ಡ್ಗಳು, 48 ಕ್ಯೂಆರ್ ಕೋಡ್, 42 ರಬ್ಬರ್ ಸ್ಟಾಂಪ್ಗಳು, 103 ಉದ್ಯಮ್ ಹಾಗೂ ಜೆಎಸ್ಟಿ ದಾಖಲಾತಿಗಳು ಹಾಗೂ ಚಾಲ್ತಿಯಿರುವ 230 ಬ್ಯಾಂಕ್ ಖಾತೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ವಂಚಕರು ಫೇಸ್ಬುಕ್, ಟೆಲಿಗ್ರಾಮ್ ಸೇರಿದಂತೆ ಇನ್ನಿತರ ಸಾಮಾಜಿಕ ಮಾಧ್ಯಮಗಳ ಮೂಲಕ ಷೇರು ಹೂಡಿಕೆಗೆ ಸಂಬಂಧಿಸಿದ ಜಾಹಿರಾತಿನ ಲಿಂಕ್ ಕಳುಹಿಸಿ, ಇಲ್ಲಿ ಹಣ ಹೂಡಿಕೆ ಮಾಡಿದರೆ ಡಬಲ್ ಮಾಡಿಕೊಡುವುದಾಗಿ ಆಮಿಷವೊಡ್ಡುತ್ತಿದ್ದರು. ಹಣದಾಸೆಗೆ ಲಿಂಕ್ ಒತ್ತಿದರೆ ವಿವಿಧ ಕಂಪನಿಗಳ ಹೆಸರಿನಲ್ಲಿ ವಾಟ್ಸಪ್ ಗ್ರೂಪ್ ಪೇಜ್ಗಳು ತೆರೆಯುತ್ತಿದ್ದವು. ‘ಬ್ರ್ಯಾಂಡಿ ಸ್ಪಿಡ್’ ಎಂಬ ಆ್ಯಪ್ : ಇನ್ಸ್ಟಾಲ್ ಮಾಡಿಕೊಂಡು ಚಂದದಾರರಾದರೇ ಹೆಚ್ಚು ಆದಾಯಗಳಿಸಬಹುದೆಂದು ನಂಬಿಸಿ ವ್ಯಕ್ತಿಯೋರ್ವರಿಂದ ಹಂತ-ಹಂತವಾಗಿ 88.83 ಲಕ್ಷ ವರ್ಗಾಯಿಸಿಕೊಂಡು ವಂಚಿಸಿದ್ದರು.
ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ನಡೆಸಿದಾಗ ಆರೋಪಿಗಳ ವಂಚನೆ ಜಾಲ ಬೆಳಕಿಗೆ ಬಂದಿದೆ.
ದುಬೈ ಹಾಗೂ ಹಾಂಕಾಂಗ್ ಸೇರಿದಂತೆ ದೂರದ ದೇಶಗಳಿಂದಲೇ ಪ್ರಕರಣದಲ್ಲಿ ನಾಪತ್ತೆಯಾಗಿರುವ ಕಿಂಗ್ಪಿನ್ಗಳು ಬಂಧಿತರನ್ನು ಸಂಪರ್ಕಿಸುತ್ತಿದ್ದರು.
ಒಂದು ಬ್ಯಾಂಕ್ ಖಾತೆ ಸೃಷ್ಟಿಸಿ ಸಂಪೂರ್ಣ ವಿವರಗಳನ್ನು ನೀಡಿದರೆ 5ರಿಂದ 10 ಸಾವಿರ ಕಮಿಷನ್ ನೀಡುವುದಾಗಿ ಆಮಿಷವೊಡ್ಡುತ್ತಿದ್ದರು. ಹಣದಾಸೆಗೆ ಒಳಗಾದ ಆಕಾಶ್, ರವಿಶಂಕರ್, ಸುನಿಲ್, ಪ್ರಜ್ವಲ್ ಪ್ರಕಾಶ್ ಸಾರ್ವಜನಿಕರನ್ನು ಸಂಪರ್ಕಿಸಿ ಹೂಡಿಕೆ ನೆಪದಲ್ಲಿ ಅವರ ಬ್ಯಾಂಕ್ ಖಾತೆಗಳನ್ನ ಸಂಗ್ರಹಿಸಿ ತಲೆಮರೆಸಿಕೊಂಡಿರುವ ಕಿಂಗ್ಪಿನ್ಗಳಿಗೆ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.