ಬೆಂಗಳೂರು: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ 27 ಕಾರ್ಯಕಾರಿ ಸಮಿತಿ ಸಾಮಾನ್ಯ ಸದಸ್ಯ ಸ್ಥಾನಗಳಿಗೆ ರಾಜ್ಯದ ಎಲ್ಲ ಜಿಲ್ಲೆಗಳಿಗೆ ಚುನಾವಣೆ ನಡೆದಿದ್ದು, ಫಲಿತಾಂಶ ಪ್ರಕಟವಾಗಿದೆ. ಒಟ್ಟು 57 ಜನರು ರಾಜ್ಯಾದ್ಯಂತ ಸ್ಫರ್ಧಿಸಿದ್ದರು. ಇದರಲ್ಲಿ 27 ಜನ ಜಯಗಳಿಸಿದರು. ಎನ್.ವಿ.ಈರೇಶ್ 13448, ಅಂಗಡಿ ಶಂಕರಪ್ಪ-13377, ಕರೇಗೌಡ-12167, ಸಂಗನಗೌಡ ಪಾಟೀಲ್ 12061, ಗುರಪ್ಪಾ ಚನ್ನಬಸಪ್ಪ ಮೆಟಗುಡ್ಡ 11893, ಉಮೇಶ್ಬಣಕಾರ್ 11849, ನಟರಾಜ್ ಸಾಗರನಹಳ್ಳಿ-11805, ಚಂದ್ರಶೇಖರ್ ಎಸ್.ಶೆಟ್ಟರ್-11707, ಪ್ರವೀಣ್ ಹನುಮಟ್ಟಿ-11678, ಡಿ.ವಿ.ಗಿರೀಶ್ಕುಮಾರ್-11535, ಎಂ.ಆರ್.ಪೂರ್ಣೇಶ್ಮೂರ್ತಿ 11488, ಶಶಿಕಾಂತ್ ಬಿ.ಪಾಟೀಲ್-11482, ಸಂತೋಷ್ಕುಮಾರ್ ಪಾಟೀಲ್-11321, ಸಿ.ಮಲ್ಲಿಕಾರ್ಜುನ್ಯ್ಯ-11292, ಎಚ್.ಕೆ.ಚನ್ನಪ್ಪ-11240, ರಾಜಶೇಖರ್ ಬಸವಣ್ಣೆಪ್ಪ-11172, ನಾಗಾರಾಜ್-11165, ಮೋಹನ್ ವೀರಭದ್ರಪ್ಪ ಅಸುಂಡಿ-10911, ಬಸವರಾಜಪ್ಪ-10867, ಎನ್.ನಂಜುಡೇಶ್-10823, ಎಸ್.ವಿರೂಪಾಕ್ಷಯ್ಯ-10757, ಶರಣಪ್ಪಬಸಪ್ಪ ಹ್ಯಾಟಿ-10628, ಶಂಭುಲಿAಗಪ್ಪ ನಿಜಪ್ಪ-10555, ಸಂದೀಪ್ ಅಣಬೇರು-10489, ಎ.ಪಿ.ವಿಜಯ್ಕುಮಾರ್-10338, ಆರ್.ಹರೀಶ್ ಆರಾಧ್ಯ-10236, ಸೋಮನಾಥ್ ರೆಡ್ಡಿ-10139 ಮತಗಳನ್ನು ಪಡೆದಿದ್ದಾರೆ ಎಂದು ಅಖಿಲ ಭಾರತ ರಾಷ್ಟ್ರೀಯ ಕಾರ್ಯದರ್ಶಿ ಎಚ್.ಎಮ್.ರೇಣುಕಾಪ್ರಸನ್ನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಂಗ್ರೆಸ್, ಬಿಜೆಪಿ ಬೆಂಬಲಿತ ಎಂಬಂತೆ ಪ್ಯಾನೆಲ್ ಗಳು ರಚನೆಗೊಂಡಿದ್ದವು.ಇದಕ್ಕೆ ಪುಷ್ಟಿ ಎಂಬಂತೆ 27 ಜನರ ಪ್ಯಾನಲ್ ನವರು ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಮಹಾಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ ಭಾವಚಿತ್ರ ಗಳಿರುವ ಕರಪತ್ರ ( ಪಾಂಪ್ಲೆಟ್) ಮುದ್ರಿಸಿ ಇವರು ಬೆಂಬಲವಿರುವ ನಮ್ಮ ತಂಡಕ್ಕೆ ಮತ ನೀಡಬೇಕು ಎಂದು ಪ್ರಚಾರ ಪ್ರಾರಂಭಿಸಿದ್ದರು.ಇದನ್ನು ಕಂಡು ಕೆರಳಿದ ಉಳಿದ ಅಭ್ಯರ್ಥಿಗಳು ತ್ರಿವಿಧ ದಾಸೋಹಿ ಸಿದ್ದಗಂಗಾ ಶ್ರೀಗಳ ತಂಡ ಎಂದು 16 ಜನರ ಪ್ಯಾನಲ್ ಮಾಡಿಕೊಂಡು ಶಾಮನೂರು ಶಿವಶಂಕರಪ್ಪ, ಈಶ್ವರ ಖಂಡ್ರೆ, ಪೋಟೋ ಜತೆಗೆ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್, ಕೇಂದ್ರ ಸಚಿವ ವಿ.ಸೋಮಣ್ಣ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹಾಗೂ ಸಂಸದ ಬಿ. ವೈ. ರಾಘವೇಂದ್ರ ಭಾವಚಿತ್ರಗಳಿರುವ ಕರಪತ್ರ ಮುದ್ರಿಸಿ ಎಲ್ಲಾ ನಾಯಕರ ಬೆಂಬಲವಿರುವ ನಮ್ಮ ಪ್ಯಾನಲ್ಗೆ ಬೆಂಬಲಿಸಿ ಎಂದು ಪ್ರಚಾರ ಆರಂಭಿಸಿದ್ದರು. ಇದರಿಂದ ಇಲ್ಲಿಯವರೆಗೂ ಪಕ್ಷಾತೀತವಾಗಿದ್ದ ಮಹಾಸಭೆ ಈ ಚುನಾವಣೆಯಲ್ಲಿ ರಾಜಕೀಯ ಅಖಾಡವಾಗಿ ಮಾರ್ಪಟ್ಟಿತ್ತು.
ಎರಡು ಪ್ಯಾನಲ್ನವರು ಜಿದ್ದಿಗೆ ಬಿದ್ದವರಂತೆ ಪ್ರಚಾರ ನಡೆಸಿದ್ದು, 31,000 ಸಾವಿರ ಕ್ಕಿಂತಲು ಹೆಚ್ಚಿರುವ ಮತದಾರರ ವಿಶ್ವಾಸಗಳಿಸಿ ಮತ ಪಡೆಯಲು ಪ್ರಯತ್ನ ನಡೆಸಿದ್ದರು. ಆದರೆ ಮತದಾರರು ಯಾವ ಪ್ಯಾನಲ್ ಗೆ ಬೆಂಬಲಿಸುತ್ತಾರೆ ಎನ್ನುವ ಕೂತುಹಲ ಮೂಡಿದೆ.