ಬೆಂಗಳೂರು:
ರಾಜ್ಯದ ವೈದ್ಯಕೀಯ ಕಾಲೇಜುಗಳಲ್ಲಿನ ಸ್ನಾತಕೋತ್ತರ (ಎಂಡಿ/ಎಂ ಎಸ್) ಕೋರ್ಸ್ಗಳ ಸೀಟುಗಳಿಗೆ 2024-25ನೇ ಸಾಲಿಗೆ ಪ್ರವೇಶ ಶುಲ್ಕವನ್ನು ಶೇ.10ರಷ್ಟು ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಿದೆ.
2024-25ನೇ ಸಾಲಿನ ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ಗಳಿಗೆ ಸಂಬಂಧಿಸಿದಂತೆ, ಸರ್ಕಾರಿ ಸ್ವಾಯತ್ತ ವೈದ್ಯಕೀಯ ಕಾಲೇಜುಗಳು, ಕರ್ನಾಟಕ ವೃತ್ತಿಪರ ಕಾಲೇಜುಗಳ ಪ್ರತಿಷ್ಠಾನ , ಕರ್ನಾಟಕ ಅಲ್ಪಸಂಖ್ಯಾತರ ವೃತ್ತಿಪರ ಕಾಲೇಜುಗಳ ಸಂಘ ಹಾಗೂ ಕರ್ನಾಟಕ ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತ ಕಾಲೇಜುಗಳ ಸಂಘದ ಅಡಿಯಲ್ಲಿ ಬರುವ ಎಲ್ಲಾ ಕಾಲೇಜುಗಳು ಹಾಗೂ ರಾಜ್ಯದ ಡೀಮ್ಡ್ ವಿಶ್ವವಿದ್ಯಾಲಯ ಮತ್ತು ಖಾಸಗಿ ವಿಶ್ವವಿದ್ಯಾಲಯದಡಿ ಬರುವ ವೈದ್ಯಕೀಯ ಕಾಲೇಜುಗಳಲ್ಲಿ ದರ ಹೆಚ್ಚಳವಾಗಿದೆ.
—
ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ (ಎಂ.ಡಿ/ಎಂ.ಎಸ್): ಕ್ಲಿನಿಕಲ್ ಹಳೆ ಶುಲ್ಕ 1,00,000 ಹೊಸ ಶುಲ್ಕ 1,10,000 ರೂ.
ಪ್ಯಾರಾ ಕ್ಲಿನಿಕಲ್ ಹಳೆ ಶುಲ್ಕ 50,000 ರೂ., ಹೊಸ ಶುಲ್ಕ 55,000 ರೂ. ಪ್ರೀ ಕ್ಲಿನಿಕಲ್ ಹಳೆ ಶುಲ್ಕ 25,000 ರೂ., ಹೊಸ ಶುಲ್ಕ 27,500 ರೂ.
—-
ಖಾಸಗಿ ಕೋಟಾದಡಿ ಆಯ್ಕೆಯಾದ ಅಭ್ಯರ್ಥಿಗಳಿಗೆ: ಕ್ಲಿನಿಕಲ್ ಹಳೆ ಶುಲ್ಕ 12,48,176 ರೂ. , ಹೊಸ ಶುಲ್ಕ
13,72,994 ರೂ.
ಪ್ಯಾರಾ ಕ್ಲಿನಿಕಲ್ ಹಳೆ ಶುಲ್ಕ 3,12,048 ರೂ., ಹೊಸ ಶುಲ್ಕ 3,43,253 ರೂ. ಪ್ರೀ ಕ್ಲಿನಿಕಲ್: ಹಳೆ ಶುಲ್ಕ 1,56,971 ರೂ., ಹೊಸ ಶುಲ್ಕ 1,72,668 ರೂ.
——
ಸರ್ಕಾರಿ ಕೋಟಾದಡಿ ಆಯ್ಕೆಯಾದ ಅಭ್ಯರ್ಥಿಗಳ ಶುಲ್ಕ, ಕ್ಲಿನಿಕಲ್: ಹಳೆ ಶುಲ್ಕ 6,98,280 ರೂ., ಹೊಸ ಶುಲ್ಕ 7,68,108 ರೂ.
ಪ್ಯಾರಾ ಕ್ಲಿನಿಕಲ್: ಹಳೆ ಶುಲ್ಕ 1,74,570 ರೂ., ಹೊಸ ಶುಲ್ಕ 1,92,027 ರೂ. ಪ್ರೀ ಕ್ಲಿನಿಕಲ್: ಹಳೆ ಶುಲ್ಕ 87,286 ರೂ., ಹೊಸ ಶುಲ್ಕ 96,015 ರೂ.
—-
ಎಂ.ಡಿ/ಎA.ಎಸ್ಗಳ ಸೀಟುಗಳಿಗೆ 2024-25ನೇ ಸಾಲಿಗೆ ಪ್ರವೇಶ ಶುಲ್ಕ ಕ್ಲಿನಿಕಲ್: ಹಳೆ ಶುಲ್ಕ 6,98,280ರೂ., ಹೊಸ ಶುಲ್ಕ 7,68,108 ರೂ.
ಪ್ಯಾರಾ ಕ್ಲಿನಿಕಲ್: ಹಳೆ ಶುಲ್ಕ 1,74,570 ರೂ., ಹೊಸ ಶುಲ್ಕ 1,92,027 ರೂ. ಪ್ರೀ ಕ್ಲಿನಿಕಲ್: ಹಳೆ ಶುಲ್ಕ 87,286 ರೂ., ಹೊಸ ಶುಲ್ಕ 96,015 ರೂ