ದಾವಣಗೆರೆ : 1 ತಿಂಗಳು, ಇನ್ನ ಒಂದು ತಿಂಗಳು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಮತ್ತು ಬಿಜೆಪಿ ಮಾಜಿ ಸಚಿವ ಡಾ. ಕೆ. ಸುಧಾಕರ್ ಅವರ ಮಧ್ಯೆ ಅಕ್ಷರಶಃ ಯುದ್ಧವೇ ನಡೆದು ಹೋಗಲಿದೆ. ಹೀಗಂಥ ನಾವು ಹೇಳ್ತಾಯಿಲ್ಲ. ಖುದ್ದು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಅವರೇ ಹೇಳಿಕೊಂಡಿದ್ದಾರೆ. ಅಷ್ಟೇಅಲ್ಲ., ಡಾ. ಕೆ ಸುಧಾಕರ್ ಅವರಿಗೆ ಬಿಜೆಪಿ ಟಿಕೆಟ್ ಯಾಕ್ ಕೊಡ್ತು ಅಂತೇಳಿ ಕಿಡಿಕಾರಿರೋ ಪ್ರದೀಶ್ ಈಶ್ವರ್ ಬೆಂಕಿಯುಂಡೆಗಳನ್ನೇ ಉಗುಳಿದ್ದಾರೆ. ಇದೇ ವೇಳೆ ಬಿಜೆಪಿಯ ಕೆ.ಎಸ್ ಈಶ್ವರಪ್ಪ ಸೇರಿದಂತೆ ಕೆಲ ಹಿರಿಯ ನಾಯಕರಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಹಾಗಾದ್ರೆ ಪ್ರದೀಪ್ ಈಶ್ವರ್ ಅವರ ವಾಗ್ದಾಳಿ ಹೇಗಿದೆ ಗೊತ್ತಾ?
ಚಿಕ್ಕಬಳ್ಳಾಪುರದಲ್ಲಿ ಮಾಜಿ ಸಚಿವ ಡಾ. ಕೆ.ಸುಧಾಕರ್ ಅವರಿಗೆ ಬಿಜೆಪಿಯವರು ಲೋಕಸಭೆ ಟಿಕೆಟ್ ನೀಡಿದ್ದಾರೆ. ಪ್ರಜಾಪ್ರಭುತ್ವದ ಸಾವಿಗೆ ಈ ಟಿಕೆಟ್ ನೀಡಿರುವುದು ಮುನ್ನಡಿಯಾಗಿದೆ. ಕೋರೊನಾ ಸಮಯದಲ್ಲಿ 2200 ಕೋಟಿ ಹಗರಣ ಮಾಡಿದ್ದಾರೆ ಎಂದು ಕಾಂಗ್ರೆಸ್ ಆರೋಪ ಮಾಡಿತ್ತು. 40 ಸಾವಿರ ಕೋಟಿ ಹಗರಣ ನಡೆದಿದೆ ಎಂದು ಬಿಜೆಪಿಯ ಬಸನಗೌಡ ಪಾಟೀಲ್ ಯತ್ನಾಳ ಆರೋಪ ಮಾಡಿದ್ದಾರೆ. ಆದರೂ ಬಿಜೆಪಿ ಅವರಿಗೆ ಟಿಕೆಟ್ ನೀಡಿದೆ ಅಂತೇಳಿ ಶಾಸಕ ಪ್ರದೀಪ್ ಈಶ್ವರ್ ಕಿಡಿಕಾರಿದ್ದಾರೆ.
ಟ್ಯೂಷನ್ ಟೀಚರ್ ವಿರುದ್ಧ ಸೋತ ಸುಧಾಕರ್!!
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರದಲ್ಲಿ ಪ್ರಭಾವಿ ಸಚಿವರು ಅಂತೆನಿಸಿಕೊಂಡಿದ್ದ ಡಾ. ಕೆ ಸುಧಾಕರ್ ಸಾಮಾನ್ಯ ವ್ಯಕ್ತಿಯಾಗಿದ್ದ ಪ್ರದೀಪ್ ಈಶ್ವರ್ ಅವರ ವಿರುದ್ಧ ಅತ್ಯಂತ ಹೀನಾಯವಾಗಿ ಸೋತಿದ್ರು. ಈ ಬಗ್ಗೆ ಇವತ್ತು ಪ್ರಶ್ನೆ ಮಾಡಿರೋ ಪ್ರದೀಪ್ ಈಶ್ವರ್., ಒಬ್ಬ ಸಾಮಾನ್ಯ ವ್ಯಕ್ತಿ ಮೇಲೆ ಸೋತ ವ್ಯಕ್ತಿಗೆ, ಟ್ಯೂಷನ್ ಟೀಚರ್ ವಿರುದ್ಧ ಸೋತ ವ್ಯಕ್ತಿಗೆ ಏಕೆ ಟಿಕೆಟ್ ಕೊಟ್ರು ಅನ್ನೋದೇ ಆಶ್ವರ್ಯ. ರಾಜ್ಯದ ಕೆಲವು ಬಿಜೆಪಿ ನಾಯಕರಿಗೆ ಸಹಾಯ ಮಾಡಿರುವ ಕಾರಣ ಟಿಕೆಟ್ ದೊರೆತಿದೆ. ಹಿರಿಯ ನಾಯಕರಿಗೆ ಸೂರ್ಯ ನಮಸ್ಕಾರ, ಶವಾಸನ, ಕಪಾಲಿಪಾತಿ, ಧೀರ್ಘ ದಂಡ ನಮಸ್ಕಾರ ಈ ರೀತಿಯ ಸೇವೆಯನ್ನು ಮಾಡಿರುವ ಕಾರಣ ಟಿಕೆಟ್ ಸಿಕ್ಕಿರಬಹುದು ಅಂತೇಳಿ ಕುಟುಕಿದ್ದಾರೆ.
ಸುಧಾಕರ್ ಆದಾಯದ ಮೂಲ ಬಿಚ್ಚಿಡ್ತಾರಾ?, ಆ ದಮ್ಮು – ಧೈರ್ಯ ಸುಧಾಕರ್ ಅವರಿಗೆ ಇದ್ಯಾ?
ಸಾಮಾನ್ಯ ಮನುಷ್ಯನಾದ ನಾನು ನನ್ನ ಎಲ್ಲಾ ವ್ಯವಹಾರ, ಗಳಿಕೆ, ಖರ್ಚು ಸೇರಿದಂತೆ ನನ್ನ ಸಂಪೂರ್ಣ ಆದಾಯದ ಬಗ್ಗೆ ನಾಳೆಯೇ ಲೆಕ್ಕ ನೀಡಲು ಸಿದ್ದನಿದ್ದೇನೆ. ನೀವು ನನ್ನ ಮೇಲೆ ಐಟಿ, ಇಡಿ ಬಿಡುವ ಪ್ರಮೇಯವೇ ಬೇಡ. ನೀವು ಪ್ರಾಮಾಣಿಕರಾಗಿದ್ದರೆ ನಿಮ್ಮ ಆದಾಯದ ಮೂಲವನ್ನು ಘೋಷಣೆ ಮಾಡುತ್ತೀರಾ.? ನಿಮಗೆ ಆ ಧೈರ್ಯ ಇದ್ಯಾ? ಪಾರ್ಲಿಮೆಂಟ್ ಭವನ ಘನತೆಯನ್ನು ಹೊಂದಿರುವ ಸ್ಥಳ, ಅಲ್ಲಿಗೆ ನಿಮ್ಮನ್ನು ನಾವು ಹೋಗಲು ಬಿಡಲ್ಲ. ಇಡೀ ಕೇಂದ್ರ ಸರ್ಕಾರವೇ ಬಂದು ನಿಂತ್ಕೊಂಡ್ರೂ ಸುಧಾಕರ್ ಅವರು ಪಾರ್ಲಿಮೆಂಟ್ ಮೆಟ್ಟಿಲನ್ನು ತುಳಿಯಲು ಬಿಡುವುದಿಲ್ಲ. ಇದು ಆಕ್ರೋಶದ ಮಾತಲ್ಲ ಮಧ್ಯಮ ವರ್ಗದ ಹುಡುಗನೊಬ್ಬನ ಮಾತು ಅಂತೇಳಿ ಕಿಡಿಕಾರಿದ್ದಾರೆ. ಇನ್ನ ಸಾರ್ವಜನಿಕ ಜೀವನದಲ್ಲಿ ನಿಮ್ಮನ್ನು ನೂರಾರು ಜನ ತೆಗಳುತ್ತಾರೆ, ಹೊಗಳುತ್ತಾರೆ ಆದನ್ನು ಸ್ವೀಕರಿಸುವ ಮನೋಭಾವ ಇರಬೇಕು. ನನಗೂ ಸಹ ಅನೇಕ ಜನ ಕೆಟ್ಟದಾಗಿ ಬೈಯ್ಯುತ್ತಾರೆ. ಆದರೆ ನಾನು ಅದನ್ನು ಸ್ಪೂರ್ತಿಯಾಗಿ ತೆಗೆದುಕೊಳ್ಳುತ್ತೇನೆ. ನನ್ನ ಮೇಲೆ 22 ಪ್ರಕರಣ ದಾಖಲಿಸಿದರು. 10 ಸಾವಿರ ಜನ ಬಂದು ನನ್ನನ್ನು ಬಿಡುಗಡೆ ಮಾಡಿಸಿದ್ರು ಅಂತೇಳಿ ಶಾಸಕ ಪ್ರದೀಪ್ ಈಶ್ವರ್ ಹೇಳಿದ್ದಾರೆ.
ನನ್ನ ಮೇಲೆ ಇಲ್ಲಸಲ್ಲದ ಕೇಸ್ಗಳನ್ನು ಹಾಕಿಸಿದರು. ನಾನು ಜೈಲಿನಲ್ಲೇ ಉಪವಾಸ ಸತ್ಯಾಗ್ರಹ ಮಾಡಿ ಬೇಲ್ ದೊರೆಯುವಂತೆ ಮಾಡಿಕೊಳ್ಳುತ್ತೇನೆ. ಕಾನೂನನ್ನು ತಮಗೆ ಬೇಕಾದಂತೆ ಬಳಸಿಕೊಳ್ಳುವ ವ್ಯಕ್ತಿ ಅಚಾನಕ್ ಆಗಿ ಗೆದ್ದರೆ ಎಂದು ಸಾಂದರ್ಬಿಕವಾಗಿ ಹೇಳುತ್ತಿದ್ದೇನೆ. ಈ ವ್ಯಕ್ತಿ ಗೆಲ್ಲಲ್ಲ, ಗೆಲ್ಲಬಾರದು. ಸುಧಾಕರ್ ಅವರು ಗೆದ್ದರೆ ಕೇಂದ್ರದ ಬಿಜೆಪಿಯ ಮಂತ್ರಿಗಳಿಗೂ ಇವರು ಒಂದಷ್ಟು ಆಸನಗಳನ್ನು ಕಲಿಸುತ್ತಾರೆ. ಒಂದಷ್ಟು ಜನರ ಆತ್ಮ ಸಂತೋಷ, ಆತ್ಮ ತೃಪ್ತಿಗೆ ಕೆಲಸ ಮಾಡುತ್ತಾರೆ. ಇದಾದ ನಂತರ ರಾಜ್ಯದಲ್ಲಿ ವಿಜಯೇಂದ್ರ ಸೇರಿದಂತೆ ಯಾರೂ ಇರುವುದಿಲ್ಲ ಅಂತೇಳಿ ಪ್ರದೀಪ್ ಈಶ್ವರ್ ಭವಿಷ್ಯ ನುಡಿದಿದ್ದಾರೆ.
ಸುಧಾಕರ್ ಅವರು ನನ್ನ ಮೇಲೆ ಮಾನನಷ್ಟ ಮೊಕದ್ದಮೆ ಹಾಕಿದ್ದಾರೆ. ಅದಕ್ಕೆ ನಾನು ಹೇಳಿದೆ ಮಾನ ಇದ್ದವರು ನಷ್ಟವಾಗಿದೆ ಎಂದು ಕೇಸ್ ಹಾಕಬೇಕು ಇವರು ಏಕೆ ಹಾಕಿದರು.? ಅವರಿಗೆ ಮಾನ ಇದೆ ಎಂದು ಸಾಭೀತು ಮಾಡಲಿ ನಾನು ಹೇಳಿದಂತೆ ಕೇಳುತ್ತೇನೆ ಅಂತೇಳಿ ಪ್ರದೀಪ್ ಈಶ್ವರ್ ಸವಾಲ್ ಎಸೆದಿದ್ದಾರೆ. ಅಷ್ಟೇ ಅಲ್ಲ, ಡಾ. ಕೆ. ಸುಧಾಕರ್ ವಿಚಿತ್ರವಾದ ರಾಜಕಾರಣಿ. ಬಿಜೆಪಿಯ ಕೆಲವು ನಾಯಕರು ಹೇಳಿದರು ಸುಧಾಕರ್ ತುಂಬಾ ಕ್ರಿಮಿನಲ್ ಮನುಷ್ಯ. ನಿನ್ನ ಅವನು ಬಿಡುವುದಿಲ್ಲ ಎಂದು. ಆದರೆ ನಾನೇ ಅವರನ್ನು ಬಿಡುವುದಿಲ್ಲ ಎಂದು ಹೇಳಿದ್ದೇನೆ ಅಂತೇಳಿ ತಿರುಗೇಟು ಕೊಟ್ಟಿದ್ದಾರೆ.
ಇಷ್ಟಕ್ಕೆ ನಿಲ್ಲದ ಶಾಸಕ ಪ್ರದೀಪ್ ಈಶ್ವರ್, ಸುಧಾಕರ್ ಅವರು ಮಾಡಿದ ಭ್ರಷ್ಟಾಚಾರದ ವಿರುದ್ದ ನನ್ನ ಹೋರಾಟ. ಒಂದೇ ಒಂದು ಗಟ್ಟಿ ನಿರ್ಧಾರ ತೆಗೆದುಕೊಳ್ಳದ ವ್ಯಕ್ತಿ ಅವರು. ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಭಾಗದ ಯುವಕರು, ಜನತೆ ನನ್ನ ಮಾತನ್ನು ಗಮನವಿಟ್ಟು ಕೇಳಬೇಕು. ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಪಕ್ಷ ಯಾರಿಗೆ ಟಿಕೆಟ್ ನೀಡಿದರು ನೀವು ಬೆಂಬಲ ನೀಡಬೇಕು. ಸುಧಾಕರ್ ಗೆದ್ದರೆ ಜನಸಾಮಾನ್ಯರಿಗೆ ತೊಂದರೆಯಾಗುತ್ತೆ. ಆತ ಭ್ರಷ್ಟಾಚಾರಿ ಎಂದು ಅವರ ಪಕ್ಷದ ಯಲಹಂಕ ಶಾಸಕ ವಿಶ್ವನಾಥ್ ಹೇಳಿದ್ದಾರೆ. ಅವರ ಅಹಂಕಾರದ ಬಗ್ಗೆ ಅವರ ಪಕ್ಷದ ಜನರೇ ಮಾತನಾಡುತ್ತಾರೆ. ನೀವು ನನ್ನ ವಿರುದ್ದ ಧೈರ್ಯವಾಗಿ ಮಾತನಾಡಿ ನಾನು ಕೋರ್ಟಿಗೆ ಹೋಗುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ಸಹಿಸಿಕೊಳ್ಳುವ ಶಕ್ತಿ ಇದ್ದರೆ ಮಾತ್ರ ರಾಜಕಾರಣಕ್ಕೆ ಬರಬೇಕು. ಮೆಡಿಕಲ್ ಕಾಲೇಜು, ಕ್ರಷರ್ ಸೇರಿದಂತೆ ಅನೇಕ ವಿಚಾರದಲ್ಲಿ ಕಿಕ್ ಬ್ಯಾಕ್ ಪಡೆದ ಆರೋಪವಿದೆ. ನೀವು ಸಾರ್ವಜನಿಕ ಚರ್ಚೆಗೆ ಬರುವಿರಾ ಅಂತೇಳಿ ಮಾಜಿ ಸಚಿವ ಡಾ. ಕೆ ಸುಧಾಕರ್ ಅವರಿಗೆ ಪ್ರದೀಪ್ ಈಶ್ವರ್ ಬಹಿರಂಗ ಸವಾಲ್ ಹಾಕಿದ್ದಾರೆ.
ಇನ್ನ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಇತ್ತೀಚೆಗೆ ಶಿವಮೊಗ್ಗದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ಕುಮಾರ್ ಅವರ ಬಗ್ಗೆ ಟೀಕಿಸುತ್ತಾ..? ಅವರು ಡಮ್ಮಿಪೀಸ್ಅವರನ್ನ ಹಾಕಿಸಿಕೊಂಡು ಯಡಿಯೂರಪ್ಪ ತಮ್ಮ ಮಗನನ್ನ ಗೆಲ್ಲಿಸಿಕೊಳ್ಳೋ ಪ್ಲ್ಯಾನ್ ಮಾಡಿದ್ದಾರೆ ಅಂತೇಳಿ ಟೀಕಿಸಿದ್ರು. ಇದಕ್ಕೆ ಪ್ರದೀಪ್ ಈಶ್ವರ್ ಕೊಟ್ಟ ತಿರುಗೇಟು ಹೇಗಿತ್ತು ಗೊತ್ತಾ? ಹಾಗಾದ್ರೆ ಶಾಸಕ ಪ್ರದೀಪ್ ಈಶ್ವರ್ ಮಾಜಿ ಸಚಿವ ಡಾ. ಕೆ ಸುಧಾಕರ್ ಮತ್ತು ಬಿಜೆಪಿ ನಾಯಕರ ಮೇಲೆ ನಡೆಸಿರೋ ಈ ವಾಗ್ಧಾಳಿಯ ಬಗ್ಗೆ ನೀವೇನಂತಿರಾ?