
ದಾವಣಗೆರೆ : ಜಗಳೂರು ಮತ್ತು ದಾವಣಗೆರೆ ತಾಲೂಕಿನ ವಿವಿಧ ಕಡೆಗಳಲ್ಲಿ ಸರಣಿ ಮನೆಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಸಂಘರ್ಷಕ್ಕೆ ಒಳಗಾದ ಬಾಲಕ ಸೇರಿದಂತೆ ಇಬ್ಬರನ್ನು ದಾವಣಗೆರೆ ಗ್ರಾಮಾಂತರ ಉಪ ವಿಭಾಗದ ಡಿವೈಎಸ್ಪಿ ಬಸವರಾಜ ನೇತೃತ್ವದ ತಂಡ ಬಂಧಿಸಿ 6.36 ಲಕ್ಷ ರೂ ಮೌಲ್ಯದ ಸ್ವತ್ತು ವಶಪಡಿಸಿಕೊಂಡಿದ್ದಾರೆ.
ಕಳೆದ ಫೆಬ್ರವರಿ 2 ರಂದು ದಾವಣಗೆರೆ ತಾಲ್ಲೂಕಿನ ಎಲೆಬೇತೂರು ಗ್ರಾಮದ ಪೂರ್ಣಿಮಾ ಅವರ ಮನೆಯ ಬಾಗಿಲು ಮುರಿದು ಹಣ, ಆಭರಣಗಳನ್ನು ಕಳ್ಳರು ದೋಚಿದ್ದರು. ಅದೇ ದಿನ ಜಗಳೂರು ತಾಲೂಕಿನ ಬಿಳಿಚೋಡು ಪೊಲೀಸ್ ಠಾಣೆಯ ಮುಗ್ಗಿದರಾಗಿಹಳ್ಳಿ ಗ್ರಾಮದಲ್ಲಿ 5 ಮನೆಗಳಲ್ಲಿ ಕಳ್ಳತನ ನಡೆದ ಕುರಿತು ಸರ ಹದ್ದಿನ ಆಯಾ ಠಾಣೆಗಳಲ್ಲಿ ದೂರು ದಾಖಲಾಗಿದ್ದವು.
ಪ್ರಕರಣ ಸಂಬಂಧ ದಾವಣಗೆರೆಯ ಮುದ್ದಾಬೋವಿ ಕಾಲೋನಿಯ ಸಾದಿಕ್(21) ಮತ್ತು ಓರ್ವ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನನ್ನು ವಶಕ್ಕೆ ಪಡೆದು 3,03,000/- ರೂ ಬೆಲೆಯ 49.93 ಗ್ರಾಂ ತೂಕದ ಬಂಗಾರದ ಆಭರಣ, 88,000/- ರೂ ಮೌಲ್ಯದ 760.29 ಗ್ರಾಂ ತೂಕದ ಬೆಳ್ಳಿ ವಸ್ತುಗಳು, 18,600/- ರೂ ಬೆಲೆ 02 ಮೊಬೈಲ್ ಫೋನ್, 15,000/- ರೂ ಬೆಲೆ ಒಂದು ತಾಮ್ರದ ಹಂಡೆ, 12,000/- ರೂ ಬೆಲೆಯ 06 ಖಾಲಿ ಸಿಲಿಂಡರ್ ಗಳನ್ನು, ಹಾಗೂ 80,000/- ರೂ ನಗದು ಹಣ ಮತ್ತು ಕೃತ್ಯಕ್ಕೆ ಬಳಸಿದ 1,20,000/- ರೂ ಮೌಲ್ಯದ 02 ದ್ವಿ ಚಕ್ರ ವಾಹನಗಳನ್ನು ಹಾಗೂ ಒಂದು ಕಬ್ಬಿಣದ ರಾಡ್ ಸೇರಿದಂತೆ ಒಟ್ಟು 6,36,600/-ರೂ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.


ಆರೋಪಿತರು ಒಟ್ಟು 9 ಪ್ರಕರಣಗಳು ಭಾಗಿಯಾಗಿರುವುದು ವಿಚಾರಣೆ ವೇಳೆ ತಿಳಿದುಬಂದಿದೆ. ಗ್ರಾಮಾಂತರ ಠಾಣೆಯ ಪಿ.ಐ ಕಿರಣ್ ಕುಮಾರ್ ಇ.ವೈ ರವರ ನೇತೃತ್ವದಲ್ಲಿ ಜಿಲ್ಲಾ ಪೊಲೀಸ್ ಕಛೇರಿಯ ಪೊಲೀಸ್ ನಿರೀಕ್ಷಕ ಇಸ್ಮಾಯಿಲ್, ಹಾರೂನ್ ಅಕ್ತರ್, ಜೋವಿತ್ ರಾಜ್, ಶ್ರೀ ಅಬ್ದುಲ್ ಖಾದರ್ ಜಿಲಾನಿ, ಪಿಎಸ್ ಹಾಗೂ ಸಿಬ್ಬಂದಿಯವರಾದ-ನಾಗಭೂಷಣ, ಮಹಮ್ಮದ ಯೂಸುಫ ಅತ್ತಾರ, ವೀರೇಶ್ ಪಿ.ಎಂ, ಹನುಮಂತಪ್ಪ, ಹಾಗೂ ಬಿಳಿಚೋಡು ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಪ್ರವೀಣ್, ಹನುಮಂತ
ಜಿಲ್ಲಾ ಪೊಲೀಸ್ ಕಛೇರಿಯ ಸಿಬ್ಬಂದಿಗಳಾದ ರಾಜನಾಗ ಜಿ.ಎನ್, ನಾಗರಾಜ ಕುಂಬಾರ, ವೀರೇಶ್ ಆರೋಪಿಗಳ ಬಂಧನ ಕಾರ್ಯಾಚರಣೆಯಲ್ಲಿ ಇದ್ದರು.