
ಶಿವಮೊಗ್ಗ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ರುದ್ರಮುನಿ ಎನ್. ಸಜ್ಜನ್ 309 ಮತಗಳ ಅಂತರದಿಂದ ಗೆದ್ದಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಭಾರೀ ಪೈಪೋಟಿ ಇದ್ದು, ರುದ್ರಮುನಿ ಸಜ್ಜನ್ ವಿರುದ್ದ ಕಡ್ಡಿಪುಡಿ ಎಂಬುವರು ಎದುರಾಳಿಗೆ ನಿಂತಿದ್ದರು. ಇವರು ಸಹ ಪ್ರಭಲ ಪೈಪೋಟಿ ನೀಡಿದ್ದರು. ಇನ್ನು ಭದ್ರಾವತಿಯಲ್ಲಿ ರುದ್ರಮುನಿ ಸಜ್ಜನ್ 179 ಮತಗಳನ್ನು ಪಡೆದರೆ, ಕಡ್ಡಿಪುಡಿ 75 ಮತಗಳು ಪಡೆದಿದ್ದಾರೆ ಎಂಬ ಮಾಹಿತಿ ಇದೆ.
ನಾನು ಅಧ್ಯಕ್ಷನಾಗಿದ್ದ ಅವಧಿಯಲ್ಲಿ ಹಲವು ಸಾಧನೆಗಳನ್ನ ಮಾಡಿದ್ದೇನೆ. ಮತ್ತೊಮ್ಮೆ ಸೇವಾ ಆಕಾಂಕ್ಷಿಯಾಗಿ ಸ್ಪರ್ಧಿಸಿದ್ದೇನೆ


ನಮ್ಮ ತಂಡ ಉತ್ತಮವಾಗಿ ಕೆಲಸ ಮಾಡಿದೆ. ಪ್ರತಿಭಾ ಪುರಸ್ಕಾರ, ಕೆಳದಿ ಶಿವಪ್ಪನಾಯಕ ಪ್ರಶಸ್ತಿ ರೂಪಿಸಿ ನಾಡಿನ ಗಣ್ಯರಿಗೆ ನೀಡಿದ್ದೇವೆ. ಎಸ್ಎಸ್ಎಲ್ಸಿ, ಪಿಯುಸಿಯಲ್ಲಿ ಉತ್ತಮ ಅಂಕ ಪಡೆದ ಮಕ್ಕಳಿಗೆ ಪ್ರೋತ್ಸಾಹ ನೀಡಿದ್ದೇವೆ.
ಮಹಾಸಭಾಕ್ಕೆ ಸ್ವಂತ ಕಟ್ಟಡದ ಅಗತ್ಯವಿದ್ದು ಸೂಡಾದ ಸಹಕಾರದಿಂದ ಕುವೆಂಪು ನಗರದಲ್ಲಿ ಸುಮಾರು 14 ಲಕ್ಷ ರೂ. ಮೌಲ್ಯದ ನಿವೇಶನ ಪಡೆದು ನಂತರ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಎರಡು ಕೋಟಿ ರೂ. ಅನುದಾನ ಮತ್ತು ದಾನಿಗಳ ಸಹಕಾರದಿಂದ ಮೂರು ಕೋಟಿ ರೂ. ವೆಚ್ಚದಲ್ಲಿ ಭವ್ಯ ಕಟ್ಟಡ ನಿರ್ಮಿಸಲಾಗಿದೆ.
ಜೊತೆಗೆ ಈಗಿರುವ ಕಟ್ಟಡಕ್ಕೆ ಹೊಂದಿಕೊಂಡಂತೆ ಮತ್ತೊಂದು ನಿವೇಶನ ಮಂಜೂರು ಮಾಡಿಸಿಕೊಂಡಿದ್ದೇವೆ. ಆದ್ದರಿಂದ ಈ ಬಾರಿಯೂ ನಾನು ಮತ್ತೊಮ್ಮೆ ಗೆದ್ದಿದ್ದೇನೆ. ಮೂಲಕ ಸಮಾಜ ಬಂಧುಗಳ ಸೇವೆ ಮಾಡುತ್ತೇನೆ.
ಸ♥ಮಾಜದ ಪ್ರತಿಭಾವಂತ ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುತ್ತೇವೆ. ವಧು, ವರರ ಅನ್ವೇಷಣಾ ಕೇಂದ್ರ ತೆರೆಯಲಾಗುವುದು, ಹೊಸ ಕಟ್ಟಡಗಳನ್ನು ನಿರ್ಮಿಸಲಾಗುವುದು ಎಂದು ಹೇಳಿದ್ದಾರೆ.
….