
ನಂದೀಶ್ ಭದ್ರಾವತಿ, ಶಿವಮೊಗ್ಗ
ದಾವಣಗೆರೆ ಡಿಸಿಸಿ ಬ್ಯಾಂಕ್ ಕಾಂಗ್ರೆಸ್ ತೆಕ್ಕೆಗೆ ಹೋದ ಬೆನ್ನೇಲ್ಲೆ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಕೂಡ ಕಾಂಗ್ರೆಸ್ ತೆಕ್ಕೆಗೆ ಹೋಗಿದೆ.
ಶಿವಮೊಗ್ಗ ಡಿಸಿಸಿ ಬ್ಯಾಂಕ್ ನಡೆದ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಭಾರಿ ಹಣಾಹಣಿ ನಡೆದಿತ್ರು. ಈ ನಡುವೆ 13 ಸ್ಥಾನಗಳಲ್ಲಿ 12 ಸ್ಥಾನಗಳನ್ನು ಕಾಂಗ್ರೆಸ್ ಗೆದ್ದು ಬೀಗಿದೆ. ಈ ನಡುವೆ ಕಮಲ ಬಾಡಿದೆ.ಹಾಲಿ ಅಧ್ಯಕ್ಷ ಮಂಜುನಾಥ್ ಗೌಡ ನೇತೃತ್ವದಲ್ಲಿ ಚುನಾವಣೆ ನಡೆದಿದ್ದು, ಪುನಃ ಮಂಜುನಾಥ್ ಗೌಡ ಅಧ್ಯಕ್ಷರಾಗಲಿದ್ದಾರೆ.


ಒಂದು ಮತದಿಂದ ಗೆದ್ದ ಶಾಸಕ ಬೇಳೂರು ಗೋಪಾಲಕೃಷ್ಣ
ಸಾಗರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ನಿಂತಿದ್ದ ಶಾಸಕ ಬೇಳೂರು ಗೋಪಾಲಕೃಷ್ಣ ಕೇವಲ ಒಂದು ಮತದಿಂದ ಗೆದ್ದಿದ್ದಾರೆ. ಒಟ್ಟು ಮೂವತ್ತು ಮತಗಳಲ್ಲಿ ಬೇಳೂರಿಗೆ 15 ಮತ ಬಿದ್ದರೇ ಪ್ರತಿಸ್ಫರ್ಧಿ ರತ್ನಾಕರ ಹೊನಗೋಡಿಗೆ 14 ಮತಗಳು ಬಿದ್ದಿದೆ. ಕೇವಲ ಒಂದು ಮತದಿಂದ ಶಾಸಕರು ಗೆದ್ದಿದ್ದಾರೆ.
ರಾಷ್ಟ್ರ ಭಕ್ತರ ಬಳಗ ಮಹಾಲಿಂಗಯ್ಯ ಶಾಸ್ತ್ರೀ ಎರಡು ಮತದಿಂದ ಗೆಲುವು
ರಾಷ್ಟ್ರ ಭಕ್ತರ ಬಳಗ ಮಹಾಲಿಂಗಯ್ಯ ಶಾಸ್ತ್ರೀ ಎರಡು ಮತದಿಂದ ಗೆಲುವು ಸಾಧಿಸಿದ್ದಾರೆ. ಶಿವಮೊಗ್ಗ ಕಾರ್ಯ ವ್ಯಾಪ್ತಿಯಲ್ಲಿ ಬರುವ ಇನ್ನಿತರ ಸಹಕಾರ ಸಂಘಗಳ ಶಿವಮೊಗ್ಗ ಉಪವಿಭಾಗದಲ್ಲಿ ನಿಂತಿದ್ದು, ಕೆಎಲ್ ಜಗದೀಶ್ವರ ವಿರುದ್ದ ಎರಡು ಮತಗಳಿಂದ ಗೆದ್ದಿದ್ದಾರೆ.
ಕ್ರೇಡಿಟ್ ನಿಂದ ಮರಿಯಪ್ಪ ಗೆಲುವು, ಎಸ್ಪಿ ದಿನೇಶ್ ಸೋಲು.
ಕ್ರೇಡಿಟ್ ನಿಂದ ಕಾಂಗ್ರೆಸ್ ನ ಮರಿಯಪ್ಪ ಹಾಗೂ ಎಸ್.ಪಿ.ದಿನೇಶ್ ನಡುವೆ ನೇರಾಹಣಾಹಣಿ ಇದ್ದು, ಮರಿಯಪ್ಪ 39 ಮತಗಳನ್ನು ಪಡೆದರೆ ಎಸ್ ಪಿ ದಿನೇಶ್ 16 ಮತಗಳನ್ನು ಪಡೆದರು.
ಅವಿರೋಧ ಆಯ್ಕೆ
ಡಿಸಿಸಿ ಬ್ಯಾಂಕ್ ನ ಹೊಸನಗರದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಪರಮೇಶ್ವರಪ್ಪ ಅವಿರೋಧ ಆಯ್ಕೆಯಾಗಿದ್ದರು. ಉಳಿದ 12 ಸ್ಥಾನಕ್ಕೆ ಚುನಾವಣೆ ನಡೆದಿದ್ದು, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆದ್ದು ಬೀಗಿದ್ದಾರೆ.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ.ಶಿವಮೊಗ್ಗ ತಾಲ್ಲೂಕು ಕ್ಷೇತ್ರದಿಂದ ಕೆ.ಪಿ ದುಗ್ಗಪ್ಪಗೌಡ ಮತ್ತು ಶಿವನಂಜಪ್ಪ.ಜೆ ನಡುವಿನ ಜಿದ್ದಾಜಿದ್ದಿಲ್ಲಿ ದುಗ್ಗಪ್ಪ ಗೌಡ ಗೆದ್ದು ಬೀಗಿದ್ದಾರೆ.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ.ಶಿವಮೊಗ್ಗ ತಾಲ್ಲೂಕು ಕ್ಷೇತ್ರದಿಂದ ಕೆ.ಪಿ ದುಗ್ಗಪ್ಪಗೌಡ ಮತ್ತು ಶಿವನಂಜಪ್ಪ.ಜೆ ನಡುವಿನ ಜಿದ್ದಾಜಿದ್ದಿಲ್ಲಿ ದುಗ್ಗಪ್ಪ ಗೌಡ ಗೆದ್ದು ಬೀಗಿದ್ದಾರೆ.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ. ಭದ್ರಾವತಿ ತಾಲ್ಲೂಕು ಕ್ಷೇತ್ರದಿಂದ ಹೆಚ್.ಎಲ್. ಷಡಾಕ್ಷರಿ vs ಸಿ.ಹನುಮಂತಪ್ಪ ನುಡುವಿನ ಸಿ ಹನುಮಂತ ಹಣಾಹಣಿಯಲ್ಲಿ ಗೆದ್ದು ಬೀಗಿದ್ದಾರೆ. ಇವರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ, ತೀರ್ಥಹಳ್ಳಿ ತಾ. ಕ್ಷೇತ್ರದಿಂದ ಬಸವಾನಿ ವಿಜಯದೇವ್, ಮತ್ತು ಕೆ.ಎಸ್.ಶಿವಕುಮಾರ್ ನಡುವಿನ ಫೈಟ್ ನಲ್ಲಿ ವಿಜಯದೇವ್ ಗೆಲವು ಸಾಧಿಸಿದ್ದಾರೆ.ಪ್ರಾ ಕೃ ಪ ಸ ಸಂಘ ನಿ ಸಾಗರ ತಾಲ್ಲೂಕು ಕ್ಷೇತ್ರದಿಂದ ಗೋಪಾಲಕೃಷ್ಣ ಬೇಳೂರು, ರತ್ನಾಕರ ಹೊನಗೋಡು ನಡುವಿನ ಬಿಗ್ ಫೈಟ್ ನಲ್ಲಿ ಶಾಸಕ ಬೇಳೂರು ಗೋಪಾಲ ಕೃಷ್ಣ ಗೆಲುವಿನ ನಗೆ ಬೀರಿದ್ದಾರೆ
ಸ ಸಂಘ ನಿ ಶಿಕಾರಿಪುರ ತಾಲ್ಲೂಕು ಕ್ಷೇತ್ರದಿಂದ ಅಗಡಿ ಅಶೋಕ, ಎಸ್.ಪಿ ಚಂದ್ರಶೇಖರಗೌಡ ನಡುವಿನ ಫೈಟ್ ನಲ್ಲಿ ಚಂದ್ರಶೇಖರ್ ಗೌಡ ಗೆದ್ದಿದ್ದಾರೆ.
ಪ್ರಾ ಕೃ ಪ ಸ ಸಂಘ ನಿ ಸೊರಬ ತಾಲ್ಲೂಕು ಕ್ಷೇತ್ರದಿಂದ ಕೆ.ಪಿ. ರುದ್ರಗೌಡ, ಶಿವಮೂರ್ತಿಗೌಡ ನಡುವೆ ಸಚಿವ ಮಧು ಅವರ ಆಪ್ತ ಕೆ.ಪಿ ರುದ್ರೇಗೌಡ ಗೆದ್ದು ಬೀಗಿದ್ದಾರೆ.
ತಾಲ್ಲೂಕು ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘ ಹಾಘೂ ಇತರೆ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘಗಳು ಶಿವಮೊಗ್ಗ ಉಪ ವಿಭಾಗದಿಂದ ಆರ್.ಎಂ. ಮಂಜುನಾಥಗೌಡ ಮತ್ತು ವಿರೂಪಾಕ್ಷಪ್ಪ ಜಿ.ಈ ನಡುವೆ ಬಿಗ್ ಫೈಟ್ ನಲ್ಲಿ ಮಂಜುನಾಥ್ ಗೌಡ ಗೆದ್ದು ಬೀಗಿದ್ದಾರೆ
ತಾಲ್ಲೂಕು ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘ ಹಾಘೂ ಇತರೆ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘಗಳು ಸಾಗರ ಉಪ ವಿಭಾಗದಿಂದ ಬಿ.ಡಿ ಭೂಕಾಂತ್, ಜಿ.ಎಸ್.ಸುಧೀರ್ ನಡುವಿನ ಜಿದ್ದಾ ಜಿದ್ದಿನಲ್ಲಿ ಜಿ.ಎಸ್ ಸುಧೀರ್ ಗೆದ್ದಿದ್ದಾರೆ.
ಪಟ್ಟಣ ಸಹಕಾರ ಬ್ಯಾಂಕುಗಳ ಹಾಗೂ ವ್ಯವಸಾಯೇತರ ಪತ್ತಿನ ಸಹಕಾರ ಸಂಘಗಳು ಶಿವಮೊಗ್ಗ ಉಪವಿಭಾಗದಿಂದ ಎಸ್.ಪಿ.ದಿನೇಶ, ಮರಿಯಪ್ಪ ನಡುವಿನ ಫೈಟ್ ನಲ್ಲಿ ಮರಿಯಪ್ಪ ಗೆದ್ದಿದ್ದಾರೆ.
ಪಟ್ಟಣ ಸಹಕಾರ ಬ್ಯಾಂಕುಗಳ ಹಾಗೂ ವ್ಯವಸಾಯೇತರ ಪತ್ತಿನ ಸಹಕಾರ ಸಂಘಗಳು ಸಾಗರ ಉಪವಿಭಾಗದಿಂದ ಎಸ್.ಕೆ, ಬಸವರಾಜ್ ಡಿ.ಎಲ್, ರವೀಂದ್ರ ಹೆಚ್.ಎಸ್ ನಡುವಿನ ಫೈಟ್ ನಲ್ಲಿ ಬ್ಯಾಂಕಿನ ಕಾರ್ಯ ವ್ಯಾಪ್ತಿಯಲ್ಲಿ ಬರುವ ಇನ್ನಿತರ ಸಹಕಾರ ಸಂಘಗಳು ಶಿವಮೊಗ್ಗ ಉಪವಿಭಾಗದಿಂದ ಆನಂದ ಡಿ, ಕೆ.ಎಲ್.ಜಗದೀಶ್ವರ್, ಹೆಚ್.ಬಿ ದಿನೇಶ್, ಮಹಾಲಿಂಗಯ್ಯ ಶಾಸ್ತ್ರಿ ಎಸ್.ಎನ್, ಜೆ.ಪಿ ಯೋಗೇಶ್, ಟಿ. ಶಿವಶಂಕರಪ್ಪ, ಹರೀಶ್ ಎನ್.ಡಿ ನಡುವಿನ ಫೈಟ್ ನಲ್ಲಿ ರಾಷ್ಟ್ರಭಕ್ತ ಬಳಗದ ಮಹಲಿಂಗ ಶಾಸ್ತ್ರಿ ಗೆದ್ದಿದ್ದಾರೆ.ಇದರಿಂದ 13 ಕ್ಷೇತ್ರದಲ್ಲಿ 12 ಜನ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಗೆದ್ದಿದ್ದು, ಮತ್ತೆ ಆರ್ ಎಂ. ಮಂಜುನಾಥ್ ಗೌಡರ ಮೇಲುಗೈ ಸಾಧಿಸಿದ್ದಾರೆ. ಒಟ್ಟಾರೆ ಕಮಲ ಬಾಡಿದ್ದು, ಕೈ ಗೆಲುವಿನ ನಗೆ ಬೀರಿದೆ.