ದಾವಣಗೆರೆ : ಮೋದಿಯವರ ಸಮರ್ಥ ನಾಯಕತ್ವ ಹಾಗೂ ಕಾರ್ಯಕರ್ತರ ಶ್ರಮದ ಜೊತೆಗೆ ಸಂಘಟನಾತ್ಮಕ ನಾಯಕತ್ವದ ಕಾರಣದಿಂದ ಛತ್ತೀಸ್ ಘಡ್, ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ಬಿಜೆಪಿ ಅಭೂತಪೂರ್ವ ಯಶಸ್ಸು ಪಡೆದಿದೆ ಎಂದು ದೂಡಾ ಮಾಜಿ ಅಧ್ಯಕ್ಷ ಕೆ.ಎಂ ಸುರೇಶ್ ಹೇಳಿದರು.
ಎಲ್ಲಾ ಸಮೀಕ್ಷೆಯಲ್ಲಿ ಬಿಜೆಪಿ ಗೆಲುವು ಸಾಧಿಸುವ ಬಗ್ಗೆ ಹೇಳಲಾಗಿತ್ತು.ಛತ್ತೀಸ್ ಘಡದಲ್ಲಿ ಕೊಂಚ ಫೈಟ್ ಇತ್ತು ಆದರೆ ಜನರು ಬಿಜೆಪಿಗೆ ಗೆಲುವು ನೀಡಿದ್ದಾರೆ ಇದೊಂದು ರೀತಿ ಗುಂಪಿನ ಗೆಲುವು ಎಂದು ಹೇಳಬಹುದು ಎಂದರು.ಲೋಕಸಭಾ ಚುನಾವಣೆಯಲ್ಲಿ ಎಲ್ಲರೂ ಸಂಘಟಿತರಾಗಿ ಹಿಂದಿನ ಚುನಾವಣೆಗಿಂತ ಹೆಚ್ವಿನದಾಗಿ ಕೆಲಸ ಮಾಡಲಿದ್ದೇವೆ. ಮೋದಿಯವರು ಮತ್ತೊಂದು ಬಾರಿ ಪ್ರಧಾನಿಯಾಗಲಿದ್ದಾರೆಂದರು.
ಕಾಂಗ್ರೆಸ್ ನ ಗ್ಯಾರಂಟಿ ಕೆಲಸ ಮಾಡಿಲ್ಲ. ಕರ್ನಾಟಕದಲ್ಲಿ ನಮ್ಮಲ್ಲಿನ ಸಣ್ಣಪುಟ್ಟ ವ್ಯತ್ಯಾಸಗಳಿಂದ ಕಾಂಗ್ರೆಸ್ ಗೆಲುವು ಪಡೆಯಲು ಸಾಧ್ಯವಾಗಿದೆ ಅಷ್ಟೇ.ಗ್ಯಾರಂಟಿ ಯೋಜನೆಗಳು ಚುನಾವಣೆ ಗೆಲ್ಲಲು ಒಂದು ಪಾರ್ಟ್ ಅಷ್ಟೇ. ಚುನಾವಣೆ ಗೆಲುವಿಗೆ ಗ್ಯಾರಂಟಿ ಕಾರಣವಲ್ಲ. ಮೊದಿಯವರು ನೀಡಿದ ಕಿಸಾನ್ ಸಮ್ಮಾನ್ ಯೋಜನೆ,ಭೇಟಿ ಪಡಾವೋ ಅಂತಹ ಜನಪರ ಯೋಜನೆಗಳು ಬಿಜೆಪಿ ಗೆಲುವಿಗೆ ಸಹಕಾರಿಯಾಯಿತು ಎಂದರು.
ಬಿಜೆಪಿಯಲ್ಲಿ ವ್ಯಕ್ತಿಗತ ಚಿಂತನೆಗಳಿಗಿಂತ ಸಮುದಾಯಕ್ಕೆ ಒಳ್ಳೆಯದು ಮಾಡುವ ಕೆಲಸ ಬಿಜೆಪಿ ಮಾಡುತ್ತಾ ಬಂದಿದೆ. ರಾಜ್ಯದಲ್ಲಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ೨೫ ಕ್ಕಿಂತ ಹೆಚ್ವು ಸ್ಥಾನ ಗೆಲ್ಲಲಿದೆ ಎಂದರು