
ಭದ್ರಾವತಿ : ಭದ್ರಾವತಿ ವೀರಶೈವ ಮಹಾಸಭಾ ಚುನಾವಣೆ ಭಾನುವಾರ ಯಾವುದೇ ಗೊಂದಲವಿಲ್ಲದೇ ನಡೆದರೂ, ಮತದಾರ ಮತ ಹಾಕಲು ಗೊಂದಲಕ್ಕಿಡಾದ.
ಭದ್ರಾವತಿ ಮಹಾಸಭಾ ಚುನಾವಣೆಯಲ್ಲಿ ಸುಮಾರು 1300 ಮತದಾರರು ಇದ್ದು, ಬೆಳಗ್ಗೆಯಿಂದ ಮತದಾನ ಜೋರಾಗಿತ್ತು. ಒಬ್ಬ ಮತದಾರ ಒಟ್ಟು 21 ಮತ ಹಾಕಬೇಕಿತ್ತು. ಆದರೆ ಅಭ್ಯರ್ಥಿಗಳು 42 ಇದ್ದ ಕಾರಣ ಯಾರಿಗೆ ಮತ ಹಾಕಬೇಕು, ಯಾರಿಗೆ ಮತ ಹಾಕಬಾರದು ಎಂಬ ಗೊಂದಲಕ್ಕೀಡಾದ. ಹಲವರು ಮೊದಲು ಅವರು ನೋಡಿರುವ, ಪರಿಚಯವಿರುವ ಮತದಾರನಿಗೆ ಮತದಾನ ಮಾಡಿದರು. ಇದಾದ ಬಳಿಕ ಸುಮ್ಮನೆ ಅವರಿಗಿಷ್ಟ ಬಂದ ಹಾಗೆ ಮತ ಹಾಕಿದರು. ಕೆಲವರು ಚಿತ್ರ ನೋಡಿ ಮತದಾನ ಮಾಡಿದರು. ಇನ್ನೂ ಕೆಲವರು ಬಾಯಿ ಪಾಠ ಮಾಡಿ ಮತದಾನ ಮಾಡಿದರು. ಇನ್ನೂ ಹಲವರು ಎರಡು ಕಡೆಯ ಚೀಟಿ ತೆಗೆದುಕೊಂಡು ಬಂದು ಮತದಾನ ಮಾಡಿದರು.
ಭದ್ರಾವತಿ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಚುನಾವಣೆ ನಡೆಯುತ್ತಿದ್ದ ಕಾರಣ ಗೊಂದಲವೇ ಹೆಚ್ಚಾಗಿತ್ತು. ಒಟ್ಟು 21 ಮತದಾನ ಮಾಡಬೇಕಿರುವ ಕಾರಣ ಒಬ್ಬೊಬ್ಬರು ಕನಿಷ್ಠ ಹತ್ತು ನಿಮಿಷ ಮತದಾನ ಮಾಡುತ್ತಿದ್ದರು. ಪರಿಣಾಮ ಹಿಂದೆ ಇದ್ದವರು ಸಾಕಷ್ಟು ಸಮಯ ಕಾಯಬೇಕಿತ್ತು. ಇದರಲ್ಲಿ ಬಿಪಿ, ಶುಗರ್ ಇದ್ದವರು ಒಂದಿಷ್ಟು ಟೆನ್ ಷನ್ ಆಗಿದ್ದರು.


ಮತ ತಿರಸ್ಕೃತದ ಭಯ
ಒಬ್ಬರು 21 ಮತವನ್ನು ಮಾತ್ರ ಹಾಕಬೇಕಿದ್ದು, ಹೆಚ್ಚು ಮತಗಳು ಹಾಕಿದರೆ ಆ ಮತಗಳು ತಿರಸ್ಕೃತಗೊಳ್ಳುವ ಸಾಧ್ಯತೆ ಹೆಚ್ಚಿದೆ. ಹಲವರಿಗೆ ಮತ ಹಾಕಲು ದ್ವಂದ್ವ ಇದ್ದ ಕಾರಣ ಬೇಕಾಬಿಟ್ಟಿ ಮತದಾನ ಮಾಡಿದ್ದಾರೆ. ಇಲ್ಲಿ ಎಣಿಕೆ ಮಾಡಿ ಮತದಾನ ಮಾಡಿಲ್ಲ. ಒಂದು ವೇಳೆ ಮತಗಳು ಕಡಿಮೆ ಹಾಕಿದರೆ ಆ ಮತಗಳು ತಿರಸ್ಕೃತಗೊಳ್ಳುವುದಿಲ್ಲ. ಅವುಗಳನ್ನು ವ್ಯಾಲಿಡಿಟಿ ಮತಗಳೆಂದು ಪರಿಗಣಿಸಲಾಗುತ್ತದೆ. ಅಧ್ಯಕ್ಷರಲ್ಲಿ ಒಬ್ಬರಿಗೆ ಮತ ಹಾಕಬೇಕಾದ ಕಾರಣ ಅದರಲ್ಲಿ ದ್ವಂದ್ವವಾಗಲಿಲ್ಲ. ಆದರೆ ನಿರ್ದೇಶಕರ ಸ್ಥಾನಕ್ಕೆ ನಿಂತಿರುವ ಅಭ್ಯರ್ಥಿಗಳಿಗೆ ಹೆಚ್ಚು ಮತದಾನ ಮಾಡಬೇಕಿರುವ ಕಾರಣ ಒಂದಿಷ್ಟು ಗೊಂದಲ ಉಂಟಾಯಿತು.
ಮಧ್ಯಾಹ್ನ 4 ಗಂಟೆಯೋಷ್ಟೋತ್ತಿಗೆ ಸುಮಾರು 1200 ಮತಗಳ ಚಲಾವಣೆ ನಡೆಯಿತು. ಮಳೆ ಇದ್ದರೂ, ಮತದಾರರು ತಾ ಮುಂದು, ನಾ ಮುಂದು ಎಂದು ಮತದಾನ ಮಾಡಿದರು. ಅಭ್ಯರ್ಥಿಗಳು ಕ್ರಮ ಸಂಖ್ಯೆ ಚೀಟಿ ಕೊಟ್ಟ ಕಾರಣ ಚುನಾವಣಾಧಿಕಾರಿಗಳಿಗೆ ಗೊಂದಲವಾಗಲಿಲ್ಲ. ಗುರುತಿನ ಚೀಟಿಗಾಗಿ ಆಧಾರ್ ಕಾರ್ಡ್ ತೋರಿಸಬೇಕಾಗಿತ್ತು. ವಾಗೀಶ್ ಹಾಗೂ ವಿಜಯ್ ಕುಮಾರ್ ನೇತೃತ್ವದ ತಂಡದವರು ಮತದಾರರನ್ನು ಸೆಳೆಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಬೆಳಗ್ಗೆಯಿಂದ ಮತದಾನ ಚುರುಕುಗೊಂಡಿದ್ದು,ಮತ ಹಾಕಲು ಒಂದಿಷ್ಟು ಕಾಲ ಕಾಯಬೇಕಿತ್ತು. ಈ ಸಂದರ್ಭದಲ್ಲಿ ಕೆಲ ಸಮಯ ಮತದಾರರ ನಡುವೆಯೆ ವಾಗ್ವಾದ ಏರ್ಪಟ್ಟಿತ್ತು. ಪೊಲೀಸರು ತಮ್ಮ ಕಾರ್ಯವನ್ನು ಚಾಚುತಪ್ಪದೇ ಕಾರ್ಯನಿರ್ವಹಿಸಿದರು. ಸಂಜೆ ನಾಲ್ಕು ಗಂಟೆ ನಂತರ ಮತ ಹಾಕುವರ ಸಂಖ್ಯೆ ಕುಸಿಯಿತು. ಜಿಲ್ಲಾಧ್ಯಕ್ಷ ಸ್ಥಾನಕ್ಕೂ ಇಲ್ಲಿನ ಮತದಾರರು ಮತ ಹಾಕಿದರು. ವೀರ ಶೈವ ಮಹಾಸಭಾದಿಂದ ಮತದಾರರಿಗೆ ಊಟ ಏರ್ಪಡಿಸಲಾಗಿತ್ತು. ಮತದಾರನ್ನು ಕರೆ ತರಲು ಆಯಾ ಅಭ್ಯರ್ಥಿಗಳು ವಾಹನ ವ್ಯವಸ್ಥೆ ಮಾಡಿದ್ದರು. ಕೌಂಟಿಂಗ್ ಸಂಜೆ ಐದು ಗಂಟೆ ನಂತರ ನಡೆಯಲಿದ್ದು, ಸುಮಾರು ರಾತ್ರಿ 11 ಗಂಟೆಗೆ ಯಾರು ಗೆಲ್ಲುತ್ತಾರೆ ಎಂದು ಗೊತ್ತಾಗಲಿದೆ.