
ದಾವಣಗೆರೆ : ಪ್ರಿಯಾ ಮತ್ತು ಪ್ರಿಯತಮ ಎಂಬ ಈ ಎರಡು ಶಬ್ದಗಳು ಪ್ರಸ್ತುತ ಪ್ರಾಪಂಚಿಕ ಜಗತ್ತಿನಲ್ಲಿ ಬಹಳಷ್ಟು ಸದ್ದು ಮಾಡುತ್ತಿವೆ. ಅಮಲೇರುವ ಕಾಮಕ್ಕೆ ಘಳಿಗೆ ಸಾಕಂತೆ ನಿಷ್ಕಲ್ಮಶ ಪ್ರೀತಿಗೆ ಜನ್ಮಗಳೇ ಬೇಕಂತೆ ಒಂದು ಮಾತು ಅಕ್ಷರಸಹ ಸತ್ಯ. ಈ ಪ್ರೀತಿ ಎಂಬುದು ಒಂದು ಪವಿತ್ರವಾದ ಭಾವನೆ. ಗುಣ ಮತ್ತು ಮಾನವನ ಸಂಬಂಧಗಳ ಪ್ರತಿರೂಪವೇ ಪ್ರೀತಿ.
ಪ್ರಸ್ತುತವಾಗಿ ಪ್ರೀತಿ ಎಂದು ಕೇಳಿ ಬಂದರೆ ಎಲ್ಲರಿಗೂ ಗೋಚರಿಸ ತೊಡಗುವುದೆಂದರೆ ಅದುವೇ ಕೆಂಪು ಬಣ್ಣ ಹೃದಯದ ಸಂಕೇತ . ಪ್ರೀತಿ ಎಂಬುದು ನಾಟಕವಲ್ಲ.
ಇದು ಅರಿತ ಎರಡು ಹೃದಯಗಳು ಸುರಿಸುವ ತುಂತುರು ಮಳೆ ಪ್ರೀತಿ. ಪ್ರೀತಿ ಯಾವಾಗ ಹುಟ್ಟುತ್ತದೆ ಯಾರ ಮೇಲೆ ಹುಟ್ಟುತ್ತದೋ ಎಂದು ಕರಾರುವಕ್ಕಾಗಿ ಹೇಳಲು ಬರುವುದಿಲ್ಲ . ಅದು ಅಂದ ಚಂದ ಆಸ್ತಿ ಮತ್ತು ಅಂತಸ್ತನ ನೋಡಿ ಬರುವುದಲ್ಲ . ಅದು ಭಾವನೆಗಳ ಒಂದು ಲೋಕ.
ಎರಡು ಮನಸ್ಸಿನ ಭಾವನೆಗಳನ್ನು ಇಬ್ಬರು ಬಿಚ್ಚಿಡುವುದೇ ನಿಜವಾದ ಪ್ರೀತಿ. ಆದರೆ ಪ್ರಸ್ತುತ ದಿನಗಳಲ್ಲಿ ಭಾವನೆ ಮತ್ತು ಪ್ರೀತಿಗೆ ಬೆಲೆ ಕೊಡದೆ ದುಡ್ಡಿನ ಮೋಹದಲ್ಲಿ ತೇಲಾಡುತ್ತಿರುವುದು ಹೆಚ್ಚು. ವಿಪರ್ಯಾಸವೆಂದರೆ ಕೆಲವರಿಗೆ ಆಸ್ತಿ ಐಶ್ವರ್ಯ ಹುದ್ದೆ ಅಂತಸ್ತುಗಳು ಇದ್ದರೂ ಅವರು ಪ್ರೀತಿಯಿಂದ ವಂಚಿತರಾಗಿರುತ್ತಾರೆ.
ಇನ್ನು ಕೆಲವರಿಗೆ ಪ್ರೀತಿಸಿಕ್ಕರು ಅದನ್ನು ಜೋಪಾನ ಮಾಡಿಕೊಳ್ಳದೆ ಹುದ್ದೆ ಆಸ್ತಿ ಐಶ್ವರ್ಯ ಜೊತೆ ಮುಂದಿನ ಜೀವನವನ್ನು ಯೋಚಿಸುತ್ತಾ ಪ್ರೀತಿಯನ್ನೇ ದೊರೆಯುವ ಸಂಗತಿಗಳನ್ನು ನೋಡಬಹುದು. ಪರಿಶುದ್ಧ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಪ್ರೀತಿಯಲ್ಲಿ ನೀವು ಪವಿತ್ರತೆಯನ್ನು ಕಂಡುಕೊಳ್ಳಬೇಕಾದರೆ ಅವನು ಮತ್ತು ಅವಳ ಸೌಂದರ್ಯ ನೋಡಿ ಪ್ರೀತಿಸಬಾರದು ಏಕೆಂದರೆ ಸೌಂದರ್ಯವೂ ತಾತ್ಕಾಲಿಕ ಶಾಶ್ವತವಲ್ಲ.

ಪ್ರೀತಿ ಉಸಿರಿರುವ ತನಕ ಎದೆ ಬಡಿತದಲ್ಲಿ ಉಳಿದು ಅಳಿದ ಮೇಲು ಅಜರಾಮರವಾಗಿರಬೇಕು.ರಾಷ್ಟ್ರಕವಿ ಜಿಎಸ್ ಶಿವರುದ್ರಪ್ಪನವರು ಪ್ರೀತಿ ಇಲ್ಲದ ಮೇಲೆ ಹೂವು ಹೇಗೆ ಅರಳಿತು? ಎಂದಿದ್ದಾರೆ. ತಂದೆ -ತಾಯಿ ಗುರು- ಶಿಷ್ಯ ಅಣ್ಣ -ತಂಗಿ ಗೆಳೆಯ -ಗೆಳತಿ ಹೀಗೆ ಪ್ರೀತಿ ನಾನಾ ವಿಧದಲ್ಲಿದೆ. ಇದು ನಿತ್ಯ ನೂತನವಾದದ್ದು ಆಡಂಬರವಲ್ಲ. ಪ್ರೇಮಿಗಳ ದಿನಾಚರಣೆಯನ್ನು ಫೆಬ್ರವರಿ 14 ರಂದು ಆಚರಿಸುತ್ತೇವೆ. ಇದರ ಹಿನ್ನೆಲೆ ಹೇಗಿದೆ ಎಂದರೆ ಕ್ರಿಸ್ತಶಕ 269ರ ಫೆಬ್ರವರಿ 14 ವ್ಯಾಲೆಂಟೈನ್ಸ್ ನ ಯುವ ಪ್ರೇಮಿಗಳ ಪರವಾಗಿ ರೂಮ್ ನ ದೊರೆ ಎರಡನೇ ಕ್ಲಾಡಿಎಸ್ ಹೋರಾಟ ಮಾಡಿದ್ದಕ್ಕಾಗಿ ಬಂಧನಕ್ಕೆ ಒಳಗಾಗಿ ಪ್ರಾಣ ಬಿಡುವನು ಅವನ ಸ್ಮರಣೆಗಾಗಿ ಕ್ರಿಸ್ತಶಕ 496 ರಲ್ಲಿ ಪೊಪ್ ನ ಜಿಲೇಸಿಯಸ್ ಈ ದಿನವನ್ನು ವ್ಯಾಲೆಂಟೈನ್ಸ್ ಡೇ ಎಂದು ಘೋಷಿಸಿದರು .ಅಂದಿನಿಂದ ಇಲ್ಲಿಯವರೆಗೆ ಫೆಬ್ರವರಿ 14ರಂದು ಪ್ರೇಮಿಗಳ ದಿನವೆಂದು ಆಚರಿಸಲಾಗಿದೆ.
ಪವಿತ್ರವಾದ ಪ್ರೀತಿಯು ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್ ವಾಟ್ಸಾಪ ಟ್ವಿಟರ್ ಇನ್ಸ್ಟಾಗ್ರಾಮ್ ಮತ್ತು ಮೊಬೈಲ್ ಹಾವಳಿಯಿಂದ ಅರ್ಥ ಕಳೆದುಕೊಳ್ಳುತ್ತಿದೆ. ಪ್ರೀತಿ ಮಾಡುವವರು ದಯವಿಟ್ಟು ಯಾವುದೇ ಉದ್ದೇಶವನ್ನು ಇಟ್ಟುಕೊಂಡು ಸಮಯ ಸಾಧನೆಗೆ ಪ್ರೀತಿ ಮಾಡಬೇಡಿ ಅದು ಇನ್ನೊಬ್ಬರ ಭಾವನೆ ಮತ್ತು ಮನಸ್ಸಿನ ಮೇಲೆ ಬಹಳಷ್ಟು ಅಗಾಧ ಪರಿಣಾಮ ಬೀರುತ್ತದೆ.ಪ್ರೀತಿ ಅಂದರೆ ದಿನನಿತ್ಯ ಜೊತೆಗಿರುವುದಲ್ಲ ಇನ್ನೊಬ್ಬರೊಂದಿಗೆ ಮಾತನಾಡಲು ಪ್ರತಿ ಗಳಿಗೆ ಹಾತೋರುವುದು ಇನ್ನೊಬ್ಬರಿಗೋಸ್ಕರ ಕಾಯುವುದೇ ನಿಜವಾದ ಪ್ರೀತಿ. ಪ್ರೀತಿಯು ಪ್ರಸ್ತುತ ಸಂತೋಷಕ್ಕಿಂತ ವ್ಯವಹಾರ ಮನೋಭಾವಕ್ಕೆ ಒಳಪಟ್ಟಿರುವುದೇ ದುರಂತ ಎನಿಸಿದೆ. ಪ್ರೇಮಿಗಳ ತುಸು ಮಾತು ಕಸುವಾಗಿ ಹುಸಿ ಯಾಗ ತೊಡಗಿದೆ. ಪ್ರೇಮಿಗಳಿಗೆ ದೇಶ ಜಾತಿ ಧರ್ಮವೂ ಪರಿಗಣಿಗೆ ಬರುವುದಿಲ್ಲ . ಪ್ರೀತಿಯನ್ನು ಜನ್ಮಗಳಿಗೋಸ್ಕರ ಕಾಯ್ದುಕೊಳ್ಳಬೇಕಾದರೆ ಪರಸ್ಪರ ನಂಬಿಕೆ, ಗೌರವ ಬಹಳಷ್ಟು ಮುಖ್ಯವಾಗುತ್ತದೆ.
ಪ್ರೀತಿಗೆ ಜಗತ್ತನ್ನೇ ಗೆಲ್ಲುವ ಶಕ್ತಿ ಇದೆ ಎಂಬ ಮಾತಿನಂತೆ ನೋಡುವುದಾದರೆ ಇಡೀ ವಿಶ್ವದ ಮನುಕುಲದ ಒಳಿತಿಗಾಗಿ ಶ್ರಮಿಸಿದ ಮಹಾನ್ ಮಾನವಿತವಾದ ಬುದ್ಧ, ಬಸವ ,ಅಂಬೇಡ್ಕರ್ ಇವರೇ ಸಾಕ್ಷಿ .
ಪ್ರೇಮಿಗಳ ದಿನ ಕೇವಲ ಫೆಬ್ರವರಿ 14ಕ್ಕೆ ಸೀಮಿತಗೊಳ್ಳದೆ ಪ್ರತಿನಿತ್ಯ ಪ್ರೀತಿಯ ರಸವನ್ನು ನಿಮ್ಮ ಪ್ರೀತಿ ಪಾತ್ರರಾದವರಿಗೆ ಹಂಚುತ್ತ ಜೀವನವನ್ನು ಆನಂದಿಸಿ. ಎಲ್ಲಾ ಜೀವರಾಶಿಗಳು ದ್ವೇಷವನ್ನು ಮರೆತು ಪ್ರೀತಿಯಿಂದ ಬದುಕಿದ್ದಾಗ ಪ್ರೀತಿಗೊಂದು ಅರ್ಥ ಸಿಗುತ್ತದೆ.
– ಮಲ್ಲೇಶ್ ಎಂ ನಾಯ್ಕ
ಉಪನ್ಯಾಸಕರು. ದಾವಣಗೆರೆ.(9632818431)