
ಭದ್ರಾವತಿಯಲ್ಲಿ ಮತ್ತೆ ಮೂರನೇ ಬಾರಿಗೆ ಗುಂಡಿನ ಸದ್ದು,
ರೌಡಿ ಶೀಟರ್ ಕಾಲಿಗೆ ಫೈರ್ ಮಾಡಿದ ಇನ್ಸ್ಪೆಕ್ಟರ್
ನಾಗಮ್ಮ
ಐಜಿಪಿ ರವಿಕಾಂತೇಗೌಡ ಬಂದ ನಂತರ ಶುರುವಾಯಿತು ನಡುಕ


ಎಸ್ಪಿ ಜಿ.ಕೆ.ಮಿಥುನ್ಕುಮಾರ್ ನೇತೃತ್ವದಲ್ಲಿ ಫೈರ್
ಭದ್ರಾವತಿ : ಭದ್ರಾವತಿಯಲ್ಲಿ ಮತ್ತೆ ಗುಂಡಿನ ಸದ್ದು ಕೇಳಿದ್ದು, ಸತತ ಮೂರನೇ ಬಾರಿಗೆ ಪೊಲೀಸರು ಕಾಲಿಗೆ ಬುದ್ದಿ ಹೇಳಲು ಹೋದ ರೌಡಿಗಳ ಕಾಲಿಗೆ ಗುಂಡಿನ ರುಚಿ ತೋರಿಸಿ ಪೊಲೀಸ್ ಹವಾ ಅಂದ್ರೆ ಏನು ಅಂತ ತೋರಿಸಿದ್ದಾರೆ.
ಈ ಹಿಂದಿನಿಂದಲೂ ಭದ್ರಾವತಿ ಒಂದಲ್ಲ ಒಂದು ಕಾರಣದಿಂದ ಸುದ್ದಿಯಲ್ಲಿದ್ದು,ಈಗ ರೌಡಿಗಳ ಹಾವಳಿ ಜೋರಾಗಿದೆ. ಈ ಕಾರಣದಿಂದ ಪೊಲೀಸರು ಸಾಲಾಗಿ ಒಬ್ಬೊಬ್ಬರನ್ನು ಮಟ್ಟ ಹಾಕುತ್ತಿದ್ದಾರೆ.
ಹೌದು.. ಬಂಧಿಸಲು ತೆರಳಿದ್ದ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪದ ಮೇಲೆ ರೌಡಿ ಶೀಟರ್ ಕಡೇಕಲ್ ಅಬೀದ್ ಕಾಲಿಗೆ ಭದ್ರಾವತಿಯ ಪೇಪರ್ಟೌನ್ ಠಾಣೆ ಇನ್ಸ್ಪೆಕ್ಟರ್ ನಾಗಮ್ಮ ಗುಂಡು ಹೊಡೆದಿದ್ದಾರೆ.
‘ಕೊಲೆ ಯತ್ನ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದ ಅಬೀದ್ನನ್ನು ಪೇಪರ್ ಟೌನ್ ಪೊಲೀಸರು ಹುಡುಕುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಇನ್ಸ್ಪೆಕ್ಟರ್ ನಾಗಮ್ಮ ನೇತೃತ್ವದ ತಂಡ ಅಬೀದ್ನನ್ನು ಬಂಧಿಸಲು ಸ್ಥಳವೊಂದಕ್ಕೆ ತೆರಳಿತ್ತು. ಈ ವೇಳೆ ಆತ ಪೊಲೀಸ್ ಸಿಬ್ಬಂದಿ ಅರುಣ್ ಮೇಲೆ ದಾಳಿ ನಡೆಸಿ ತಪ್ಪಿಸಿಕೊಳ್ಳಲು ಮುಂದಾಗಿದ್ದ.
ಹಲವು ಬಾರಿ ಎಚ್ಚರಿಕೆ ನೀಡಿದರೂ ಕೇಳದಿದ್ದಾಗ ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ’ ಎಂದು ಎಸ್ಪಿ ಜಿ.ಕೆ.ಮಿಥುನ್ಕುಮಾರ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೊಲೆ, ಕೊಲೆ ಯತ್ನ, ದರೋಡೆ ಸೇರಿದಂತೆ 20ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಈತ ಪೊಲೀಸರಿಗೆ ಬೇಕಾಗಿದ್ದು, ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ