ಬೆಂಗಳೂರು :
ಬೆಂಗಳೂರು ಹಾಗೂ ಕರ್ನಾಟಕದಲ್ಲಿ ಚಿನ್ನದ ಬೆಲೆ ನಿರಂತರವಾಗಿ ಹೆಚ್ಚಳವಾಗುತ್ತಲ್ಲೇ ಇದೆ. ಇನ್ನು ಶುಕ್ರವಾರ ಪ್ರತಿ ನೂರು ಗ್ರಾಂನ 24 ಕ್ಯಾರೆಟ್ ಚಿನ್ನದ ಬೆಲೆಯು ಗುರುವಾರಕ್ಕಿಂತ ಹೆಚ್ಚಾಗಿದೆ.
100 ಗ್ರಾಂ ಚಿನ್ನದ ಬೆಲೆಯು ನವೆಂಬರ್ 22ಕ್ಕೆ 8,700 ರೂಪಾಯಿ ಹೆಚ್ಚಳವಾಗುವ ಮೂಲಕ ಚಿನ್ನದ ಬೆಲೆಯು 7,88,200 ರೂಪಾಯಿ ಆಗಿದೆ. ಗುರುವಾರ ನೂರು ಗ್ರಾಂ ಚಿನ್ನದ ಬೆಲೆಯು 7,79,500 ರೂಪಾಯಿ ಇತ್ತು. ನೆನ್ನೆಗೂ ಇಂದಿಗೂ ಭಾರೀ ಬೆಲೆ ವ್ಯತ್ಯಾಸವಾಗಿದೆ.
ನವೆಂಬರ್ ಮೊದಲ ವಾರ ಹಾಗೂ ಎರಡನೇ ವಾರದಲ್ಲಿ ಚಿನ್ನದ ಬೆಲೆಯು ಹಾಗೂ ದಾಖಲೆಯ ಮಟ್ಟದಲ್ಲಿ ಕುಸಿತವಾಗಿತ್ತು. ಅಕ್ಟೋಬರ್ನಲ್ಲಿ ಚಿನ್ನದ ಬೆಲೆಯು ಹೇಳಿಕೊಳ್ಳುವಷ್ಟು ಪ್ರಮಾಣದಲ್ಲಿ ಇಳಿಕೆಯಾಗಿರಲಿಲ್ಲ. ಆದರೆ, ಇದಕ್ಕೂ ಮೊದಲು ಚಿನ್ನ 80,000 ಸಾವಿರ ಗಡಿಗೆ ಬಂದಾಗ ಇನ್ಮುಂದೆ ಚಿನ್ನ ಇನ್ನಷ್ಟು ದುಬಾರಿಯಾಗುತ್ತೆ ಎನ್ನುವ ಚರ್ಚೆ ಜೋರಾಗಿತ್ತು. ಅದರ ಮಧ್ಯೆ ಮತ್ತೆ ಇಳಿಕೆಯಾಗಿ ಚಿನ್ನದ ಪ್ರಿಯರಲ್ಲಿ ತುಸು ಸಂತೋಷವನ್ನು ಉಂಟು ಮಾಡಿತ್ತು. ಆದರೆ, ಆ ಸಂತೋಷ ತುಂಬಾ ದಿನ ಉಳಿಯಲಿಲ್ಲ. ಯಾಕೆಂದರೆ ಚಿನ್ನದ ಬೆಲೆ ಇದೀಗ ಮತ್ತೆ 80 ಸಾವಿರ ಗಡಿಗೆ ಬಂದು ತಲುಪಿದೆ. ಹೀಗಾಗಿ, ವಾರ್ಷಾಂತ್ಯದ ಒಳಗೆ ಅಥವಾ 2025ರ ವೇಳೆಗೆ ಚಿನ್ನದ ಬೆಲೆ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಹೀಗಾಗಿ, ಈ
ಚಿನ್ನ ಖರೀದಿ ಮಾಡುವುದೇ ಸೂಕ್ತ ಎನ್ನಲಾಗ್ತಿದೆ.
ನವೆಂಬರ್ 22ಕ್ಕೆ ಚಿನ್ನ & ಬೆಳ್ಳಿ ಬೆಲೆ ಎಷ್ಟಿದೆ ?
24 ಕ್ಯಾರೆಟ್ ಚಿನ್ನದ ಬೆಲೆಯ ವಿವರ: ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯು ನಿರಂತರವಾಗಿ ಹೆಚ್ಚಳವಾಗ್ತಿದೆ. 24 ಕ್ಯಾರೆಟ್ ಚಿನ್ನದ ಬೆಲೆಯು 100 ಗ್ರಾಂಗೆ ಇದೀಗ ಬರೋಬ್ಬರಿ 8,700 ರೂಪಾಯಿ ಹೆಚ್ಚಳವಾಗಿದೆ. ಚಿನ್ನದ ಬೆಲೆಯು 80,000 ಸಾವಿರ ರೂಪಾಯಿ ಗಡಿಗೆ ಬಂದಿದೆ. ಶುದ್ಧ ಚಿನ್ನದ 24 ಕ್ಯಾರೆಟ್ ಬಂಗಾರದ ಬೆಲೆಯು ಇದೀಗ 100 ಗ್ರಾಂಗೆ 7,88,200 ರೂಪಾಯಿ ಆಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 870 ರೂಪಾಯಿ ಜಾಸ್ತಿಯಾಗಿದ್ದು, ಇದೀಗ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆಯು 78,820 ರೂಪಾಯಿ ಆಗಿದೆ. ಪ್ರತಿ 1 ಗ್ರಾಂ 7,882 ರೂಪಾಯಿ ಆಗಿದೆ.
22 ಕ್ಯಾರೆಟ್ ಚಿನ್ನದ ಬೆಲೆ: ಇನ್ನು 22 ಕ್ಯಾರೆಟ್ ಚಿನ್ನದ ಬೆಲೆಯೂ ನಿರಂತರವಾಗಿ ಏರಿಕೆ ಕಂಡಿದೆ. 22 ಕ್ಯಾರೆಟ್ ಚಿನ್ನದ ಬೆಲೆಯು 100 ಗ್ರಾಂಗೆ 7,22,500 ರೂಪಾಯಿ ಇದೆ. 10 ಗ್ರಾಂಗೆ 72,250 ರೂಪಾಯಿ ಆಗಿದೆ. ಇನ್ನು ಪ್ರತಿ 1 ಗ್ರಾಂಗೆ 7,225 ರೂಪಾಯಿ ಆಗಿದೆ.ಇನ್ನು ಬೆಳ್ಳಿ ಬೆಲೆಯಲ್ಲೂ ನಿರಂತರವಾಗಿ ಹೆಚ್ಚಳವಾಗ್ತಿದೆ. 1 ಗ್ರಾಂ ಬೆಳ್ಳಿ ಬೆಲೆಯು 92 ರೂಪಾಯಿ ಇದ್ದರೆ, 1 ಕೆ.ಜಿ ಬೆಳ್ಳಿ ಬೆಲೆಯು 92,000 ಸಾವಿರ ರೂಪಾಯಿ ಆಗಿದೆ. 10 ಗ್ರಾಂ 920 ರೂಪಾಯಿ ಇದೆ. ಇನ್ನು ನೂರು ಗ್ರಾಂ ಬೆಳ್ಳಿ ಬೆಲೆಯು 9,200 ರೂಪಾಯಿ ಆಗಿದೆ.