ಚನ್ನಗಿರಿ : ದಾವಣಗೆರೆ ಅಂದ್ರೆ ಎಲ್ಲರೂ ಬೆಣ್ಣೆ ದೋಸೆ ಅಂತಾರೆ, ಆದರೆ ಈ ಭಾಗದ ಜನರಿಗೆ ಖಾರ-ಮಂಡಕ್ಕಿ, ಮಿರ್ಚಿ ಅಂದ್ರೆ ಬಲು ಇಷ್ಟ..ಅದರಲ್ಲೂ ಶಾಸಕ ಶಾಮನೂರು ಶಿವಶಂಕರಪ್ಪರಿಗೆ ತನ್ನ ಕುಟುಂಬದ ಜತೆ ಮಾತನಾಡುತ್ತಾ ಮಿರ್ಚಿ-ಮಂಡಕ್ಕಿ ತಿನ್ನುವುದು ಅಂದ್ರೆ ಸಾಕು ಎಲ್ಲಿಲ್ಲದ ಪ್ರೀತಿ.
ಶಾಮನೂರು ಶಿವಶಂಕರಪ್ಪ ಮೂಲತಃ ವ್ಯಾಪಾರದ ಕುಟುಂಬದಿಂದ ಬಂದಿರುವ ಕಾರಣ ಅವರಿಗೆ ದಾವಣಗೆರೆ ಮಿರ್ಚಿ, ಖಾರ ಮಂಡಕ್ಕಿ ನಡುವೆ ಸಂಬಂಧ ಇದೆ ಇವರ ಮನೆಯ ಯಾವುದೇ ಧಾರ್ಮಿಕ ಕಾರ್ಯಕ್ರಮವಿದ್ದರೂ ಅಲ್ಲಿ ಖಾರ, ಗರಂ ಮಂಡಕ್ಕಿ ರೆಡಿ ಇರುತ್ತದೆ. ಅಲ್ಲದೇ ಅವರ ಕುಟುಂಬ, ಸ್ನೇಹಿತರೂ ಕೂಡ ಮಂಡಕ್ಕಿ ಸವಿಯದೇ ಹಾಗೇ ಹೋಗುವುದಿಲ್ಲ.
ಮಂಡಕ್ಕಿ ತಿಂದ್ರೆ ಹಲವರು ಗ್ಯಾಸ್ ಬರುತ್ತದೆ ಅಂತಾರೆ, ಆದ್ರೆ ಶಾಮನೂರು ಶಿವಶಂಕರಪ್ಪ ವಯಸ್ಸು 92ಆದ್ರೂ ಮಂಡಕ್ಕಿ ಮಿರ್ಚಿ ಸವಿಯುತ್ತಾರೆ.
ಅಂತೆಯೇ ಚನ್ನಗಿರಿ ತಾಲೂಕಿನ ಮಾವಿನಹೊಳೆ ಕ್ಷೇತ್ರಕ್ಕೆ ಮಾಜಿ ಸಚಿವರು ಹಾಲಿ ಶಾಸಕರಾದ ಶಾಮನೂರು ಶಿವಶಂಕರಪ್ಪ ಮತ್ತು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಕುಟುಂಬದವರು ಮತ್ತು ಸ್ನೇಹಿತರೊಂದಿಗೆ ಬೇಟಿ ನೀಡಿ ಕ್ಷೇತ್ರದ ದೇವರಾದ ಮಾವಿನಹೊಳೆ ಮಹಾರುದ್ರಸ್ವಾಮಿಯ ದರ್ಶನ ಪಡೆದು ಖಾರ ಮಂಡಕ್ಕಿ ತಿನ್ನುತ್ತಾ ಶಾಮನೂರು ಶಿವಶಂಕರಪ್ಪ ಮೊಮ್ಮಕ್ಕಳೊಂದಿಗೆ ಕಾಲ ಕಳೆದರು.