
ದಾವಣಗೆರೆ :ದಾವಣಗೆರೆ ವಿವಿ ಹಿಂದೆ ಮಹಜರು ಹೋದ ವೇಳೆ ಪಿಎಸ್ ಐ ಶಿಲ್ಪಾರಿಂದ ಗುಂಡೇಟು ತಿಂದ ದರೋಡೆಕೋರ ನವೀನ್ ಟಾರ್ಗೇಟ್ ಕೇವಲ ವೃದ್ದೇಯರು ಆಗಿದ್ದರು.
ಆರೋಪಿ ನವೀನ್ ಮೊದಲು ಎಲ್ಲಿ ಒಂಟಿ ವೃದ್ದೆಯರು ಇದ್ದಾರೆ ಎಂಬುದನ್ನು ಮೊದಲು ಗುರುತಿಸಿಕೊಳ್ಳುತ್ತಿದ್ದ. ನಂತರ ಆ ಮನೆ ಮೇಲೆ ಕಣ್ಣೀಡುತ್ತಿದ್ದ. ಅಲ್ಲದೇ ಕತ್ತಿನ ಮೇಲೆ ಬಂಗಾರ ಎಷ್ಟಿತ್ತು ಅಂತ ನೋಡುತ್ತಿದ್ದ. ಹೀಗಿರುವಾಗ ಮನೆಯಲ್ಲಿ ಒಬ್ಬರೇ ಇದ್ದದ್ದನ್ನು ನೋಡಿ ಒಳಗೆ ನುಗ್ಗುತ್ತಿದ್ದ. ಅಲ್ಲದೇ ಅಜ್ಜಿಯರ ಮೇಲೆ ದಾಳಿ ಮಾಡುತ್ತಿದ್ದ ಪ್ರತಿರೋಧ ತೋರಿದರೆ ಕೊಲೆ ಮಾಡುತ್ತಿದ್ದ. ಅಲ್ಲದೇ ಕೈಲಾದವರ ಮೇಲೆ ಅತ್ಯಾಚಾರ ಮಾಡುತ್ತಿದ್ದ.
ದಾವಣಗೆರೆಯಲ್ಲಿ ನಡೆದಿದ್ದ ಘಟನೆ ಯಾವುದು?
ದಾವಣಗೆರೆ ನಗರದ ಎಸ್.ಎಸ್. ಲೇಔಟ್ ‘ಎ’ ಬ್ಲಾಕ್ನ (ಶಾಮನೂರು ರಸ್ತೆ) ಮನೆಯೊಂದಕ್ಕೆ ನಾಲ್ಕು ದಿನಗಳ ಹಿಂದೆ ಮಧ್ಯಾಹ್ನ ನುಗ್ಗಿದ ಆರೋಪಿಯೊಬ್ಬ, ವೃದ್ಧೆಯ ಮೇಲೆ ಹಲ್ಲೆ ನಡೆಸಿದ್ದ. ಅಲ್ಲದೇ 180 ಗ್ರಾಂ ಬೆಲೆಯ ಚಿನ್ನ, ಬೆಳ್ಳಿ ಆಭರಣಗಳನ್ನು ದೋಚಿದ್ದ. ರಂಗಮ್ಮ ಹಲ್ಲೆಗೆ ಒಳಗಾದ ವೃದ್ಧೆಯಾಗಿದ್ದು, ವೃದ್ಧೆ ಒಬ್ಬರೇ ಇದ್ದಾಗ ಮನೆಯೊಳಗೆ ಪ್ರವೇಶಿಸಿದ್ದ. ಅಲ್ಲದೇ ವೃದ್ಧೆಯ ಮೇಲೆ ಹಲ್ಲೆ ನಡೆಸಿ ಆಭರಣಗಳನ್ನು ದೋಚಿದ್ದ. ಗಾಯಗೊಂಡ ರಂಗಮ್ಮ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.. ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.


ಈತನ ಮೇಲೆ ಸುಮಾರು ಐವತ್ರು ಪ್ರಕರಣ ಇದ್ದವು
ತುಮಕೂರು ಜಿಲ್ಲೆಯ ಗೊಲ್ಲಹಳ್ಳಿ ಗ್ರಾಮದ ನವೀನ್ ಮೇಲೆ ಐವತ್ತು ಪ್ರಕರಣಗಳಿದ್ದವು. ಚಿತ್ರದುರ್ಗ ಜಿಲ್ಲೆಯ ಚಿತ್ರಹಳ್ಳಿಯಲ್ಲಿ ಹೊಲದಲ್ಲಿ ಮನೆ ಮಾಡಿದ್ದ ಒಂಟಿ ವೃದ್ಧೆ ಮನೆಗೆ ಎಂಟ್ರಿ ಕೊಟ್ಟು ಆಕೆಯ ಮೇಲೆ ಅತ್ಯಾಚಾರ ಮಾಡಿ, ಕೊಲೆ ಮಾಡಿದ್ದ. ಅಲ್ಲದೇ ವೃದ್ದೆ ಮೇಲಿದ್ದ ಬಂಗಾರ ದೋಚಿದ್ದ. ಈ ಸಂಬಂಧ ಚಿತ್ರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಲ್ಲದೆ ಅಬ್ಬಿನಹೊಳೆ, ಆಂಧ್ರದ ರೊಳ್ಳದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು..ಎಲ್ಲ ವೃದ್ಧೆಯ ಕೊಲೆ ಪ್ರಕರಣದಲ್ಲಿ ಒಂದೇ ರೀತಿಯ ಕೊಲೆ ನಡೆದಿತ್ರು.
ಸಿಕ್ಕಿದ್ದು ಹೇಗೆ, ವೃದ್ಧೆಯರ ಮನೆಗೆ ದರೋಡೆ ಮಾಡಲು ಕಳ್ಳತನದ ಬೈಕ್ ಬಳಸುತ್ತಿದ್ದ
ಎಲ್ಲ ಕೊಲೆಗಳು ಒಂದೇ ರೀತಿಯ ಪ್ರಕರಣದ ಕಾರಣ ಸುತ್ತಮುತ್ತಲಿನ ಪೊಲೀಸ್ ಠಾಣೆಗೆ ಈತನ ಪೊಟೋ ಕಳಿಸಲಾಗಿತ್ತು. ಇನ್ನೂ ಆರೋಪಿ ನವೀನ್ ದರೋಡೆಮಾಡಲು ಕದ್ದ ಬೈಕ್ ಬಳಸುತ್ತಿದ್ದ. ದರೋಡೆ ಮಾಡಿದ ಹಣದಲ್ಲಿ ಎಂಜಾಯ್ ಮಾಡುತ್ತಿದ್ದ.
ಇನ್ನೂ ಪೊಲೀಸರು ತನ್ನ ಹುಡುಕಾಟದಲ್ಲಿ ಇದ್ದಾರೆ ಎಂದು ಗೊತ್ತಾದ ತಕ್ಷಣ ಬೆಂಗಳೂರಿಗೆ ಹೋಗಿದ್ದ. ತದ ನಂತರ ಹಳೆ ಕೇಸ್ ನಲ್ಲಿದ್ದ ಈತನ ಪೋಟೋ, ಸಿಸಿ ಕ್ಯಾಮೆರಾಗಳಲ್ಲಿ ಆತನ ಚಹರೆ ಇಡಿದ ಪೊಲೀಸರು ನೇರ ಬೆಂಗಳೂರಿಗೆ ಹೊರಟರು. ಅಲ್ಲಿ ಆತನ ವಿಳಾಸ ಪತ್ತೆ ಹಚ್ಚಿದ ಪೊಲೀಸರು ಬೆಂಗಳೂರಿಗೆ ಕರೆ ತಂದರು. ಬಳಿಕ ಪೊಲೀಸರು ಪಂಚನಾಮೆಗೆ ಹೊರಟರು. ಅಲ್ಲಿ ಈತ ಕೊಲೆ ಮಾಡಲು ಬಳಸುತ್ತಿದ್ದ ಕದ್ದ ಬೈಕ್ ನ್ನು ದಾವಣಗೆರೆ ವಿವಿಯ ಹಿಂಭಾಗದಲ್ಲಿ ಇರಿಸಿದ್ದ. ಅಲ್ಲಿಗೆ ಈತನನ್ನು ಕರೆದುಕೊಂಡು ಹೊರಟ ಪೊಲೀಸರಿಗೆ ಬಹಿರ್ದೆಸೆಗೆ ಹೋಗಬೇಕೆಂದು ಕೇಳಿದ್ದಾನೆ.ಬಳಿಕ ಬಹಿರ್ದೆಸೆಗೆ ಹೋದ ಆರೋಪಿ ಪಿಎಸ್ ಐ ಶಿಲ್ಪಾಗೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ..
ಆಗ ಪೊಲೀಸರು ಕಾಲಿಗೆ ಗುಂಡು ಹೊಡೆದಿದ್ದಾರೆ. ಒಟ್ಟಾರೆ ದಾವಣಗೆರೆಯಲ್ಲಿ ಬಹು ದಿನಗಳ ನಂತರ ಗುಂಡಿನ ಸದ್ದು ಮೊಳಗಿದ್ದು, ನಟೋರಿಯಸ್ ನೊಬ್ಬನನ್ನು ಪೊಲೀಸರು ತನ್ನ ತೆಕ್ಕೆಗೆ ತೆಗೆದುಕೊಂಡು ಸಾಕಷ್ಟು ವೃದ್ಧ ಜೀವಗಳನ್ನು ಉಳಿಸಿದ್ದಾರೆ.
ಇನ್ನು ಈ ಪ್ರಕರಣದಲ್ಲಿ ಕೆಲಸ ಮಾಡಿದ ಶಂಕರ್ ಜಾಧವ್, ಬೋಜಪ್ಪ ಆನಂದ, ಮಲ್ಲೇಶಿ, ಕೊಟ್ರೇಶಿ, ಚಂದ್ರಪ್ಪ, ಗಿರಿಶ್ ಗೌಡ, ಲೋಕೇಶ್, ರವಿಯವರನ್ನು ಐಜಿಪಿ ರವಿಕಾಂತೇಗೌಡ, ಎಸ್ಪಿ ಉಮಾಪ್ರಶಾಂತ್ ಅಭಿನಂದಿಸಿ, ಇನ್ನಷ್ಟು ಕೆಲಸ ಮಾಡುವಂತೆ ಪ್ರೋತ್ಸಾಹಿಸಿದ್ದಾರೆ