ದಾವಣಗೆರೆ : ಮೂರು ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ತನ್ನ ಖಾತೆ ತೆರೆದ ಹಿನ್ನೆಲೆಯಲ್ಲಿ ನಗರದ ಜಯದೇವ ವೃತ್ತದಲ್ಲಿ ಸ್ಥಳೀಯ ಬಿಜೆಪಿ ನಾಯಕರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.ಪಟಾಕಿಸಿಡಿಸಿದ ಬಿಜೆಪಿ ಕಾರ್ಯಕರ್ತರು ಮೋದಿ ಪರ ಜಯಘೋಷ ಕೂಗಿದರು, ಹರ್ ಹರ್ ಮೋದಿ, ಘರ್, ಘರ್ ಮೋದಿ ಎಂಬ ಜೈಕಾರ, ಬಿಜೆಪಿ ನಾಯಕರನ್ನು ಪ್ರಚೋದನೆಪಡಿಸಿತು.
ಕೇಸರಿ ಶಾಲು ಧರಿಸಿದ ಕಮಲ ಪಡೆ ಕಾರ್ಯಕರ್ತರು ಕುಣಿದು ಕುಪ್ಪಳಿಸಿದರು, ಬೇರೆ ತಾಲೂಕಿನಲ್ಲಿರುವ ಬಿಜೆಪಿ ಪಡೆ ದಾವಣಗೆರೆಗೆ ಆಗಮಿಸಿತ್ತು..ಈ ನಡುವೆ ಮಹಿಳಾ ಕಾರ್ಯಕರ್ತರು ಸೆಲ್ಪಿ ತೆಗೆದುಕೊಂಡರು. ಇನ್ನು ಸಂಭ್ರಮಾಚರಣೆಯಲ್ಲಿದ್ದ ನಾಯಕರು ತಾವಿರುವ ಪೋಟೋ, ವಿಡಿಯೋವನ್ನು ಸಾಮಾಜಿಕ ಜಾಲ ತಾಣದಲ್ಲಿ ಹಾಕುವ ಮೂಲಕ ಬಿಜೆಪಿಗೆ ಜೈ ಎಂದರು.
ಎರಡು ರಾಜ್ಯಗಳನ್ನು ಕಾಂಗ್ರೆಸ್ ಕಳೆದುಕೊಂಡಿದೆ.
ಈ ಹಿಂದೆ ಅಧಿಕಾರದಲ್ಲಿದ್ದ ಎರಡು ರಾಜ್ಯಗಳನ್ನು ಕಾಂಗ್ರೆಸ್ ಕಳೆದುಕೊಂಡಿದ್ದು, ಧೂಳಿಪಟವಾಗಿದೆ. ರಾಜಸ್ತಾನ,ಮಧ್ಯಪ್ರದೇಶ ಹಾಗೂ ಛತ್ತಿಸಘಡದಲ್ಲಿ ಬಿಜೆಪಿ ತನ್ನ ಪ್ರಾಬಲ್ಯ ತೋರಿಸಿದೆ ಎಂದು ಜಿಲ್ಲಾಧ್ಯಕ್ಷರು ಹೇಳಿದರು.
ಡುಪ್ಲಿಕೇಟ್ ಗ್ಯಾರಂಟಿಗೆ ಸಿಗಲಿಲ್ಲ ಗೆಲುವು.
ಕರ್ನಾಟಕದಲ್ಲಿ ಗ್ಯಾರಂಟಿ ಮೂಲಕ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಬೇರೆ ರಾಜ್ಯದಲ್ಲಿ ಇಂತಹದ್ದೇ ತಂತ್ರ ಹೂಡಿತು. ಆದರೆ ಡುಪ್ಲಿಕೇಟ್ ಗ್ಯಾರಂಟಿ ಕೆಲಸ ಮಾಡಲಿಲ್ಲ.ಈ ಫಲಿತಾಂಶ ಲೋಕಸಭಾ ಚುನಾವಣೆಯ ಗೆಲುವಿಗೆ ಸಹಕಾರಿಯಾಗಲಿದೆ. ಅಲ್ಲದೇ ಕಾರ್ಯಕರ್ತರ ಉತ್ಸಾಹ ಇಮ್ಮಡಿಸಿದೆ ಎಂದು ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ ಹೇಳಿದರು.
ಲೋಕಸಭೆಯ ಸೆಮಿ ಫೈನಲ್ ಅಂದುಕೊಂಡಿದ್ದ ಕಾಂಗ್ರೆಸ್
ವಿಧಾನ ಪರಿಷತ್ ಮಾಜಿ ಮುಖ್ಯಸಚೇತಕ ಡಾ.ಎ.ಎಚ್. ಶಿವಯೋಗಿಸ್ವಾಮಿ ಮಾತನಾಡಿ, ಕಾಂಗ್ರೆಸ್ ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿತ್ತು. ಅಲ್ಲದೇ ಲೋಕಸಭೆಯ ಸೆಮಿಫೈನಲ್ ಅಂದುಕೊಂಡು ಅಲ್ಲಿಯೂ ಕೂಡ ಗ್ಯಾರಂಟಿ ಪ್ಲೇ ಕಾರ್ಡ್ ಬಿಡುಗಡೆ ಮಾಡಿತು. ಈ ನಡುವೆ ಕರ್ನಾಟಕದಲ್ಲಿ ನೀಡಲಾದ ಗ್ಯಾರಂಟಿಗಳ ಮೋಸ ಜನರಿಗೆಬಗೊತ್ತಾಯಿತು. ದೇಶ ಉಳಿಯಬೇಕೆಂಬ ಕಾರಣದಿಂದ ಮೋದಿ ನಾಯಕತ್ವವನ್ನು ಜನರು ಒಪ್ಪಿಕೊಂಡರು ಎಂದರು. ಈ ಸಂದರ್ಭದಲ್ಲಿ ಬಿಜೆಪಿ ನಾಯಕರಾದ ಜಿ.ಎಸ್, ಅನಿತ್, ಶ್ರೀನಿವಾಸ ದಾಸಕರಿಯಪ್ಪ, ಕೆ.ಎಂ.ಸುರೇಶ್, ಡಿ.ಎಸ್ ಶಿವಶಂಕರ್
ಜಗದೀಶ್, ಭಾಗ್ಯ ಪಿಸಾಳೆ, ಧನಂಜಯ ಕಡ್ಲೇಬಾಳು, ಪುಷ್ಪ ವಾಲಿ, ತರಕಾರಿ ಶಿವು, ಟಿಂಕರ್ ಮಂಜಣ್ಣ, ಶಿವನಗೌಡ ಪಾಟೀಲ್ ಇದ್ದರು.