ದಾವಣಗೆರೆ ; ಕರ್ನಾಟಕದಲ್ಲಿ ಬೊಗಸ್ ಗ್ಯಾರಂಟಿ ನೀಡಿ ಗೆದ್ದಿದ್ದೇವೆ ಎಂಬ ಭರವಸೆಯಲ್ಲಿದ್ದ ಕಾಂಗ್ರೆಸ್ ನವರು ಪಂಚರಾಜ್ಯದ ಚುನಾವಣಾ ಫಲಿತಾಂಶದಿಂದ ಭ್ರಮನಿರಸಗೊಂಡಿದ್ದಾರೆ. ಈ ರಾಜ್ಯದಲ್ಲಿ ಜನರನ್ನು ಬಿಜೆಪಿ ಸೋಮಾರಿಯನ್ನಾಗಿ ಮಾಡದ ಕಾರಣ ಮೂರು ರಾಜ್ಯದಲ್ಲಿ ಗೆದ್ದಿದ್ದೇವೆ ಎಂದು ದಾವಣಗೆರೆ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಶ್ರೀನಿವಾಸ್ ದಾಸಕರಿಯಪ್ಪ ಹೇಳಿದ್ದಾರೆ.
ಪಂಚರಾಜ್ಯದ ಚುನಾವಣೆ ಗೆಲುವಿನ ಕುರಿತು ದಾವಣಗೆರೆ ವಿಜಯದೊಂದಿಗೆ ಮಾತನಾಡಿ, ಈ ರಾಜ್ಯಗಳಲ್ಲಿ ಕಾಂಗ್ರೆಸ್ ನ ಯಾವ ಗ್ಯಾರಂಟಿ ಯೋಜನೆ ಕೆಲಸ ಮಾಡಿಲ್ಲ. ದೇಶದ ಜನತೆ ದೇಶವನ್ನು ದಿವಾಳಿಯತ್ತ ಕರೆದೊಯ್ಯದೆ ಬಿಜೆಪಿಗೆ ಮತ ಹಾಕುವ ಮೂಲಕ ದೇಶ ಸದೃಢ ಗೊಳಿಸಿದ್ದಾರೆ.
ದೇಶ ಮಾರುತ್ತಾರೆಯೆಂದು ಕೈ ಪಡೆ ಸೋತಿತು.
ಕಾಂಗ್ರೆಸ್ ನವರ ಕೈಗೆ ಅಧಿಕಾರ ನೀಡಿದರೆ ಅವರು ದೇಶವನ್ನೇ ಮಾರುತ್ತಾರೆ ಎಂಬುದು ಜನತೆಗೆಗೊತ್ತಿದೆ. ಅದಕ್ಕಾಗಿ ಜನತೆ ಬಿಜೆಪಿ ಬೆಂಬಲಿಸಿದ್ದಾರೆ. ರಾಜಕೀಯತಂತ್ರಕ್ಕೆ ಪ್ರತಿತಂತ್ರ ಮಾಡುವುದು ಅನಿವಾರ್ಯವಾಗಿದ್ದು, ಅಲ್ಲಿ ಒಳ್ಳೆ ಯೋಜನೆಗಳನ್ನು ಘೋಷಿಸಿದವು. ಅಲ್ಲಿ ಬಿಜೆಪಿ ಜನಪರ ಯೋಜನೆಯ ಗ್ಯಾರಂಟಿ ನೀಡಲಾಗಿದೆಯೇ ಹೊರತು ಜನರನ್ನು ಸೋಮಾರಿಗಳನ್ನಾಗಿ ಮಾಡುವ ಗ್ಯಾರಂಟಿ ಬಿಜೆಪಿ ಪ್ರಣಾಳಿಕೆಯಲ್ಲಿ ಇಲ್ಲ.
ಬಿಜೆಪಿಗೆ ಕಾರ್ಯಕರ್ತರೇ ಶಕ್ತಿ
ರಾಜಸ್ಥಾನದಲ್ಲಿ,ಛತ್ತಿಸ್ ಘಡ,ಮಧ್ಯಪ್ರದೇಶದಲ್ಲಿ ಬಿಜೆಪಿಗೆ ಪ್ರತಿಯೊಬ್ಬರು ಶಕ್ತಿಯಾಗಿ ನಿಂತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಮತ್ತೆ ಬೆಂಬಲ ನೀಡಲಿದ್ದಾರೆ. ಮೋದಿಜೀ ಬಿಜೆಪಿಗೆ ದೊಡ್ಡ ಶಕ್ತಿ. .ಬಿಜೆಪಿ ದೊಡ್ಡ ಪಕ್ಷ ಇಲ್ಲಿವ್ಯಕ್ತಿ ದೊಡ್ಡವರಲ್ಲ.ಯಾರಿಗೇ ಟಿಕೇಟ್ ಕೊಡಲಿ ಎಲ್ಲರೂ ಪಕ್ಷದ ಗೆಲುವಿಗೆ ಕೆಲಸಮಾಡಲಿದ್ದೇವೆ ಎಂದರು.
ಪ್ರಧಾನಿ ಮೋದಿ ದೊಡ್ಡ ಶಕ್ತಿ
ನಾಲ್ಕು ರಾಜ್ಯದ ಚುನಾವಣಾ ಫಲಿತಾಂಶ ಬಂದಿದೆ. ಮೂರು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ.ಕಾಂಗ್ರೆಸ್ ನ ಗ್ಯಾರಂಟಿ ಯಾವುದೇ ಕೆಲಸ ಮಾಡಿಲ್ಲ.ತೆಲಂಗಾಣದಲ್ಲಿ ಮಾತ್ರ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಾಧ್ಯವಾಗಿದೆ. ಪ್ರಧಾನಿ ನರೇಂದ್ರ ಮೋದಿ ದೊಡ್ಡ ಶಕ್ತಿ ಎಂದು ಸಾಬೀತಾಗಿದೆ ಎಂದು ಸಂತಸಪಟ್ಟರು.
ಜನಪರ ಯೋಜನೆಯಿಂದ ಕೈಗೆ ಬಲ
ಕೇಂದ್ರದ ಅನೇಕ ಜನಪರಯೋಜನೆಗಳಿಂದ ಜನರು ಬಿಜೆಪಿ ಕೈಬಲಪಡಿಸಿದ್ದಾರೆ.ಬರುವ ಲೋಕಸಭಾ ಚುನಾವಣೆಯಲ್ಲಿ ದೇಶದ ಜನತೆ ಬಿಜೆಪಿಗೆ ಬಹುಮತ ನೀಡಿ ಮತ್ತೊಂದು ಬಾರಿ ಮೋದಿಯವರಿಗೆ ಅವಕಾಶ ನೀಡಬೇಕು ಎಂದರು.