
ಚಿತ್ರದುರ್ಗ : ನಟ ಪುನೀತ್ ರಾಜಕುಮಾರ್ ನಮ್ಮ ನಡುವೆ ಈಗಿಲ್ಲ, ಆದರೆ ಅವರು ಮಾಡಿದ ಸಹಾಯವನ್ನು ಇಂದಿಗೂ ಜನ ನೆನಸುತ್ತಾರೆ. ಅದೇ ರೀತಿ ಇಲ್ಲೊಬ್ಬ ಕೊಡುಗೈದಾನಿ ಸರಕಾರಿ ಮಕ್ಕಳ ಏಳ್ಗೆಗೆ ಶ್ರಮಿಸುತ್ತಿದ್ದಾರೆ…ಅಲ್ಲದೇ ತಮ್ಮ ಕೈಲಾದ ಸಹಾಯವನ್ನು ಮಾಡುವ ಮೂಲಕ ಬಡ ಮಕ್ಕಳ ಶ್ರೇಯೋಭಿವೃದ್ಧಿಗೆ ನೆರವಾಗುತ್ತಿದ್ದಾರೆ.
ಹೌದು…ಸಹಾಯ ದೊಡ್ಡದಾದರೇನೂ, ಸಣ್ಣದಾದರೇನೂ, ಇನ್ನೊಬ್ಬರಿಗೆ ನೆರವಾಗುವ ಮನಸ್ಸು ಇರಬೇಕು. ಅಂತ ಮನಸ್ಸು ಚಿತ್ರದುರ್ಗ ಜಿಲ್ಲೆಯ ಬಿಜೆಪಿ ಯುವ ನಾಯಕ ಜಿ.ಎಸ್.ಅನಿತ್ ಕುಮಾರ್ ಗೆ ಇದ್ದು, ಚಿತ್ರದುರ್ಗ ತಾಲೂಕಿನ ಕುರುಬರಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನೆರವಾಗಲೆಂದು ಕೊಡುಗೆಯಾಗಿ ಧ್ವನಿವರ್ಧಕ ನೀಡಿದ್ದಾರೆ. ಈ ಮೂಲಕ ಮಕ್ಕಳ ಮನರಂಜನೆಗೆ ನೆರವಾಗಿದ್ದಾರೆ. ಈ ಸಂಧರ್ಭದಲ್ಲಿ ಜಿ.ಎಸ್.ಅನಿತ್ ಕುಮಾರ್ ರನ್ನು ಸನ್ಮಾನಿಸಲಾಯಿತು. ಶಾಲೆಯ ಮುಖ್ಯೋಪಾಧ್ಯಾಯರಾದ ಉಮರ್ ಬಾಷಾ ಮತ್ತು ಎಸ್.ಡಿ.ಎಂ.ಸಿ ಸದಸ್ಯರುಗಳು ಉಪಸ್ಥಿತರಿದ್ದರು… .