Author: davangerevijaya.com

ದಾವಣಗೆರೆ : ರಾಜ್ಯದಲ್ಲಿ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಯಡಿಯೂರಪ್ಪ ಪುತ್ರ ವಿಜಯೇಂದ್ರ ಆಯ್ಕೆಯಾದ ಬೆನ್ನೇಲೆ ದೇವನಗರಿ ಬಿಜೆಪಿಯಲ್ಲಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆದಿದೆ. ಅದಕ್ಕಾಗಿ ಸ್ಥಳೀಯ ನಾಯಕರಾದ ಸಂಸದ ಜಿ.ಎಂ.ಸಿದ್ದೇಶ್ವರ ಹಾಗೂ ಮಾಜಿ ಶಾಸಕ ಎಸ್.ಎ.ರವೀಂದ್ರನಾಥ ಬೆಂಬಲಿಗರು ಅವರವರ ನಾಯಕರ ಸಂಪರ್ಕದಲ್ಲಿದ್ದಾರೆ. ಈಗಾಗಲೇ ಹಾಲಿ ಇರುವ ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ ಅಧಿಕಾರ ಅವಧಿ ಮುಗಿದು, ಒಂದು ವರ್ಷ ಕಳೆದಿದೆ. ಅದಕ್ಕಾಗಿಯೇ ಈಗ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆದಿದೆ. ಈ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ನಳೀನ್ ಕುಮಾರ್ ಕಟೀಲ್ ಅಧಿಕಾರವಾದಿ ಮುಗಿದಿದ್ದರೂ, ರಾಜ್ಯಾಧ್ಯಕ್ಷ ಸ್ಥಾನ ಸಿಕ್ಕಿರಲಿಲ್ಲ. ಅದಕ್ಕಾಗಿ ಜಿಲ್ಲಾ ಬಿಜೆಪಿಯಲ್ಲಿಯೂ ಸಹ ಜಿಲ್ಲಾಧ್ಯಕ್ಷರ ಆಯ್ಕೆ ಆಗಿರಲಿಲ್ಲ. ಈಗ ರಾಜ್ಯದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನ ಫಿಲ್ ಆಗಿರುವ ಕಾರಣ ಜಿಲ್ಲೆಯ ಬಿಜೆಪಿ ನಾಯಕತ್ವಕ್ಕಾಗಿ ಸೆಣಸಾಟನಡೆದಿದೆ‌. ಅದಕ್ಕಾಗಿ ತೆರೆಮರೆಯ ಆಟ ಕೂಡ ಜೋರಾಗಿದೆ. ಸದ್ಯ ಬಿಜೆಪಿ ನಾಯಕತ್ವ ಪಟ್ಟಕ್ಕಾಗಿ ಬಿಜೆಪಿ ನಾಯಕರಾದ ಜಗದೀಶ್, ಶ್ರೀನಿವಾಸ ದಾಸಕರಿಯಪ್ಪ, ಕೆ.ಎಂ.ಸುರೇಶ್, ರಾಜನಹಳ್ಳಿ ಶಿವಕುಮಾರ್ ಹೆಸರು ಜೋರಾಗಿ ಕೇಳಿ…

Read More

ಹೊನ್ನಾಳಿ : ಆಡುಮುಟ್ಟದ ಸೊಪ್ಪಿಲ್ಲ ಸಹಕಾರ ಸಂಘಗಳಿಲ್ಲದ ಊರು ಇಲ್ಲ ಎಂದು ಶಿಮುಲ್ ಉಪಾಧ್ಯಕ್ಷ ಬಸಪ್ಪ ಹೇಳಿದರು. ಹೊನ್ನಾಳಿ ತಾಲ್ಲೂಕಿನ ಗೊಲ್ಲರಹಳ್ಳಿಯ ತರಳಬಾಳು ಸಮುದಾಯ ಭವನದಲ್ಲಿ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಯೂನಿಯನ್, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್, ಶಿವಮೊಗ್ಗ ಜಿಲ್ಲಾ ಹಾಲು ಒಕ್ಕೂಟ, ಅವಳಿ ತಾಲ್ಲೂಕುಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘಗಳ ಸಹಯೋಗದಲ್ಲಿ ನಡೆದ 70ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರೋಪ ಸಮಾರಂಭದಲ್ಲಿ ಶಿಮುಲ್ ಉಪಾಧ್ಯಕ್ಷ ಬಸಪ್ಪ ಮಾತನಾಡಿದರು. ನಮ್ಮ ದೇಶದ ಮೊದಲ ಸಹಕಾರ ಸಂಘ ಕರ್ನಾಟಕದ ಗದಗ ಜಿಲ್ಲೆಯ ಕಣಗಿನಹಾಳದಲ್ಲಿ, 1905 ರಲ್ಲಿ ನೋಂದಾಯಿ ಸಲ್ಪಟ್ಟಿದೆ.  ಸಿದ್ದನಗೌಡ ಸಣ್ಣರಾಮನಗೌಡ ಅವರು ಸಂಸ್ಥಾಪಕ ಅಧ್ಯಕ್ಷರಾಗಿದ್ದರು ಮತ್ತು ಅವರನ್ನು ನಮ್ಮ ದೇಶದ ಸಹಕಾರ ಚಳವಳಿಯ ಪಿತಾಮಹ ಎಂದೇ ಕರೆಯಲಾಗುತ್ತದೆ ಎಂದು ಬಣ್ಣಿಸಿದರು. ಗದಗಿನಲ್ಲಿ ಸಣ್ಣದಾಗಿ ಸಂಘ ಪ್ರಾರಂಭಿಸಿದ್ದ ಸಹಕಾರ ಪಿತಾಮಹ ಸಿದ್ದನಗೌಡ ಸಣ್ಣರಾಮನಗೌಡ ಪರಿಣಾಮ ಇಂದು ಸಹಕಾರಿ ಸಂಘ ಹೆಮ್ಮರವಾಗಿ…

Read More

ದಾವಣಗೆರೆ: ರಾತ್ರಿ 12 ರ ನಂತರ ಏಕಾಂಗಿಯಾಗಿ ಮಹಿಳೆ ಓಡಾಟ ನಡೆಸಿದಾಗ ನಮಗೆ ಸ್ವತಂತ್ರ್ಯ ಸಿಕ್ಕಿದಂತೆ ಎಂದು ಮಹಾತ್ಮ ಗಾಂಧಿ ಹೇಳಿರುವುದನ್ನು ಆಗಾಗ ಎಲ್ಲರೂ ನೆನೆಸಿಕೊಳ್ಳುತ್ತಿದ್ದೀವಿ..ಆದರೀಗ ಅದು ದಾವಣಗೆರೆಯಲ್ಲಿ ಪ್ರಾಯೋಗಿಕವಾಗಿ ಬಳಕೆಯಾಗುತ್ತಿದೆ. ಇಷ್ಟೂ ದಿನ ರಾತ್ರಿ ಗಸ್ತಿಗೆ ಪುರುಷರು ಮಾತ್ರ ನೇಮಿಸಲಾಗುತ್ತಿತ್ತು..ಆದರೀಗ ಮಹಿಳೆಯರು ಪ್ರಥಮ ಬಾರಿಗೆ ರಾತ್ರಿ ಗಸ್ತಿಗೆ ಹೊರಡಲಿದ್ದು, ಎಸ್ಪಿ ಉಮಾಪ್ರಶಾಂತ್ ನಗರದ ಜಯದೇವ ವೃತ್ತದಲ್ಲಿ ಚಾಲನೆ ನೀಡಿದ್ದಾರೆ. ಜಿಲ್ಲೆಯಾದ್ಯಂತ ಮಹಿಳೆಯರು ಮತ್ತು ಮಕ್ಕಳಿಗೆ ರಕ್ಷಣೆ ಒದಗಿಸುವುದ ಕ್ಕಾಗಿ ಪೊಲೀಸ್ ಇಲಾಖೆಯು ಹಲವು ಯೋಜನೆಗಳಡಿ 24×7 ಕಾರ್ಯನಿರ್ವಹಿಸುತ್ತಿತ್ತು..ಈಗ ಆ ಸಾಲಿಗೆ ಮಹಿಳೆಯರು ಕೂಡ ಸೇರ್ಪಡೆಯಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ ಎನ್ನುವ ಮಾತಿನ ನಡುವೆಯೂ ನಿರ್ಭೀತಿವಾಗಿ ಮಹಿಳೆಯರು ರಾತ್ರಿ ಗಸ್ತು ತಿರುಗಲಿದ್ದು, ಪುಂಡಾಟ ಮಾಡುವವರಿಗೆ ಲಾಠಿ ಬೀಸಲಿದ್ದಾರೆ. ನಗರ ಹಾಗೂ ತಾಲೂಕುಗಳಲ್ಲಿ ಪೊಲೀಸ್ ಗಸ್ತು ವಾಹನ ರಾತ್ರಿ 11 ಗಂಟೆಯಿಂದ ಬೆಳಗ್ಗಿನ ಜಾವ 4 ಗಂಟೆಯವೆರೆಗೆ ಸಂಚರಿಸುತ್ತಿದ್ದು, ಇಬ್ಬರು ಪುರುಷರೊಂದಿಗೆ ಒಬ್ಬ ಮಹಿಳೆ ರಾತ್ರಿ ಗಸ್ತಿನಲ್ಲಿ ಇರುವರು‌ ರಾತ್ರಿ…

Read More