
ಭದ್ರಾವತಿ: ಆಕಾಶವಾಣಿ ಭದ್ರಾವತಿ ಕೇಂದ್ರ ಮಕ್ಕಳಿಗೆ ಬೇಸಿಗೆ ರಜೆಯಲ್ಲಿ ವಿವಿಧ ಹಾಡನ್ನು ಕಲಿಸಲು ನವೀನ ಕಾರ್ಯಕ್ರಮವನ್ನು ಏ:8 ರ ಸೋಮವಾರದಿಂದ ಪ್ರಸಾರ ಮಾಡಲಾಗುತ್ತಿದೆ.
ಪ್ರತೀ ಸೋಮವಾರ ಬೆಳಿಗ್ಗೆ 7.15 ರಿಂದ 7.30ರವರೆಗೆ 3ನೇ ವಯಸ್ಸಿನಿಂದ 10ನೇ ವಯಸ್ಸಿನ ಮಕ್ಕಳಿಗೆ ಚಿನ್ನರ ಗೀತೆಯನ್ನು ಕಲಿಸುವ ವಿನೂತನ ಕಾರ್ಯಕ್ರಮವನ್ನು ಸಿದ್ಧಪಡಿಸಿ ಪ್ರಸಾರಿಸುತ್ತಿದ್ದು, “ಹಾಡುತ್ತಾ ನಲಿಯೋಣ” ಸರಣಿಯಲ್ಲಿ ಪ್ರತೀ ವಾರ ಒಂದೊಂದು ಹಾಡನ್ನು ಕಲಿಸುತ್ತಿದ್ದು, ಕಲಿಸಿದ ಹಾಡನ್ನು ಪುಟಾಣಿಗಳು ಹಾವ ಭಾವ ದೊಂದಿಗೆ ಹಾಡಿ ಮೊಬೈಲ್ನಲ್ಲಿ ಚಿತ್ರೀಕರಿಸಿ ಆಕಾಶವಾಣಿ ಭದ್ರಾವತಿ ವಾಟ್ಸಾಪ್ ಸಂಖ್ಯೆ 9481572600 ಗೆ ಅಥವಾ ‘airbdvt@gmail.com’ ಈ-ಮೈಲ್ ಗೆ ಒಂದು ವಾರದ ಒಳಗೆ ಕಳುಹಿಸಿದರೆ ವೀಡಿಯೋ ಚಿತ್ರೀಕರಣ ಮಾಡಿ ಕಳುಹಿಸಿದ ಪುಟಾಣಿಗಳ ಹಾಡನ್ನು ಭದ್ರಾವತಿ ಆಕಾಶವಾಣಿಯ ಯೂಟ್ಯೂಬ್ ಚಾನಲ್ನಲ್ಲಿ ಅದನ್ನು ಪ್ರಕಟಿಸಿ ಆ ಮಕ್ಕಳ ಪ್ರತಿಭೆಯನ್ನು ಜಗತ್ತಿನಾದ್ಯಂತ ತಿಳಿಸುವ ಪ್ರಯತ್ನ ಮಾಡಲಾಗುವುದು.