ನಂದೀಶ್ ಭದ್ರಾವತಿ, ದಾವಣಗೆರೆ
ದಾವಣಗೆರೆಯಲ್ಲಿ ದಲಿತ ಸಮುದಾಯಕ್ಕೆ ಬಲ ತುಂಬಿದ್ದ ಐಎಎಸ್ ಅಧಿಕಾರಿ, ನಟ ಕೆಶಿವರಾಮ್ (71) ಗೆ ಹೃದಯಘಾತವಾಗಿದ್ದು, ಸ್ಥೀತಿ ಗಂಭೀರವಾಗಿದೆ.
ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ ಇವರು ದಾವಣಗೆರೆಗೆ ತನ್ನದೇ ಆದ ಕೊಡುಗೆ ನೀಡಿದ್ದಾರೆ. ಅಲ್ಲದೇ ಆಶ್ರಯ ಮನೆಗಳನ್ನು ಬಡವರಿಗೆ ನೀಡಿ ಇಲ್ಲಿನ ನಿವಾಸಿಗಳ ಅನ್ನದಾತರಾಗಿದ್ದಾರೆ.
ಸದ್ಯ ಇವರನ್ನು ಬೆಂಗಳೂರಿನ ಎಚ್ಸಿಜಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಿತಿ ಗಂಭೀರವಾಗಿದೆ. ಅಲ್ಲದೇ ಐಸಿಯುನಲ್ಲಿ ಡಯಾಲಿಸಿಸ್ ಚಿಕಿತ್ಸೆ ನೀಡಲಾಗುತ್ತಿದ್ದು, ವರದಿಗಳ ಪ್ರಕಾರ ಶಿವರಾಮ್ ಅವರ ಮಿದುಳು ನಿಷ್ಕ್ರೀಯವಾಗಿದೆ.. ಚಿಕಿತ್ಸೆಗೆ ಸ್ಪಂದಿಸುತ್ತಿದ್ದರೂ, ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಮೂಲಗಳು ತಿಳಿಸಿವೆ.
ಫೆ.3ರಂದು ಕೆ.ಶಿವರಾಮ್ ಅವರನ್ನು ದಾಖಲಾಗಿದ್ದರು. ಕಳೆದ 6 ದಿನಗಳ ಹಿಂದೆ ಶಿವರಾಮ್ಗೆ ಹೃದಯಾಘಾತವಾಗಿದೆ ಎಂದು ನಟ, ಅಳಿಯ ಪ್ರದೀಪ್ ಮಾಹಿತಿ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾವನನ್ನು ನೋಡಲು ನಟ ಪ್ರದೀಪ್ ಆಸ್ಪತ್ರೆಗೆ ಬಂದಿದ್ದೆನೆ, ಈ ವೇಳೆ, ಬಿಪಿ ಏರುಪೇರಾಗಿತ್ತು. ಈಗಲೂ ಅವರ ಬಿಪಿ ನಾರ್ಮಲ್ ಆಗ್ತಿಲ್ಲ. ಅವರ ಸ್ಥಿತಿ ಕ್ರಿಟಿಕಲ್ ಆಗಿದೆ ಎಂದು ಮಾಹಿತಿ ನೀಡಿದ್ದಾರೆ. ಅವರ ಆರೋಗ್ಯಕ್ಕಾಗಿ ಇಷ್ಟಪಡುವಂತಹ ಅಭಿಮಾನಿಗಳು ದೇವರನ್ನು ಪ್ರಾರ್ಥಿಸಿ ಎಂದು ಪ್ರದೀಪ್ ಮನವಿ ಮಾಡಿದ್ದಾರೆ.
ಕನ್ನಡದಲ್ಲಿ ಪ್ರಥಮ ಬಾರಿಗೆ ಪರೀಕ್ಷೆ ಬರೆದ ಕೆ.ಶಿವರಾಂ
ಕೆ. ಶಿವರಾಂ ಕನ್ನಡ ಭಾಷೆಯಲ್ಲಿ ಪ್ರಪ್ರಥಮವಾಗಿ ಐಎಎಸ್ ಪರೀಕ್ಷೆ ಬರೆದು ಪಾಸ್ ಮಾಡಿ ಐಎಎಸ್ ಅಧಿಕಾರಿಯಾಗಿದ್ದರು. ಚಲನಚಿತ್ರ ನಟರಾಗಿ ಹಾಗೂ ಛಲವಾದಿ ಮಹಾಸಭಾ ಸಂಸ್ಥಾಪಕ ರಾಜ್ಯಾಧ್ಯಕ್ಷರಾಗಿಯೂ ಕೆ.ಶಿವರಾಮು ಕೆಲಸ ಮಾಡಿದ್ದಾರೆ. ಕನ್ನಡ ಸಿನಿಮಾ ನಟರಾಗಿಯೂ ಜನಪ್ರಿಯತೆ ಪಡೆದಿದ್ದಾರೆ. ಮೂಲತಃ ರಾಮನಗರ ನಿವಾಸಿಯಾದ ಕೆ.ಶಿವರಾಂ ಕಾಂಗ್ರೆಸ್ ನಲ್ಲಿದ್ದು, ಅಲ್ಲಿ ಸರಿಯಾದ ಸ್ಥಾನಮಾನ ಸಿಗಲಿಲ್ಲವೆಂದು ಬಿಜೆಪಿಗೆ ಬಂದರು. ಸದ್ಯ ಕಳೆದ ಏರ್ಷಗಳಿಂದ ಬಿಜೆಪಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.