ದಾವಣಗೆರೆ :ಇದೇ 25 ರಂದು ನಡೆಯಲಿರುವ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿರ್ದೇಶಕ ಮಂಡಳಿ ಚುನಾವಣೆಯ ಅಂತಿಮ ಕಣದಲ್ಲಿ 23 ಅಭ್ಯರ್ಥಿಗಳು ಉಳಿದಿದ್ದಾರೆ.
13 ಕ್ಷೇತ್ರಗಳಿಗೆ ಸಲ್ಲಿಕೆಯಾಗಿದ್ದ ನಾಮಪತ್ರ ವಾಪಾಸು ಪಡೆಯಲು ಅಂತಿಮ ದಿನವಾದ ಶನಿವಾರ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಹಿಂಪಡೆದರು. ಅಂತಿಮವಾಗಿ 23 ಮಂದಿ ಕಣದಲ್ಲಿ ಉಳಿದಿದ್ದಾರೆ.
ಈ ಮಧ್ಯೆ ಜೆ.ಆರ್.ಷಣ್ಮುಖಪ್ಪ ಮತ್ತು ವೇಣುಗೋಪಾಲ ರೆಡ್ಡಿ ಅವರ ವಿರುದ್ಧ ಯಾರೂ ಕೂಡ ಉಮೇದುವಾರಿಕೆ ಸಲ್ಲಿಸದ ಕಾರಣದಿಂದ ಚುನಾವಣಾಧಿಕಾರಿ ನಜ್ಮಾ ಈ ಇಬ್ಬರ ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು.
ಚಿಹ್ನೆ ಹಂಚಿಕೆ
ಅಂತಿಮ ಕಣದಲ್ಲಿ ಉಳಿದ 23 ಅಭ್ಯರ್ಥಿಗಳಿಗೆ ಶನಿವಾರ ಸಂಜೆ ಚುನಾವಣಾಧಿಕಾರಿ ನಜ್ಮಾ ಚಿಹ್ನೆಗಳನ್ನು ಹಂಚಿಕೆ ಮಾಡಿದರು.
ಯಾರ್ಯಾರಿಗೆ ಯಾವ ಚಿಹ್ನೆ
ಭಾಗ 1 ಕ್ಷೇತ್ರ
1. ಕೆ.ಎನ್.ಮಂಜುನಾಥ್ – ಆಟೋ ರಿಕ್ಷಾ
2. ಬಿ.ಶೇಖರಪ್ಪ- ತೆಂಗಿನ ತೋಟ
ಭಾಗ 2 ಕ್ಷೇತ್ರ
1. ಕೆ.ಎಂ.ಅಶೋಕ್ ಕುಮಾರ್ – ಮುತ್ತಿನ ಹಾರ
2.ಬಿ.ಕರಿಬಸಪ್ಪ- ಆಟೋ ರಿಕ್ಷಾ
ಎ ವರ್ಗ ಹರಿಹರ ಕ್ಷೇತ್ರ
1. ಡಿ.ಕುಮಾರ್ -ಆಟೋರಿಕ್ಷಾ
2. ಬಿ.ಹಾಲೇಶಪ್ಪ-ದೂರವಾಣಿ
ಎ ವರ್ಗ ಹೊನ್ನಾಳಿ ತಾಲೂಕು
1. ಜಿ.ರಾಮನಗೌಡ-ಉಂಗುರ
2. ಡಿ.ಎಸ್ ಸುರೇಂದ್ರ -ಹಣ್ಣು ಇರುವ ಬ್ಯಾಸ್ಕೇಟ್
ಎ ವರ್ಗ ನ್ಯಾಮತಿ ತಾಲೂಕು
1. ಡಿ.ಬಿ.ಗಂಗಪ್ಪ -ಮೇಜು
2. ಡಿ.ಜಿ.ವಿಶ್ವನಾಥ್ -ಟಿಲ್ಲರ್
ಎ.ವರ್ಗ ಚನ್ನಗಿರಿ ತಾಲೂಕು
1.ಜಿ.ಎಸ್.ದೀಪಕ್ -ಉಂಗುರ
2.ಜಿ.ಎನ್.ಸ್ವಾಮಿ-ಹಣ್ಣು ಇರುವ ಬ್ಯಾಸ್ಕೆಟ್
ಎ.ವರ್ಗ ಚನ್ನಗಿರಿ ತಾಲೂಕು (ಭಾಗ-2)
1. ಕೆ.ನಾಗರಾಜ್-ಆಟೋರಿಕ್ಷಾ
2.ಜಿ.ಎಸ್.ಸಂತೋಷ್ -ಉಂಗುರ
ದಾವಣಗೆರೆ ಸಿ.ವರ್ಗ
1.ಕೋಗುಂಡಿ ಬಕ್ಕೇಶಪ್ಪ -ಹಣ್ಣು ಇರುವ ಬ್ಯಾಸ್ಕೇಟ್
2.ಎನ್.ಎ.ಮುರುಗೇಶ್ – ಬ್ಯಾಟ್
ಡಿ ವರ್ಗ ಭಾಗ-01, ದಾವಣಗೆರೆ-ಹರಿಹರ-ಜಗಳೂರು
1. ಜಗದೀಶಪ್ಪ ಬಣಕಾರ್ – ಗ್ಯಾಸ್ ಸಿಲಿಂಡರ್
2.ಸುರೇಶ್ ಕೆಂಚಮನಹಳ್ಳಿ-ಆಟೋ ರಿಕ್ಷಾ
ಡಿ ವರ್ಗ ಭಾಗ-02
1. ಎಚ್.ಕೆ.ಬಸಪ್ಪ, ಹಣ್ಣು ಇರುವ ಬ್ಯಾಸ್ಕೇಟ್
2.ಬಿ.ಜಿ.ಬಸವರಾಜಪ್ಪ-ಆಟೋ ರಿಕ್ಷಾ
3.ಜಿ.ಎಮ್.ಬಸವರಾಜಪ್ಪ-ಟ್ರಕ್
ದಾವಣಗೆರೆ ಇ ವರ್ಗ
1.ಮುದೇಗೌಡ್ರು ಗಿರೀಶ್ -ಆಟೋರಿಕ್ಷಾ
2.ಬೇತೂರು ರಾಜಣ್ಣ-ಹೊಲಿಗೆ ಯಂತ್ರ