ದಾವಣಗೆರೆ : ಮಧ್ಯ ಕರ್ನಾಟಕ ದಾವಣಗೆರೆ ಜಿಲ್ಲೆಯಲ್ಲಿ ಬಿಜೆಪಿ ಪಕ್ಷ ಸಂಘಟಿಸಿ, ಸೋಲಿಗೆ ಕುಗ್ಗದೆ, ಗೆಲುವಿಗೆ ಹಿಗ್ಗದ ಜವಾರಿ ಮುಖಂಡ ಎಸ್.ಎ.ರವೀಂದ್ರನಾಥ ಇದೇ ನವೆಂಬರ್ 29 ರಂದು ಜನ್ಮ ದಿನಾಚರಣೆಯ ಸಂಭ್ರಮದಲ್ಲಿದ್ದಾರೆ.
ಈ ಬಗ್ಗೆ ಬಿಜೆಪಿ ಕಾರ್ಯಕರ್ತರು ಹಾಗೂ ಲೋಕಸಭಾ ಕ್ಷೇತ್ರದ ಪ್ರಬಲ ಆಕಾಂಕ್ಷಿಗಳಾದ ಕೆ.ಬಿ ಕೊಟ್ರೇಶ್ ಅವರು ಎಸ್ ಎ ಆರ್ ಅವರೊಂದಿಗಿನ ಒಡನಾಟವನ್ನು ನಮ್ಮೊಂದಿಗೆ ಬಿಚ್ವಿಟ್ಟಿದ್ದಾರೆ.ಎಸ್ ಎ.ರವೀಂದ್ರನಾಥ ಅವರ ವ್ಯಕ್ತಿತ್ವ ಹಾಗೂ ಆತ್ಮೀಯತೆಯ ಬಗ್ಗೆ ದಾವಣಗೆರೆ ವಿಜಯದೊಂದಿಗೆ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.
ಆರ್ ಎಸ್ ಎಸ್ ಬಿಟ್ಟು ಎಸ್ ಎ ಆರ್ ಇಲ್ಲ….ಅದೇ ರೀತಿ ದಾವಣಗೆರೆಯಲ್ಲಿ ಎಸ್ ಎ ಆರ್ ಬಿಟ್ಟು ಸಂಘ ಇಲ್ಲ ರವೀಂದ್ರನಾಥ ಅವರು ಸಂಘಪರಿವಾರದ ಜೊತೆಗೆ ಬೆಳೆದು ಕೆಲಸಗಳನ್ನು ಮಾಡಿ ಜನರನ್ನು ಬೆಳೆಸಿ ಗಮನಸೆಳೆದಿದ್ದಾರೆ. ರಾಜ್ಯದಲ್ಲೇ ಮಾದರಿಯಾದವರು ಎಸ್ ಎ ಆರ್ ಎಂದು ಮೆಲುಕು ಹಾಕಿದರು.
ನಮ್ಮಂತಹ ಸಣ್ಣ ಕಾರ್ಯಕರ್ತರನ್ನು ಅವರು ಗುರುತಿಸುತ್ತಾರೆ ಹಾಗೂ ಗಮನಿಸುತ್ತಾರೆ .ಅದರಲ್ಲಿ ನಾನು ಕೂಡ ಒಬ್ಬ.ನಾನು ಕೂಡ ಅವರ ಆದರ್ಶಗಳನ್ನು ಇಷ್ಟಪಡುವ ವ್ಯಕ್ತಿ.ಆತ್ಮೀಯವಾಗಿ ಮಾತನಾಡುವ ವ್ಯಕ್ತಿತ್ವ ಅವರದ್ದು.
ಎಸ್ ಎ ರವೀಂದ್ರನಾಥ ಅವರಿಗೆ ಮಂಡಕ್ಕಿ ಮೆಣಸಿನಕಾಯಿ ಬಹಳ ಪ್ರೀತಿ ಕಾರಣ ಮೂಲತಃ ಕೃಷಿಕರ ಕುಟುಂಬದಿಂದ ಬಂದ ವ್ಯಕ್ತಿ ಎಸ್ ಎ ಆರ್ ಅವರು ಜಿಲ್ಲೆಯಲ್ಲಿ ಪಕ್ಷವನ್ನು ತಳಮಟ್ಟದಿಂದ ಕಟ್ಟಿದವರು.ರೊಟ್ಟಿ ಮುದ್ದೆ ಪ್ರಿಯರು.
ಮಂಡಕ್ಕಿಯಿಂದ ಬಿಜೆಪಿ ಕಟ್ಟಿದವರು
ಸಹಜವಾಗಿದಾ ವಣಗೆರೆಯ ಮಂಡಕ್ಕಿ ಮೆಣಸಿನ ಕಾಯಿ ಇಷ್ಟಪಡುವವರು.ಮಂಡಕ್ಕಿ ಮೆಣಸಿನ ಕಾಯಿ ಸವಿಯುವ ತಾಣದಲ್ಲಿ ಅನೇಕ ಚರ್ಚೆಗಳು ಹುಟ್ಟಿಕೊಂಡಿದ್ದವು.ದಾವಣಗೆರೆ ಯಲ್ಲಿ ಬಿಜೆಪಿ ಬೆಳೆಯಲು ಮೂಲಕಾರಣ ರವೀಂದ್ರನಾಥ್ . ಮಂಡಕ್ಕಿಯಿಂದ ಬಿಜೆಪಿ ಕಟ್ಟಿದವರು. ಅಲ್ಲದೇಕಾರ್ಯಕರ್ತರ ಮಾತುಗಳನ್ನು ಆಲಿಸಿ ನಂತರ ಒಂದೇ ವಾಕ್ಯದಲ್ಲಿ ಉತ್ತರ ನೀಡುತ್ತಾರೆ ಹಾಗೂ ಆ ವಾಕ್ಯದಲ್ಲಿ ತೂಕ ವಿರುತ್ತದೆ ಅದು ಅವರ ಬುದ್ದಿವಂತಿಕೆ.ಅಂತಹ ತೀಕ್ಷ್ಣ ತೆ ಅವರದು.ಅಂತಹ ವ್ಯಕ್ತಿತ್ವ ಅವರದು.
ಸರಳ ಸಜ್ಜನಿಕೆ ವ್ಯಕ್ತಿ
ಜನಾನುರಾಗಿರುವ ಎಸ್. ಎ. ರವೀಂದ್ರನಾಥ್ ಅನಿವಾರ್ಯ ಕಾರಣಗಳಿಂದ ರಾಜಕೀಯಕ್ಕೆ ಬಂದವರು.ಅನೇಕ ರೈತರಿಗೆ ಶ್ರಮಿಕ ವರ್ಗದ ಜನರಿಗೆ ತಮ್ಮ ಕೈಲಾದ ಕೆಲಸಗಳನ್ನು ಮಾಡಿದ್ದಾರೆ.ಈಗಲೂ ಕೂಡ ಕಾರ್ಯಕರ್ತರನ್ನು ಎಸ್ ಎ ಆರ್ ಬಗ್ಗೆ ಕೇಳಿದರೆ ಬರುವುದೊಂದೆ ಮಾತು ಅದು ಸರಳ ಸಜ್ಜನಿಕೆಯ ವ್ಯಕ್ತಿ ಎಂದು ಕೊಟ್ರೇಶ್ ಹೇಳಿದರು.
ಜನ್ಮ ದಿನ: ಇದೇ ನ.೨೬ ರಂದು ರಾಜ್ಯ ಕಂಡ ಹಿರಿಯ ಮುತ್ಸದಿ ಯುವಕರಿಗೆ ಸ್ಪೂರ್ತಿದಾಯಕ ನಾಯಕ ಎಸ್ ಎ ರವೀಂದ್ರನಾಥ ಜನ್ಮದಿನ ಅವರ ಜನ್ಮದಿನ ನಿರಂತರವಾಗಿರಲಿ ಎಲ್ಲರಿಗೂ ಮಾರ್ಗದರ್ಶಕವಾಗಲಿ ನಾನು ಕಂಡ ಸರಳ ಸಜ್ಜನಿಕೆಯ ವ್ಯಕ್ತಿತ್ವ ರವೀಂದ್ರನಾಥ ಅವರದ್ದು
ಈ ಹಿಂದೆ ಅವರು ರಾಜ್ಯದ ಸಕ್ಕರೆ ಸಚಿವರಾಗಿದ್ದ ವೇಳೆ ನಾನು ಬಳ್ಳಾರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಮಯ ಆಗ ಕಾರ್ಯನಿಮಿತ್ತ ನಾನು ಬೆಂಗಳೂರಿಗೆ ತೆರಳಿದ್ದ ವೇಳೆ ಆಕಸ್ಮಿಕವಾಗಿ ಅವರ ಭೇಟಿಯಾಯಿತು ಅಂದು ಖಾಸಗಿ ಹೋಟೇಲ್ ನಲ್ಲಿ ಸಿಕ್ಕರು ನಾನೂ ಕೂಡ ನನ್ನ ಪರಿಚಯ ಮಾಡಿಕೊಂಡೆ ಆಗ ಹೊಟೇಲ್ ಬಿಲ್ ಕೊಡುವ ವೇಳೆ ನಯವಾಗಿ ನನ್ನನ್ನು ಗದರಿದ ಅವರೇ ಬಿಲ್ ಪೇ ಮಾಡಿದ್ದರು ಅಂತಹ ವ್ಯಕ್ತಿತ್ವ ಅವರದು.
ಆತ್ಮೀಯತೆ :ಕೇವಲಮೊದಲ ಭೇಟಿಯಲ್ಲೇ ಆತ್ಮೀಯತೆ ತೊರಿದವರು ಅಂತಹ ವ್ಯಕ್ತಿಗೆ ೮೮ ಅಲ್ಲ ೯೮ ,೧೦೦ ವರ್ಷ ಆಯಸ್ಸು ಹೆಚ್ಚಲಿ ಎಂದು ಶುಭಹಾರೈಸಿದರು. ಹಾಗೂ ಅವರ ಜನ್ಮದಿನವನ್ನು ಹಬ್ಬದ ರೀತಿ ಆಚರಣೆ ಮಾಡೋಣ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.