*01,💫ಮೇಷರಾಶಿ💫*
📖,ಮನೆಯಲ್ಲಿ ಅಶಾಂತಿ ಇದರಿಂದ ನಿಮಗೆ ನೀವೇ ಅನಗತ್ಯ ಮಾನಸಿಕ ಒತ್ತಡವನ್ನು ತಂದುಕೊಳ್ಳುವಿರಿ, ನಿಮಗೆ ಇಂದು ಹಿರಿಯ ಅಧಿಕಾರಿಗಳು ನಾಯಕತ್ವವನ್ನು ನೀಡುವರು, ಆರೋಗ್ಯದಲ್ಲಿ ಏರುಪೇರು. ನಿಮ್ಮ ಸಂಗಾತಿಯಿಂದ ಧನ ಸಹಾಯ ಆಗುವುದು.
ನಿಮ್ಮ ಸಮಸ್ಯೆಗಳನ್ನು ಮರೆತು ಕುಟುಂಬದ ಸದಸ್ಯರೊಂದಿಗೆ ಒಳ್ಳೆಯ ಸಮಯ ಕಳೆಯಿರಿ,
*🪔,ವಿಜ್ಞೇಶ್ವರನ ದರ್ಶನ ಮಾಡಿ,🪔*
*02,💫ವೃಷಭರಾಶಿ💫*
📖,ನಿಮ್ಮ ಕೆಲಸಕಾರ್ಯಗಳಲ್ಲಿ ಹೆಚ್ಚು ಹೆಚ್ಚು ಲಾಭ ಪಡೆಯುವ ಪರಿಪೂರ್ಣ ದಿನ. ಇಂದು ನಿಮಗೆ ಧನ ಲಾಭ ಆಗುವ ಸಂಭವ. ಹಳೆಯ ಸ್ನೇಹಿತರ ಬೇಟಿ ಆಗುವುದು, ನೀವು ಒಂದು ವಾದದಲ್ಲಿ ಸಿಲುಕಿಕೊಂಡಲ್ಲಿ ಕಠಿಣ ಮಾತುಗಳನ್ನಾಡದಂತೆ ಎಚ್ಚರಿಕೆ ವಹಿಸಿ. ತಂದೆ ತಾಯಿಯರ ಆಶೀರ್ವಾದ ಪಡೆದು ನಿಮ್ಮ ಹೊಸ ಯೋಜನೆಗಳನ್ನೂ ಪ್ರಾರಂಭಿಸಿ,
*🪔,ಗುರುಗಳ ದರ್ಶನ ಪಡೆಯಿರಿ,🪔*
*03,💫ಮಿಥುನ ರಾಶಿ💫*
📖,ಇಂದು ಕೈಗೊಂಡ ನಿರ್ಮಾಣ ಕಾರ್ಯ ನಿಮಗೆ ತೃಪ್ತಿಯಾಗುವ ಹಾಗೆ ಪೂರ್ಣಗೊಳ್ಳುತ್ತದೆ. ಯಾರನ್ನು ಕಾರಣವಿಲ್ಲದೆ ನೋಯಿಸಬೇಡಿ. ಮಕ್ಕಳ ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನ ಹರಿಸಬೇಕಾಗಿದೆ. ಬಂದು ಮಿತ್ರರಿಂದ ಅನುಕೂಲವಾಗುವುದು. ಅನಿರೀಕ್ಷಿತ ಪ್ರಯಾಣ ಮಾಡುವ ಸಂಭವವಿದೆ. ತೃಪ್ತಿಕರ ಫಲಿತಾಂಶಗಳನ್ನು ಪಡೆಯಲು ಸರಿಯಾಗಿ ಯೋಜನೆ ಹಾಕಿ,
*🪔,ಬಡವರಿಗೆ ಹಾಗೂ ವೃದ್ಧರಿಗೆ ಸಹಾಯ ಮಾಡಿ,🪔*
*04,💫ಕಟಕ ರಾಶಿ💫*
📖,ನಿಮ್ಮ ಧೀರ್ಘಕಾಲೀನ ಅನಾರೋಗ್ಯದ ಸಮಸ್ಯೆ ಹೆಚ್ಚಾಗುವುದು, ಜೊತೆಗೆ ಓಡಾಟ, ನಿಮ್ಮನ್ನು ಮಾನಸಿಕವಾಗಿ ಇನ್ನಷ್ಟು ಕುಗ್ಗಿಸುವುದು. ನೀವು ಸಮಸ್ಯೆಗಳನ್ನು ಪರಿಹರಿಸಲು ಯತ್ನಿಸುತ್ತಿದ್ದಂತೆ ಒತ್ತಡ ನಿಮ್ಮ ಮನಸ್ಸನ್ನು ಅವರಿಸುತ್ತದೆ. ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಗಳಿಗೆ ಅತ್ಯುತ್ತಮ ದಿನ. ಮನೆಯಲ್ಲಿ ಸಂಬಂಧಿಕರಿಂದ ಕಿರಿಕಿರಿ. ದೂರ ಪ್ರಯಾಣ ಉತ್ತಮವಲ್ಲ, ಅರೋಗ್ಯ ಕಡೆ ಗಮನ ಹರಿಸಿ,
*🪔,ಕಾಗೆಗಳಿಗೆ ಆಹಾರ ನೀಡಿ,🪔*
*05,💫ಸಿಂಹ ರಾಶಿ💫*
📖,ನಿಮ್ಮ ಆತ್ಮ ವಿಶ್ವಾಸದಿಂದ ನಿಮ್ಮ ವ್ಯಾಪಾರ ವ್ಯವಹಾರದಲ್ಲಿ, ಹಾಗೂ ಕೆಲಸ ಕಾರ್ಯಗಳಲ್ಲಿ ಜಯವನ್ನು ಸಾಧಿಸುವಿರಿ, ನಿಮ್ಮ ಕುಟುಂಬಕ್ಕೆ ಸೂಕ್ತ ಸಮಯ ನೀಡಿ. ದೂರದ ಪ್ರಯಾಣ ಒಳ್ಳೆಯದಲ್ಲ, ಸಾಮಾಜಿಕ ಕಾರ್ಯಗಳಿಗೆ ಹಾಜರಾಗಲು ಅವಕಾಶಗಳಿರಬಹುದು ಹಾಗೂ ಇದು ನೀವು ಪ್ರಭಾವಿ ವ್ಯಕ್ತಿಗಳ ಜೊತೆ ನಿಕಟ ಸಂಪರ್ಕ ಹೊಂದಬಹುದು,
*🪔,ಶ್ರೀ ಆಂಜನೇಯ ಸ್ವಾಮಿ ದರ್ಶನ ಮಾಡಿ,🪔*
*06,💫ಕನ್ಯಾ ರಾಶಿ💫*
📖,ನಿಮ್ಮ ಸ್ನೇಹಿತರು ಇಂದು ನಿಮ್ಮ ಸಂತೋಷಕ್ಕೆ ಕಾರಣರಾಗುತ್ತಾರೆ. ಮನೆಯವರಿಂದ ಅನುಕೂಲವಾಗುತ್ತದೆ, ಇಂದು ನಿಮ್ಮ ಕೆಲಸ ಕಾರ್ಯಗಳಿಗೆ ಉತ್ತಮ ದಿನವಾಗಿದೆ, ಹೊಸ ಯೋಜನೆಗಳಿಗೆ ನಾಂದಿ ಹಾಡಬಹುದು. ಇಂದು ನೀವು ನಿಜವಾಗಿಯೂ ಲಾಭ ಪಡೆಯಬಯಸಿದರೆ, ಇತರರು ನೀಡಿದ ಸಲಹೆಯನ್ನು ಕೇಳಿ. ದನಲಾಭವಾಗುವುದು. ಹೆಚ್ಚು ಓಡಾಟದಿಂದ ಸುಸ್ತಾಗುವಿರಿ,
*🪔,ಶ್ರೀ ಸಾಯಿಬಾಬಾರ ದರ್ಶನ ಪಡೆಯಿರಿ,🪔*
*07,💫ತುಲಾ ರಾಶಿ💫*
📖,ಮನೆಯಲ್ಲಿ ಕಲಹಗಳು ನಿಮ್ಮನ್ನು ಮಾನಸಿಕ ಒತ್ತಡದಲ್ಲಿರಿಸುತ್ತದೆ. ನಿಮ್ಮನ್ನು ಹೆಚ್ಚು ಪ್ರೀತಿಸುವ ವ್ಯಕ್ತಿಯನ್ನು ನೋವಿಸದಿರಿ, ನೀವು ಇಂದು ಕೆಲಸದಲ್ಲಿ ಎಲ್ಲದರಲ್ಲೂ ಮೇಲುಗೈ ಸಾಧಿಸಬಹುದು. ನಿಮ್ಮ ಕಾರ್ಯ ಸಾಧನೆಗೆ ಹಿರಿಯ ಅಧಿಕಾರಿಗಳ ಸಲಹೆ ಪಡೆಯಿರಿ. ನಿಮ್ಮ ಖರ್ಚುಗಳನ್ನು ನಿಯಂತ್ರಿಸಲು ಮತ್ತು ಕೇವಲ ಅಗತ್ಯವಾದ ವಸ್ತುಗಳ ಮಾತ್ರ ಇಂದು ಖರೀದಿಸಲು ಪ್ರಯತ್ನಿಸಿ,
*🪔,ಶ್ರೀಲಕ್ಷ್ಮಿವೆಂಕಟೇಶ್ವರನ ಪ್ರಾರ್ಥನೆ ಮಾಡಿ,🪔*
*08,💫ವೃಶ್ಚಿಕ ರಾಶಿ💫*
📖,ಹೊರ ತಿಂಡಿಗಳನ್ನು ತಿನ್ನುವಾಗ ಮತ್ತು ಕುಡಿಯುವಾಗ ಎಚ್ಚರದಿಂದಿರಿ. ಅಸಡ್ಡೆ ನಿಮಗೆ ಅನಾರೋಗ್ಯ ತರಬಹುದು. ನಿಮ್ಮ ಖರ್ಚುಗಳಲ್ಲಿ ಅನಿರೀಕ್ಷಿತ ಏರಿಕೆಯಿಂದ ನಿಮ್ಮ ಮನಸ್ಸಿನ ಶಾಂತಿಗೆ ಭಂಗ ತರುತ್ತದೆ. ನಿಮ್ಮ ಸ್ನೇಹಿತರಿಂದ ಅನುಕೂಲವಾಗುವುದು, ನಿಮ್ಮ ಕಾರ್ಯ ಸಾಧನೆಗೆ ಹಿರಿಯ ಅಧಿಕಾರಿಗಳ ಸಲಹೆ ಪಡೆಯುವುದು ಉತ್ತಮ,
*🪔,ತಂದೆ ತಾಯಿಯರ ಆಶೀರ್ವಾದ ಪಡೆಯಿರಿ. ಶ್ರೀ ಲಕ್ಷ್ಮಿ ವೆಂಕಟೇಶ್ವರನ ಪ್ರಾರ್ಥನೆ ಮಾಡಿ,🪔*
*09,💫ಧನಸ್ಸು ರಾಶಿ💫*
📖,ವ್ಯಾಪಾರದ ಉದ್ದೇಶದಿಂದ ಕೈಗೊಂಡ ಪ್ರಯಾಣ ದೀರ್ಘಾವಧಿಯಲ್ಲಿ ಪ್ರಯೋಜನಕಾರಿಯಾಗಲಿದೆ. ಸ್ನೇಹಿತರು ಹಾಗೂ ನಿಮ್ಮ ಹಿರಿಯರ ಸಹಾಯ ದೊರಕಲಿದೆ. ವ್ಯಾಪಾರದಲ್ಲಿ ಹೆಚ್ಚು ಲಾಭ ಗಳಿಸುವುದು ಕಷ್ಟವಾಗಿದೆ. ಹತ್ತಿರದ ಸಹೋದ್ಯೋಗಿಗಳ ಜೊತೆ ಹಲವಾರು ಭಿನ್ನಾಭಿಪ್ರಾಯಗಳು ಉದ್ಭವಿಸಬಹುದಾದ ಒತ್ತಡ ತುಂಬಿದ ದಿನ,
*🪔,ಶ್ರೀ ಗುರುಪಾದುಕಾ ಪೂಜೆಯನ್ನು ಮಾಡಿಸಿ,🪔*
*10,💫ಮಕರ ರಾಶಿ💫*
📖,ಇಂದು ನಿಮಗೆ ತುಂಬ ಉನ್ನತ ಶಕ್ತಿಯಿರುವ ದಿನ ಮತ್ತು ನೀವು ಸಣ್ಣ ಸಣ್ಣ ವಿಷಯಗಳಿಂದ ಕಿರಿಕಿರಿಗೊಳ್ಳುತ್ತೀರಿ. ಬುದ್ಧಿವಂತ ಹೂಡಿಕೆಗಳು ಮಾತ್ರ ಆದಾಯಗಳನ್ನು ನೀಡುತ್ತವೆ ಆದ್ದರಿಂದ ನೀವು ಕಷ್ಟಪಟ್ಟುಗಳಿಸಿದ ನಿಮ್ಮ ಹಣವನ್ನು ಎಲ್ಲಿ ಹೂಡಬಯಸುತ್ತೀರೆನ್ನುವಲ್ಲಿ ಖಚಿತತೆಯಿರಲಿ. ಯಾವುದೇ ಜಂಟಿ ವ್ಯವಹಾರಗಳು ಮಾಡುವ ಮೊದಲು ವ್ಯಕ್ತಿಯ ವಿಶ್ವಾಸಾರ್ಹತೆ ಮತ್ತು ಪ್ರಾಮಾಣಿಕತೆಯನ್ನು ದೃಢೀಕರಿಸಿ,
*🪔,ಮನೆ ದೇವರ ದರ್ಶನ ಮಾಡಿ🪔*
*11,💫ಕುಂಭ ರಾಶಿ💫*
📖,ನೀವು ಹೆಚ್ಚು ಹಣ ಪಡೆಯುವ ಬಯಕೆ ಹೊಂದಿರುತ್ತೀರಿ. ನೀವು ಕೇವಲ ನಿಮ್ಮ ಸುತ್ತ ಏನು ನಡೆಯುತ್ತಿದೆ ಎಂಬುದನ್ನು ತಿಳಿದಿದ್ದರೆ ಸಾಕು. ಹೆಚ್ಚು ದುಂದು ವೆಚ್ಚ ಮಾಡದಿರಿ. ದೂರ ಪ್ರಯಾಣ ಮಾಡುವ ಸಾಧ್ಯತೆಗಳಿವೆ, ಕೆಲಸ ಕಾರ್ಯಗಳಲ್ಲಿ ಜಯ ನಿಮ್ಮದಾಗಲಿದೆ. ಯಾರ ಮೇಲೂ ಅವಲಂಬನೆ ಆಗದೆ ಕೆಲಸ ಮಾಡಿದರೆ ಇಂದು ನೀವು ನಿಜವಾಗಿಯೂ ಲಾಭ ಪಡೆಯಬಹುದು,
*🪔,ಶ್ರೀ ಶಿವನಾಮ ಸ್ಮರಣೆ ಮಾಡಿ,🪔*
*12,💫ಮೀನ ರಾಶಿ💫*
📖,ಬೆಂಬಲ ನೀಡುವ ಸ್ನೇಹಿತರು ನಿಮ್ಮನ್ನು ಸಂತೋಷವಾಗಿರಿಸುತ್ತಾರೆ. ನೀವು ತ್ವರಿತ ಹಣ ಪಡೆಯುವ ಬಯಕೆ ಹೊಂದಿರುತ್ತೀರಿ. ಸಂಬಂಧಿಗಳು ನಿಮ್ಮ ಅತೀ ಉದಾರ ವರ್ತನೆಯ ಅನುಚಿತ ಲಾಭ ಪಡೆಯಲು ಪ್ರಯತ್ನಿಸುತ್ತಾರೆ. ಮೋಸ ಹೋಗಬೇಡಿ, ಸಂಬಂಧಿಕರಿಂದ ತೊಂದರೆಯನ್ನು ಅನುಭವಿಸುವಿರಿ. ಮನೆಯವರೊಂದಿಗೆ ಸ್ವಲ್ಪ ಸಮಯ ಕಳೆಯಿರಿ,*🪔,ಶ್ರೀಗುರುರಾಘವೇಂದ್ರನ ದರ್ಶನ ಪಡೆಯಿರಿ,🪔*