
ದಾವಣಗೆರೆ: ವಿಜಯಪುರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರನ್ನು ಆರು ವರ್ಷಗಳ ಕಾಲ ಬಿಜೆಪಿಯಿಂದ ಉಚ್ಛಾಟನೆ ಮಾಡಿದ ನಂತರ ಕಮಲ ಪಡೆಯುವ ವಿರುದ್ಧ ಬಂಡಾಯ ಸಾರಿದ್ದ ನಾಯರು ಈಗ ಸೈಲೆಂಟ್ಆಗಿದ್ದಾರೆ. ಯತ್ನಾಳ ಕಿಕ್ಔಟ್ ಆದ ನಂತರ ಬಿಜೆಪಿಯಲ್ಲಿ ಒಗಟ್ಟು ಮೂಡಿದ್ದು ರಾಜ್ಯ ಸರ್ಕಾರದ ವಿರುದ್ಧ ಒಂದು ತಿಂಗಳು ಪರ್ಯಾಂತ ಹೋರಾಟ ನಡೆಸಲು ಮುಂದಾಗಿದೆ. ಹಾಗಾದ್ರೆ ಬಿಜೆಪಿ ಹೋರಾಟ ಹೇಗೆ ಇರಲಿದೆ? ವಿಜಯೇಂದ್ರ ಎಲ್ಲರನ್ನೂ ಒಗ್ಗಟ್ಟಿನಿಂದ ಕರೆದೊಯ್ಯುತ್ತಾರಾ? ಇಲ್ಲಿದೆ ಮಹತ್ವ ಸ್ಟೋರಿ
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಫುಲ್ ಯಾಕ್ಟಿವ್ ಆಗಿದ್ದಾರೆ. ತಮ್ಮ ವಿರೋಧಿಗಳನ್ನು ಪಕ್ಷದಿಂದ ಉಚ್ಛಾಟನೆ ಮಾಡಿದ ನಂತರ ಬಿಜೆಪಿ ಪಕ್ಷ ಸಂಘಟನೆಗೆ ಮುಂದಾಗಿದ್ದಾರೆ. ರಾಜ್ಯ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ಎರಡು ದಿನಗಳ ಕಾಲ ಬೃಹತ್ ಪ್ರತಿಭಟನೆ ನಡೆಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದ ಕಮಲ ಪಾಳೆಯ ಈಗ ಒಂದು ತಿಂಗಳ ಪರ್ಯಾಂತ ಹೋರಾಟ ನಡೆಸಲು ಮುಂದಾಗಿದೆ. ಜನಾಕ್ರೋಶ ಯಾತ್ರೆ ಹೆಸರಿನಲ್ಲಿ ರಾಜ್ಯಾದ್ಯಂತ ಸರ್ಕಾರದ ವಿರುದ್ಧ ಹೋರಾಟ ಮಾಡಲು ಮುಂದಾಗಿದೆ.
ರಾಜ್ಯ ಸರ್ಕಾರದ ಬೆಲೆ ಏರಿಕೆ, ಮುಸ್ಲಿಂ ಓಲೈಕೆ, ದಲಿತರ ಹಣ ಲೂಟಿ, ರೈತರ ಕಡೆಗಣನೆ, ಭ್ರಷ್ಟಾಚಾರದ ವಿರುದ್ದ ಹೋರಾಟಕ್ಕೆ ಮುಂದಾಗಿದೆ. ಏ.೭ರಂದು ಮೈಸೂರಿನಲ್ಲಿ ದೊಡ್ಡ ಮಟ್ಟದ ಸಮಾವೇಶ ಮಾಡಿ ಹೋರಾಟಕ್ಕೆ ಚಾಲನೆ ನೀಡಲು ಮುಂದಾಗಿದೆ. ರಾಜಾಹುಲಿ ಯಡಿಯೂರಪ್ಪ ಹೋರಾಟಕ್ಕೆ ಚಾಲನೆ ನೀಡುವ ಸಾಧ್ಯತೆಯಿದ್ದು ರಾಜ್ಯ ಬಹುತೇಕ ಬಿಜೆಪಿ ನಾಯಕರು ಭಾಗವಹಿಸಲಿದ್ದಾರೆ. ಏಪ್ರಿಲ್ ೭ರಿಂದ ಮೇ ೩ರವರೆಗೆ ರಾಜ್ಯದ ಎಲ್ಲ ೩೧ಜಿಲ್ಲೆಗಳಲ್ಲಿ ರ್ಯಾಲಿ ನಡೆಸಿ ಸರ್ಕಾರ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡಿದೆ.


ಹೋರಾಟದ ಸಮಯದಲ್ಲಿ ೧೧ಜಿಲ್ಲೆಗಳಲ್ಲಿ ಈ ರ್ಯಾಲಿ ವಾಸ್ತವ್ಯ ಹೂಡಲಿದ್ದು ಜನರಿಗೆ ರಾಜ್ಯ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ತಿಳಿಸಲಿದೆ. ಏ.೭ ರಂದು ಮೈಸೂರಿನಲ್ಲಿ ೮ರಂದು ಮಂಡ್ಯ ಹಾಸನ, ೯ರಂದು ಕೊಡಗು, ಮೈಸೂರು, ೧೦ರಂದು ಉಡುಪಿ ಚಿಕ್ಕಮಗಳೂರು, ೧೧ರಂದು ಉತ್ತರ ಕನ್ನಡ, ೧೨ರಂದು ಶಿವಮೊಗ್ಗ, ೧೫ರಂದು ನಿಪ್ಪಾಣಿ, ೧೬ರಂದು ಬೆಳಗಾವಿ, ಹುಬ್ಬಳ್ಳಿ, ೧೭ರಂದು ಬಾಗಲಕೋಟೆ, ವಿಜಯಪುರ, ೧೮ರಂದು ಕಲಬುರಗಿ, ಬೀದರ್, ೨೧ರಂದು ದಾವಣಗೇರಾ, ಹಾವೇರಿ, ೨೨ರಂದು ಗದಗ, ಕೊಪ್ಪಳ, ೨೩ರಂದು ಯಾದಗಿರಿ ರಾಯಚೂರು, ೨೪ರಂದು ಬಳ್ಳಾರಿ, ವಿಜಯನಗರ, ೨೫ರಂದು ಚಿತ್ರದುರ್ಗ ತುಮಕೂರು, ೨೭ರಂದು ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಹೋರಾಟ ನಡೆಸಲಿದೆ.
ಕೊನೆಯದಾಗಿ ಜನಾಕ್ರೋಶ ರ್ಯಾಲಿಯನ್ನು ಮೇ ೩ರಂದು ಬೆಂಗಳೂರು ಮಹಾನಗರ, ಬೆಂಗಳೂರು ಗ್ರಾಮಾಂತರ, ರಾಮನಗರದಲ್ಲಿ ಯಾತ್ರೆ ನಡೆಸಿ ಅಂದು ಸಂಜೆ ಬೃಹತ್ ಸಮಾವೇಶ ನಡೆಸಲು ಮುಂದಾಗಿದ್ದಾರೆ. ಆ ದಿನ ಕೇಂದ್ರ ನಾಯಕರನ್ನು ಕರೆತರುವ ಪ್ರಯತ್ನ ನಡೆದಿದೆ ಎಂದು ಹೇಳಲಾಗುತ್ತಿದೆ.
ಒಟ್ಟಿನಲ್ಲಿ ಬಿಜೆಪಿಯಲ್ಲಿ ಸದ್ಯ ಒಗ್ಗಟ್ಟು ಮೂಡಿದ್ದು ರಾಜ್ಯ ಸರ್ಕಾರದ ವಿರುದ್ಧ ದೊಡ್ಡ ಮಟ್ಟದ ಹೋರಾಟ ನಡೆಸುತ್ತಿದ್ದಾರೆ.