ನಂದೀಶ್ ಭದ್ರಾವತಿ, ದಾವಣಗೆರೆ
ಜಗತ್ತು ಮತ್ತೊಮ್ಮೆ ಬೆಚ್ಚಿ ಬಿದ್ದಿದೆ..ಜಪಾನ್ ಪಿಎಂ ಶಿಂಜೊ ಅಬೆ ಗುಂಡಿಟಿಗೆ ಬಲಿಯಾದ ಘಟನೆ ಮಾಸುವ ಮುನ್ನವೇ ಅಮೆರಿಕದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ರಿಪಬ್ಲಿಕನ್ ಅಭ್ಯರ್ಥಿ ಹಾಗೂ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗ್ರೇಟ್ ಎಸ್ಕೇಪ್ ಆಗಿದ್ದಾರೆ..ಅದು ಚುನಾವಣೆ ಹೊತ್ತಲ್ಲಿ ದಾಳಿ ನಡೆದಿರೋದು ಪ್ರಚಾರದ ಕಾವನ್ನು ಮತ್ತಷ್ಟು ಬಿಸಿ ಮಾಡಿದೆ. ಅಷ್ಟಕ್ಕೂ, ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ನಡೆಸಿದ್ದು ಯಾರು..? 20 ವರ್ಷದ ಹುಡುಗನಿಗೆ ಟ್ರಂಪ್ ಮೇಲೆಕೆ ದ್ವೇಷ..? ಈ ಘಟನೆಯಿಂದ ಟ್ರಂಪ್ ಗೆಲ್ಲೋದು ಪಕ್ಕಾ ಆಯ್ತಾ..?
ಹೌದು ಓದುಗರೇ..ಅಮೆರಿಕದಿಂದ ಶಾಕಿಂಗ್ ನ್ಯೂಸ್ ಬಂದಿದೆ..ವರ್ಷಾಂತ್ಯಕ್ಕೆ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಮುಂಚಿತವಾಗಿ ಅಸ್ಥಿರತೆಯ ಭಯವನ್ನು ಹೆಚ್ಚಿಸುವ ಆಘಾತಕಾರಿ ಘಟನೆ ನಡೆದಿದೆ..
ಭಾರತೀಯ ಕಾಲಮಾನ ಶನಿವಾರ ರಾತ್ರಿ ಪ್ರಚಾರ ಸಭೆಯಲ್ಲಿ 20 ವರ್ಷದ ಬಂದೂಕುಧಾರಿಯೊಬ್ಬ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಅದೃಷ್ಟವಶಾತ್ ಟ್ರಂಪ್ ಅಪಾಯದಿಂದ ಪಾರಾಗಿದ್ದಾರೆ..
ಪೆನ್ಸಿಲ್ವೇನಿಯಾದ ಬಟ್ಲರ್ನಲ್ಲಿ ನಡೆದ ಗುಂಡಿನ ದಾಳಿ ವೇಳೆ 78 ವರ್ಷದ ಡೊನಾಲ್ಡ್ ಟ್ರಂಪ್ ಅವರ ಕಿವಿಯ ಭಾಗದಲ್ಲಿ ಗುಂಡು ಹಾದು ಹೋಗಿದ್ದು, ಮುಖಕ್ಕೆಗಾಯವಾಗಿದೆ..ಯಾವಾಗ ಗುಂಡಿನ ದಾಳಿ ನಡೆಯಿತೋ ಎಚ್ಚತ್ತ ಭದ್ರತಾ ಪಡೆ ಟ್ರಂಪ್ ಸುತ್ತುವರಿದು, ರಕ್ಷಿಸುವಲ್ಲಿ ಯಶಸ್ವಿಯಾಗಿದೆ..
ಡೊನಾಲ್ಡ್ ಟ್ರಂಪ್ ಅವರು ಬುಲ್ಲೆಟ್ ಪ್ರೂಫ್ ಜಾಕೆಟ್ ಧರಿಸಿದ್ದರು ಮತ್ತು ಗುಂಡಿನ ದಾಳಿಯಾಗುತ್ತಿದ್ದಂತೆ ಟ್ರಂಪ್ ಕುಳಿತಿದ್ದರಿಂದ ಹೆಚ್ಚಿನ ಅಪಾಯವಾಗಿಲ್ಲ…ಈ ಸಮಾವೇಶಕ್ಕೆ ಆಗಮಿಸಿದ್ದ ಓರ್ವ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ ಎನ್ನಲಾಗಿದೆ..
ಈ ದಾಳಿಯು ಪ್ರಪಂಚದಾದ್ಯಂತ ರಾಜಕೀಯ ವಲಯದಲ್ಲಿ ತೀವ್ರ ಆಘಾತವನ್ನುಂಟುಮಾಡಿದೆ.ಆಶ್ವರ್ಯ ಅಂದ್ರೆ ಗುಂಡಿನ ದಾಳಿ ನಡೆಸಿದ್ದು 20 ವರ್ಷದ ಥಾಮಸ್ ಮ್ಯಾಥೊ ಕ್ರೊಕ್ಸ್…ರಿಪಬ್ಲಿಕನ್ ಅಂತ ನೊಂದಣಿ ಮಾಡಿಕೊಂಡಿದ್ದ..ಘಟನೆ ನಡೆದ ಕೆಲ ನಿಮಿಷಗಳಲ್ಲೇ ಭದ್ರತಾ ಪಡೆಗಳು ಆತನನ್ನು ಕೊಂದು ಹಾಕಿವೆ..
ಹಾಗಾದ್ರೆ, ಟ್ರಂಪ್ ವಿಫಲ ಹತ್ಯೆಯ ಸಂಚು ಯಾರದ್ದು..? ಈಗಾಗಲೇ ಟ್ರಂಪ್ ಮತ್ತೆ ಅಧ್ಯಕ್ಷ ಆಗಬಾರದು ಅಂತ ಚೀನಾ ಮತ್ತಿತರ ರಾಷ್ಡ್ರಗಳು ಕಾದು ಕುಳಿತಿವೆ..ಜೊತೆಗೆ ಬಲಪಂತೀಯ ಟ್ರಂಪ್ ಗದ್ದುಗೆ ಏರಬಾರದು ಅಮೆರಿಕದೊಳಗೆ ಎಡಪಂತೀಯ ಮಸಲತ್ತುಗಳು ಕೂಡ ನಡೆಯುತ್ತಿವೆ.. ಈ ಬಾರಿ ಟ್ರಂಪ್ ಗೆಲ್ಲುವುದು ನಿಚ್ಚಳವಾಗಿದೆ..ಹೀಗಾಗಿ, ಇಂತದೊಂದು ಹತ್ಯೆಯ ಯತ್ನ ನಡೆದಿದೆ ಎನ್ನಲಾಗಿದೆ..
ಅಮೆರಿಕದ ರಾಜಕೀಯ ಹಿಂಸಾಚಾರದ ದೊಡ್ಡ ಇತಿಹಾಸ ಹೊಂದಿದೆ, ಈ ನಿಟ್ಟಿನಲ್ಲಿ ಅಲ್ಲಿನ ಅಧ್ಯಕ್ಷರು, ಮಾಜಿ ಅಧ್ಯಕ್ಷರು ಮತ್ತು ಅಭ್ಯರ್ಥಿಗಳಿಗೆ ಬಿಗಿ ಭದ್ರತೆ ಇದೆ. ಆರು ದಶಕಗಳಿಂದೆ ಅಂದಿನ ಅಧ್ಯಕ್ಷ ಜಾನ್ ಎಫ್. ಕೆನಡಿಯನ್ನು 1963 ರಲ್ಲಿ ಅವರು ವಾಹನದಲ್ಲಿ ಸವಾರಿ ಮಾಡುವಾಗ ಹತ್ಯೆ ಮಾಡಲಾಗಿತ್ತು.. ಅವರ ಸಹೋದರ ಬಾಬಿ ಕೆನಡಿ ಅವರನ್ನು 1968 ರಲ್ಲಿ ಗುಂಡಿಕ್ಕಿ ಕೊಲ್ಲಲಾಯಿತು. ಮಾಜಿ ಅಧ್ಯಕ್ಷ ರೊನಾಲ್ಡ್ ರೇಗನ್ 1981 ರಲ್ಲಿ ಹತ್ಯೆಯ ಪ್ರಯತ್ನದಿಂದ ಬದುಕುಳಿದರು.