
ದಾವಣಗೆರೆ : ಕರ್ನಾಟಕದಲ್ಲಿ ಲೋಕಸಭಾ ಚುನಾವಣಾ ಕಾವು ದಿನೇ ದಿನೇ ಹೆಚ್ಚಾಗ್ತಾಯಿದೆ. ರಾಜ್ಯ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಹೆಚ್ಚು ಸೀಟುಗಳನ್ನ ಕರ್ನಾಟಕದಲ್ಲಿ ಗೆಲ್ಲಬೇಕು ಅಂತೇಳಿ ತಂತ್ರಗಳ ಮೇಲೆ ತಂತ್ರಗಳನ್ನ ಹೆಣೆಯುತ್ತಿವೆ. ಆದ್ರೆ 2019ಕ್ಕೆ ಹೋಲಿಸಿದ್ರೆ ಕರ್ನಾಟಕದಲ್ಲಿ ಮೋದಿ ಅಲೆ ನೆಲಕ್ಕಚ್ಚಿದ್ದು, ಬಿಜೆಪಿ ಮೇಲೆ ಜನರಿಗೆ ಇದ್ದಂತಾ ಭರವಸೆ ಕೂಡ ಕುಗ್ಗಿ ಹೋಗಿದೆ. ಇಂಥ ಪರಿಸ್ಥಿತಿಯಲ್ಲಿ ಕರ್ನಾಟಕದಲ್ಲಿ ಬಿಜೆಪಿ 10 ಸೀಟು ಗೆದ್ರೆ ಅದೇ ದೊಡ್ದು ಅನ್ನೋ ಮಾತುಗಳಿವೆ.
ಆದ್ರೆ ಈ ಸಲ ಕರ್ನಾಟಕದಲ್ಲಿ ಬಿಎಸ್ವೈ ಮತ್ತು ಬಿವೈ ವಿಜಯೇಂದ್ರ ಅಬ್ಬರ ಆರ್ಭಟ ಹೆಚ್ಚಾಗಿದ್ದು, ಕಟ್ಟರ್ ಹಿಂದೂತ್ವ ವಾದಿಗಳು ಸೈಡ್ಲೈನ್ ಆಗಿದ್ದಾರೆ. ಅಂದ್ರೆ ಬಿಎಲ್ ಸಂತೋಷ್ ಬಣದಲ್ಲಿ ಗುರುತಿಸಿಕೊಂಡಿದ್ದಂತವರೆಲ್ಲಾರನ್ನ ಬಿಎಸ್ವೈ ಮತ್ತು ಬಿವೈವಿ ತುಳಿಯುತ್ತದ್ದಾರೆ ಎನ್ನಲಾಗುತ್ತಿದೆ. ಇದ್ರಿಂದ ಕಟ್ಟರ್ ಹಿಂದೂತ್ವವಾದಿಗಳು ಮತ್ತು ಬಿಎಲ್ ಸಂತೋಷ್ ಬಣ ಸೈಲೆಂಟ್ ಅಸ್ತ್ರದ ಮೊರೆ ಹೋಗಿದೆ.ಇದು ರಾಜ್ಯ ಬಿಜೆಪಿ ಈ ಸಲದ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಬಹುದಾದ ಅತಿ ಕಡಿಮೆ ಸೀಟುಗಳ ಸಂಖ್ಯೆ ಮೇಲೆ ಮತ್ತಷ್ಟು ಪರಿಣಾಮ ಬೀರಲಿದೆ.
ಹಾಗಾದ್ರೆ ಎಲ್ಲಿ ಯತ್ನಾಳ್ ಮತ್ತು ಹೆಗಡೆ..? ಈ ಇಬ್ಬರು ನಾಯಕರು ಸೈಲೆಂಟ್ ಆಗಿರೋದ್ಯಾಕೆ.? ಇವರ ಸೈಲೆಂಟ್ ಅಸ್ತ್ರ ಈ ಸಲದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮರ್ಮಾಘಾತವನ್ನ ಕೊಡುತ್ತಾ.?


ರಾಜ್ಯ ಬಿಜೆಪಿಯಲ್ಲಿ ಬಿಎಸ್ವೈ ಬಣ ಮತ್ತು ಬಿಎಲ್ ಸಂತೋಷ್ ಬಣಗಳ ನಡುವೆ ಕೋಲ್ಡ್ ವಾರ್ ನಡೀತಾಯಿರೋದು ಮುಚ್ಚಿಟ್ಟ ಸತ್ಯವೇನೂ ಅಲ್ಲ.. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಎಲ್ ಸಂತೋಷ್ ಬಣ ಸ್ಟ್ರಾಂಗ್ ಆಗಿದ್ದು, ಬಿಎಸ್ ಯಡಿಯೂರಪ್ಪ ಬಣವನ್ನ ಸೈಡ್ಲೈನ್ ಮಾಡಿದ್ದನ್ನ ನೀವೆಲ್ಲಾ ಗಮನಿಸಿರ್ತೀರಾ.? ಆದ್ರೆ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲಿನ ನಂತರ ಕೇಂದ್ರ ಬಿಜೆಪಿ ನಾಯಕರು ಬಿಎಸ್ವೈ ಬಣಕ್ಕೆ ಫುಲ್ ಪವರ್ ಕೊಟ್ಟಿದ್ದಾರೆ. ಇದ್ರಿಂದ ಬಿಎಸ್ವೈ ಬಣ ಈಗ ಬಿಎಲ್ ಸಂತೋಷ್ ಬಣದಲ್ಲಿ ಗುರುತಿಸಿಕೊಂಡಿದ್ದವರೆಲ್ಲರನ್ನೂ ಟಿಕೆಟ್ ಕೊಡದೆ ತುಳಿದು ಹಾಕ್ತಿದ್ದಾರೆ.
ಅವರಲ್ಲಿ ಅನಂತಕುಮಾರ್ ಹೆಗಡೆ, ಸಿಟಿ ರವಿ, ಪ್ರತಾಪ್ ಸಿಂಹ, ನಳಿನ್ ಕುಮಾರ್ ಕಟಿಲ್, ಕೆ.ಎಸ್ ಈಶ್ವರಪ್ಪ.. ಹೀಗೆ ಸಾಕಷ್ಟು ನಾಯಕರಿದ್ದಾರೆ. ಇವರೆಲ್ಲರಿಗೂ ಟಿಕೆಟ್ ಕೊಡದೆ ತುಳಿದು ಹಾಕಿದ್ರೆ, ಹಿಂದೂ ಹುಲಿ ಖ್ಯಾತಿಯ ವಿಜಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಲೋಕಸಭಾ ಟಿಕೆಟ್ ಕೊಟ್ಟು ಸೋಲಿಸೋ ರಣತಂತ್ರ ನಡೆದಿತ್ತು.
ಆದ್ರೆ ಟಿಕೆಟ್ ನಿರಾಕರಿಸಿದ್ದ ಯತ್ನಾಳ್ ಸೇಫ್ ಆಗಿದ್ರು. ಆದ್ರೆ ವಿಷ್ಯ ಏನಂದ್ರೆ ರಾಜ್ಯದಲ್ಲಿ ಈ ಸಲ ಬಿಜೆಪಿ ಹೆಚ್ಚು ಎಂಪಿ ಸೀಟುಗಳನ್ನ ಗೆದ್ರೆ ಬಿಎಸ್ವೈ ಮತ್ತು ಬಿವೈವಿಗೆ ಸಿಂಹ ಬಲ ಬರುತ್ತೆ.. ಅದು ಬಿಎಲ್ ಸಂತೋಷ್ ಬಣಕ್ಕೆ ಸುತಾರಂ ಇಷ್ಟ ಇಲ್ಲ. ಮೋದಿ ಪ್ರಧಾನಿಯಾಗ್ಬೇಕು ನಿಜ. ಹಾಗಂದ ಮಾತ್ರಕ್ಕೆ ಬಿಎಸ್ವೈ ಬಣ ಸ್ಟ್ರಾಂಗ್ ಆಗೋದು ಬಿಎಲ್ ಸಂತೋಷ್ ಬಣಕ್ಕೆ ಇಷ್ಟವಿಲ್ಲ.
ನಿಮಗೆ ಗೊತ್ತಿರ್ಲಿ, ಈ ಸಲದ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಕೈ ತಪ್ಪಿಸಿದ್ದಕ್ಕೆ ಅನಂತಕುಮಾರ್ ಹೆಗಡೆ, ಸಿಟಿ ರವಿ, ಪ್ರತಾಪ್ ಸಿಂಹ, ನಳಿನ್ ಕುಮಾರ್ ಕಟಿಲ್, ಕೆ.ಎಸ್ ಈಶ್ವರಪ್ಪ ಕೊತಕೊತ ಕುದಿಯುತ್ತಿದ್ದಾರೆ. ಹೀಗಾಗಿ ಈ ನಾಯಕರು ತಾವು ಸ್ಟ್ರಾಂಗ್ ಆಗಿದ್ರೂ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಪಕ್ಷದ ಪರ ಪ್ರಚಾರ ನಡೆಸದೆ ಸೈಲೆಂಟ್ ಅಸ್ತ್ರ ಜಳಪಿಸಲು ಮುಂದಾಗಿದ್ದಾರೆ. ಇದು ಈ ಸಲದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೀಟುಗಳ ಸಂಖ್ಯೆ ಪಾತಾಳಕ್ಕೆ ಬಿದ್ದು ಹೋಗುವಂತೆ ಮಾಡೋದು ಗ್ಯಾರಂಟಿ.
ನಿಮಗೆ ಗೊತ್ತಿರ್ಲಿ, ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಗಿಟ್ಟಿಸಿಕೊಂಡಿರೋ ವಿಶ್ವೇಶ್ವರ ಹೆಗಡೆ ಕಾಗೇರಿಗೆ ತಮ್ಮ ಕ್ಷೇತ್ರದಲ್ಲಿ ಸ್ಥಳೀಯ ನಾಯಕರ ಅಸಹಕಾರದ ಬಿಸಿ ತಟ್ಟಿದೆ. ಟಿಕೆಟ್ ಕೈ ತಪ್ಪಿರೋ ಸಂಸದ ಅನಂತಕುಮಾರ್ ಹೆಗಡೆ ಅವರು ಸದ್ಯ ಯಾರ ಸಂಪರ್ಕಕ್ಕೂ ಸಿಕ್ತಾಯಿಲ್ಲ. ಇದರಿಂದ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಸಂಕಷ್ಟ ಎದುರಾಗಿದೆ. ಅನಂತಕುಮಾರ್ ಹೆಗಡೆ ಮನವೊಲಿಸಲು ಅವರ ಮನೆ ಬಳಿ ಹೋಗಿ ಕಾಗೇರಿ ಅರ್ಧ ಗಂಟೆ ಕಾದರೂ ಸೌಜನ್ಯಕ್ಕೂ ಗೇಟ್ ತೆರೆಸಿ ಅವರ ಬಳಿ ಮಾತನಾಡಿಲ್ಲ ಅನ್ನೋ ಮಾತುಗಳೂ ಕೇಳಿಬರ್ತಾಯಿವೆ. ಇವರೊಂದಿಗೆ ಯಲ್ಲಾಪುರ ಶಾಸಕ ಶಿವರಾಂ ಹೆಬ್ಬಾರ್ ಕೂಡ ಕಾಗೇರಿ ಅವರ ಸಂಪರ್ಕಕ್ಕೆ ಸಿಗುತ್ತಿಲ್ಲ. ಇದು ಕಾಗೇರಿ ಅವರಿಗೆ ಸೋಲಿನ ಭೀತಿಯನ್ನು ಹುಟ್ಟುಹಾಕಿದೆ.
ಇನ್ನ ಇದೇ ರೀತಿ ಸದಾ ಸುದ್ದಿಯಲ್ಲಿರ್ತಿದ್ದ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಕೂಡ ಸೈಲೆಂಟ್ ಆಗಿದ್ದಾರೆ. ಬಹಿರಂಗವಾಗಿ ಎಲ್ಲೂ ಕಾಣಿಸಿಕೊಳ್ತಾಯಿಲ್ಲ. ಚುನಾವಣಾ ಸಂದರ್ಭದಲ್ಲಿ ಅಬ್ಬರಿಸಬೇಕಾಗಿದ್ದ ಹಿಂದೂ ಹುಲಿ ಸೈಲೆಂಟ್ ಹಿಂದಿರೋ ರಣತಂತ್ರ ಏನ್ ಗೊತ್ತಾ.? ಅದನ್ನ ಡೀಟೇಲಾಗಿ ತೋರಿಸ್ತೀವಿ ನೋಡಿ. ಈಗ ಲೋಕಸಭಾ ಚುನಾವಣಾ ಟೈಂ.. ಇಂಥ ಟೈಮಲ್ಲಿ ಯತ್ನಾಳ್ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ರೆ, ಅಭ್ಯರ್ಥಿಗಳು ಗೆದ್ದು ಬರ್ತಾರೆ. ಆದ್ರೆ ಗೆದ್ಮೇಲೆ ಅದರ ಕ್ರೆಡಿಟ್ ಸಿಗೋದು ಯಾರಿಗೆ ಬಿಜೆಪಿ ರಾಜ್ಯಾಧ್ಯಕ್ಷರಾಗಿರೋ ಬಿವೈ ವಿಜಯೇಂದ್ರ ಅವರಿಗೆ. ಹೀಗಾಗಿ ಇವರಿಗೆ ಆ ಕ್ರೆಡಿಟ್ ಸಿಗಬಾರ್ದು ಅನ್ನೋ ರಣತಂತ್ರ ಹೆಣೆದಿದ್ದಾರೆ. ಮತ್ತೊಂದು ಕಡೆ ಒಂದೊಮ್ಮೆ ಯತ್ನಾಳ್ ಅಪ್ಪಿತಪ್ಪಿ ಬಿಎಸ್ವೈ ಮತ್ತು ಬಿವೈ ವಿಜಯೆಂದ್ರ ಅವರ ವಿರುದ್ಧ ವಾಗ್ದಾಳಿ ನಡೆಸಿ, ಕರ್ನಾಟಕದ ಚುನಾವಣೆಯಲ್ಲಿ ಬಿಜೆಪಿ ಕಡಿಮೆ ಸೀಟುಗಳನ್ನ ಗೆದ್ರೆ ಅದರ ಹೊಣೆಯನ್ನ ಯತ್ನಾಳ್ ತಲೆಗೆ ಕಟ್ಟೋ ಪ್ಲ್ಯಾನ್ ನಡೆಯುತ್ತಿದೆ. ಹೀಗಾಗಿ ಯತ್ನಾಳ್ ಲೋಕಸಭಾ ಚುನಾವಣೆ ಮುಗಿಯೋವರೆಗೂ ಸೈಲೆಂಟ್ ಅಸ್ತ್ರದ ಮೊರೆ ಹೋದಂತೆ ಕಂಡು ಬರ್ತಾಯಿದೆ.
ಆದ್ರೆ ಇವತ್ತು ಮತ್ತೆ ಅಲರ್ಟ್ ಆಗಿರೋ ಯತ್ನಾಳ್, ಬಿಎಸ್ವೈ ಮತ್ತು ಬಿವೈ ವಿಜಯೇಂದ್ರ ಅವರ ವಿರುದ್ಧ ರೊಚ್ಚಿಗೆದ್ದು, ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ. ಇನ್ನ ಟಿಕೆಟ್ ವಂಚಿತ , ಸಿಟಿ ರವಿ, ಪ್ರತಾಪ್ ಸಿಂಹ, ನಳಿನ್ ಕುಮಾರ್ ಕಟಿಲ್ ಅವರು ಕೂಡ ಸೈಲೆಂಟ್ ಆಗೋ ಸಾಧ್ಯತೆ ಇದೆ. ತಮ್ಮ ತಮ್ಮ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಸೋತ್ರೆ ತಮ್ಮ ತಾಕತ್ ಏನು ಅನ್ನೋದನ್ನ ಹೈಕಮಾಂಡ್ ಮುಂದೆ ತೋರಿಸಿಕೊಳ್ಳಲು ಸಾಧ್ಯವಾಗುತ್ತೆ. ಅಷ್ಟೇ ಅಲ್ಲ, ಬಿಎಸ್ವೈ ಮತ್ತು ಬಿವೈ ವಿಜಯೇಂದ್ರ ಅವರ ಮಾತು ನಂಬಿ ನೀವು ಕೆಟ್ರಿ ಅಂತೇಳಿ ಹೈಕಮಾಂಡ್ಗೆ ಸಂದೇಶ ರವಾನಿಸೋ ರಣತಂತ್ರವೂ ನಡೆಯುತ್ತಿದೆ. ಮತ್ತೊಂದು ಕಡೆ ಕೆ.ಎಸ್. ಈಶ್ವರಪ್ಪ ಶಿವಮೊಗ್ಗದಿಂದ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೇನೆ ಅಂತೇಳಿ ಗುಡುಗಿದ್ದಾರೆ. ಆದ್ರೆ ಕೊನೆ ಕ್ಷಣದಲ್ಲಿ ಮೋದಿನೋ, ಅಮಿತ್ ಶಾ ಅವರೋ ಫೋನ್ ಮಾಡಿದ್ರೆ ಈಶ್ವರಪ್ಪ ಸ್ಪರ್ಧೆಯಿಂದ ಹಿಂದೆ ಸರಿಯೋ ಸಾಧ್ಯತೆ ಇದೆ. ಆದ್ರೆ ಹಾಗೊಮ್ಮೆ ಹಿಂದೆ ಸರಿದ್ರೂ ಪರೋಕ್ಷವಾಗಿ ಬಿವೈ ರಾಘವೇಂದ್ರ ಸೋಲಿಸೋಕೆ ಶ್ರಮಿಸೋ ಸಾಧ್ಯತೆ ಇದೆ..
ಅದೇನೇ ಇದ್ರೂ ರಾಜ್ಯ ಬಿಜೆಪಿಗೆ ಈ ಸಲದ ಕರ್ನಾಟಕ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಗಿಂತ ಹೆಚ್ಚಾಗಿ ಒಳಗಿನ ಶತ್ರುಗಳ ಭಯವೇ ಹೆಚ್ಚಾಗಿದೆ. ಬಿಎಸ್ವೈ ಮತ್ತು ಬಿವೈವಿ ಶಕ್ತಿ ಮೀರಿ ಹೋರಾಡಿದ್ರೂ ಒಂದೊಮ್ಮೆ ಕರ್ನಾಟಕದಲ್ಲಿ ಬಿಜೆಪಿ ಸೀಟುಗಳ ಸಂಖ್ಯೆ ಒಂದಂಕಿ ನಂಬರ್ಗೆ ಇಳಿದು ಹೋದ್ರೆ ಬಿವೈ ವಿಜಯೇಂದ್ರ ಅವರನ್ನ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸೋದು ಗ್ಯಾರಂಟಿ.. ನೆಲಕ್ಕೆ ಬಿದ್ದವನಿಗೆ ಆಳಿಗೊಂದು ಏಟು ಅನ್ನೋ ಹಾಗೆ ಬಿಎಲ್ ಸಂತೋಷ್ ಬಣ ಬಿಎಸ್ವೈ ಮತ್ತು ಬಿವೈ ವಿಜಯೇಂದ್ರ ಅವರನ್ನ ಸುಮ್ನೆ ಬಿಡೋ ಮಾತೇ ಇಲ್ಲ. ಸೇಡಿಗೆ ಸೇಡು ತೀರಿಸಿಕೊಳ್ಳೋದು ಗ್ಯಾರಂಟಿ.
ಹಾಗಾದ್ರೆ ರಾಜ್ಯ ಬಿಜೆಪಿಯಲ್ಲಿನ ಈ ಒಳಜಗಳ ಈ ಸಲದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಗೆ ವರದಾನವಾಗುತ್ತಾ.? ಕಾಂಗ್ರೆಸ್ ನಾಯಕರು ಹೇಳಿಕೊಳ್ತಾಯಿರೋ ರೀತಿಯಲ್ಲಿ 20ಕ್ಕೂ ಹೆಚ್ಚು ಸೀಟುಗಳನ್ನ ಗೆಲ್ಲೋದಕ್ಕೆ ಸಾಧ್ಯವಾಗುತ್ತಾ? ಕಾದು ನೋಡಬೇಕು.