
ನಂದೀಶ್ ಭದ್ರಾವತಿ ದಾವಣಗೆರೆ
ಭಾರತದ ಉದ್ಯಮ ಜಗತ್ತಿನ ಅಧಿಪತಿ, ರಿಲಯನ್ಸ್ ಇಂಡಸ್ಟ್ರಿಯ ಮುಖ್ಯಸ್ಥ ಮುಕೇಶ್ ಅಂಬಾನಿ, ಕಿರಿಯ ಪುತ್ರ ಅನಂತ್ ಅಂಬಾನಿ ಮದುವೆ ರಾಧಿಕಾ ಮರ್ಚೆಂಟ್ ಜಗತ್ತಿನಾದ್ಯಂತ ಸದ್ದು ಮಾಡ್ತಿದೆ. ಈ ಅದ್ದೂರಿ ವಿವಾಹ ಕಾರ್ಯಕ್ರಮಕ್ಕೆ ಹಾಲಿವುಡ್, ಬಾಲಿವುಡ್ ನಟ ನಟಿಯರು, ಕ್ರಿಕೆಟ್ ತಾರೆಯರು, ಜಾಗತಿಕ ಉದ್ಯಮಿಗಳು, ರಾಜಕಾರಣಿಗಳು ಸಾಕ್ಷಿಯಾಗಿದ್ದಾರೆ. ಜುಲೈ 14ರಂದು ಮಂಗಳೋತ್ಸವ ಮತ್ತು ಜುಲೈ 15ರಂದು ರಿಲಯನ್ಸ್ ಜಿಯೋ ವರ್ಲ್ಡ್ ನಲ್ಲಿ ಆರತಕ್ಷತೆ ನಡೆಯಲಿದೆ. ಹಾಗಾದ್ರೆ, ಈ ಅದ್ದೂರಿಗೆ ಮದುವೆಗೆ ಖರ್ಚಾದ ಹಣವೆಷ್ಟು.? ಹೀಗೆ ಖರ್ಚು ಮಾಡಿದ ಹಣವನ್ನು ಮುಕೇಶ್ ಅಂಬಾನಿ ಎಷ್ಟು ದಿನಗಳಲ್ಲಿ ಗಳಿಸುತ್ತಾರೆ.?
ಮುಕೇಶ್ ಅಂಬಾನಿ ಜಗತ್ತಿನ ಟಾಪ್ ಹತ್ತರೊಳಗಿರುವ ದೈತ್ಯ ಉದ್ಯಮಿ..ಅಂಬಾನಿಯ ಮುದ್ದಿನ ಕಿರಿಯ ಪುತ್ರ ಅನಂತ್ ಅಂಬಾನಿ ಮದುವೆ ವಿಶ್ವದ ಗಮನ ಸೆಳೆದಿದೆ. ಕಳೆದ ನಾಲ್ಕು ತಿಂಗಳಿನಿಂದ ಅಂಬಾನಿ ಕುಟುಂಬದ ಮದುವೆ ನಡೆಯುತ್ತಿದೆ. ಎರಡು ಬಾರಿ ವಿವಾಹ ಪೂರ್ವ ಸಮಾರಂಭ ನಡೆದಿದೆ. ಅನಂತ್ ಅಂಬಾನಿ- ರಾಧಿಕಾ ಮರ್ಚೆಂಟ್ ಮದುವೆ ಭಾರತದ ಅದ್ಧೂರಿ ವಿವಾಹಗಳಲ್ಲಿ ಮೊದಲ ಸ್ಥಾನದಲ್ಲಿ ಬರಲಿದೆ ಎಂದು ಹೇಳಲಾಗಿದೆ. ಇದು ಈ ವರ್ಷದ ವಿಶ್ವದ ಅತ್ಯಂತ ದುಬಾರಿಯ ವಿವಾಹ ಎನ್ನಲಾಗುತ್ತಿದೆ.


ಭಾರತ, ವಿಶ್ವದ ಉದ್ಯಮಿಗಳು, ದೇಶ ಹಾಗೂ ವಿದೇಶದ ರಾಜಕಾರಣಿಗಳು ಹಾಲಿವುಡ್, ಸ್ಯಾಂಡಲ್ವುಡ್, ಕಾಲಿವುಡ್ ನಟ-ನಟಿಯರು ಕುಟುಂಬ ಸಮೇತರಾಗಿ ಭಾಗಿಯಾಗಿದ್ದರು. ಎಲ್ಲಾ ಸೆಲಿಬ್ರಿಟಿಗಳನ್ನು ಮುಂಬೈಗೆ ಕರೆದುಕೊಂಡು ಬರಲು ವಿಶೇಷ ವ್ಯವಸ್ಥೆ ಅಂಬಾನಿ ಕುಟುಂಬವೇ ಮಾಡಿತ್ತು. ಇನ್ನು ಮದುವೆಯಲ್ಲಿ ದುಬಾರಿ ವಸ್ತುಗಳನ್ನೇ ಬಳಕೆ ಮಾಡಲಾಗಿದೆ. ಅಂಬಾನಿ ಕುಟುಂಬದ ಸದಸ್ಯರು ಧರಿಸಿರವ ಬಟ್ಟೆಗಳು ನೂರಾರು ಕೋಟಿ ಮೌಲ್ಯವನ್ನು ಹೊಂದಿವೆ. ಭಾರತದಲ್ಲಿ ಸಿಗುವ ಎಲ್ಲಾ ಬಗೆಯ ವೈವಿದ್ಯದ ಆಹಾರವನ್ನು ಅತಿಥಿಗಳಿಗೆ ಉಣಬಡಿಸಲಾಗಿದೆ.
ಮೊದಲು ಗುಜರಾತಿನ ಜಾಮ್ನಗರದಲ್ಲಿ ವಿವಾಹ ಪೂರ್ವ ಸಮಾರಂಭ ಆಯೋಜನೆ ಮಾಡಲಾಗಿತ್ತು. ನಂತರ ಇಟಲಿಯಲ್ಲಿಯೂ ಪ್ರಿ ವೆಡ್ಡಿಂಗ್ ಸಮಾರಂಭ ಆಯೋಜನೆ ಮಾಡಲಾಗಿತ್ತು. ವಿವಾಹ ಪೂರ್ವ ಆಚರಣೆಗಳಿಂದ ಮದುವೆಯವರೆಗಿನ ವೆಚ್ಚದ ಅಂದಾಜು ಲೆಕ್ಕ ಹೊರ ಬಿದ್ದಿದೆ. ಮುಕೇಶ್ ಅಂಬಾನಿ ಮಗನ ಮದುವೆಗೆ 5 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ ಎಂದು ವರದಿಯಾಗಿದೆ.
ಈ ಮದುವೆಯ ಒಟ್ಟು ವೆಚ್ಚ ಮುಕೇಶ್ ಅಂಬಾನಿ ಅವರ ನಿವ್ವಳ ಮೌಲ್ಯದ 0.5% ಮಾತ್ರ ಎಂದು ಅಂದಾಜಿಸಲಾಗಿದೆ. ಮುಕೇಶ್ ಅಂಬಾನಿ ಒಟ್ಟು ನಿವ್ವಳ ಮೌಲ್ಯ $123.2 ಬಿಲಿಯನ್ ಆಗಿದೆ. ಮಗನ ಮದುವೆಗೆ ಖರ್ಚು ಮಾಡಿರುವ ಈ ಹಣವನ್ನು ಕೆಲವೇ ಗಂಟೆಗಳಲ್ಲಿ ಗಳಿಸುತ್ತಾರೆ ಎಂದು ವರದಿಯೊಂದು ಪ್ರಕಟವಾಗಿದೆ.
ಭಾರತದಲ್ಲಿ ವಿವಾಹದ ಮಾರುಕಟ್ಟೆ ಅತಿ ವೇಗವಾಗಿ ಬೆಳೆಯುತ್ತಿದೆ ಎಂದು ಅಮೆರಿಕದ ಇನ್ವೆಸ್ಟ್ಮೆಂಟ್ ಬ್ಯಾಂಕಿಂಗ್ ಮತ್ತು ಕ್ಯಾಪಿಟಲ್ ಮಾರ್ಕೆಟ್ ಫರ್ಮ್ ಜೆಫರೀಸ್ ವರದಿ ಮಾಡಿತ್ತು. ಸದ್ಯ ಭಾರತದಲ್ಲಿ ಪ್ರತಿ ವರ್ಷ 80 ಲಕ್ಷದಿಂದ 1 ಕೋಟಿ ಮದುವೆಗಳು ನಡೆಯುತ್ತವೆ. ಭಾರತದಲ್ಲಿ ಮದುವೆಗಾಗಿ ವರ್ಷಕ್ಕೆ ಸುಮಾರು 10 ಲಕ್ಷ ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತದೆ. ಅಮೆರಿಕಾಕ್ಕಿಂತ ಎರಡು ಪಟ್ಟು ಆಗಿದೆ. ಅಮೆರಿಕಾದಲ್ಲಿ ಮದುವೆಗೆ 5 ಲಕ್ಷ ಕೋಟಿ ಖರ್ಚಾಗುತ್ತದೆ. ಮದುವೆಗೆ ಖರ್ಚು ಮಾಡುವ ಹಣದ ವಿಚಾರದಲ್ಲಿ ಭಾರತಕ್ಕಿಂತ ಚೀನಾ ಮುಂದಿದೆ. ಚೀನಾದಲ್ಲಿ 14 ಲಕ್ಷ ಕೋಟಿ ರೂ ಖರ್ಚು ಮಾಡಲಾಗುತ್ತದೆ ಎಂದು ವರದಿಯಾಗಿದೆ.