


ನ್ಯಾಮತಿ: ಪಿಂಕ್ (ಗುಲಾಬಿ) ಬಣ್ಣಕ್ಕೂ ಮಹಿಳೆಯರಿಗೂ ಅದೇನೋ ವಿಶೇಷ ಒಲವು ಇದನ್ನೆ ಕೇಂದ್ರಿಕರಿಸಿ ಚುನಾವಣೆ ಆಯೋಗವು ಪಟ್ಟಣ ಪಂಚಾಯಿತಿ ಅಧಿಕಾರಿಗಳ ಶ್ರಮದಿಂದ ಮಹಿಳೆಯರಲ್ಲಿ ಮತದಾನ ಹೆಚ್ಚಿಸುವ ದೃಷ್ಟಿಯಿಂದಾಗಿ 2024ರ ಲೋಕಸಭೆ ಚುನಾವಣೆಯಲ್ಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ 10 ಮತ ಕೇಂದ್ರದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಯ ಮತ ಕೇಂದ್ರದಲ್ಲಿ ಸಖಿ ವಿಶೇಷ ಮತ ಕೇಂದ್ರ ನಿರ್ಮಾಣ ಮಾಡಲಾಗಿದೆ.
ಈ ಒಂದು ಮತಕೇಂದ್ರವನ್ನು ಸಂಪೂರ್ಣ ಪಿಂಕ್‌ನಿಂದ ಪ್ರಸ್ತುತ ಟ್ರೆಂಡ್‌ಗೆ ಅನುಗುಣವಾಗಿ ಅಲಂಕರಿಸುವ ಮೂಲಕ ಮತದಾನ ಹೆಚ್ಚಿಸುವಲ್ಲಿ ನ್ಯಾಮತಿ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮುಂದಾಗಿದ್ದಾರೆ.
2024ರ ಲೋಕಸಭೆ ಸಾರ್ವತ್ರಿಕಾ ಚುನಾವಣೆ ಹಿನ್ನಲೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ 178ನೇ ಮತ ಕೇಂದ್ರ ಇದಾಗಿದ್ದು ಇದನ್ನ ಸಂಪೂರ್ಣವಾಗಿ ಹೂಗಳ ಅಂಕಾರ ಸೇರಿದಂತೆ ವಿವಿಧ ಬಗೆಯ ಅಲಂಕಾರವನ್ನು ಪಿಂಕ್(ಗುಲಾಬಿ) ಬಣ್ಣದಿಂದ ಅಲಂಕರಿಸುವ ಮೂಲಕ ನ್ಯಾಮತಿ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಶ್ರಮಿಸಿದ್ದಾರೆ.

ಈ ಒಂದು ಬೂತ್‌ನಲ್ಲಿ ವ್ಯಾಪ್ತಿಯಲ್ಲಿ 500 ಪುರುಷ ಹಾಗೂ 527 ಮಹಿಳಾ ಮತದಾರರಿದ್ದು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಎಲ್ಲಾ ಕೇಂದ್ರಗಳಲ್ಲಿಯೂ ಶೇ 100 ಮತದಾನ ಮಾಡಿಸುವಲ್ಲಿ ಶ್ರಮ.

ದೇಶದ ಮತದಾನ ಹಬ್ಬಕ್ಕೆ ಸಖಿ ಬೂತ್‌ನಲ್ಲಿ ವಿಶೇಷ ಆಕರ್ಷಣೆ ಅಲಂಕಾರ ಮಾಡುವ ಮೂಲಕ ಸರ್ವ ತಯಾರಿ ನಡೆಸಿರುವುದಾಗಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಚ್.ಎನ್.ನಟರಾಜ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಖಿ ಕೇಂದ್ರ ವಿಶೇಷತೆ.
1.ಕೇಂದ್ರ ಚುನಾವಣೆ ಅಧಿಕಾರಿಗಳ ಆದೇಶದಂತೆ ಮಹಿಳಾ ಮತದಾರರು ಹೆಚ್ಚಿರುವ ಮತಗಟ್ಟೆ ಕೇಂದ್ರ ಗುರುತಿಸಿ ಸಖಿ ಬೂತ್ ನಿರ್ಮಾಣ.
2.ಬೂತ್ ಪ್ರಾರಂಭದಿಂದ ಹಿಡಿದು ಮತಗಟ್ಟೆ ಅಧಿಕಾರಿಗಳ ವರೆಗೂ ಮಹಿಳೆಯರ ಪಿಂಕ್ ಉಡುಗೆಯಿಂದ ಮಹಿಳೆಯರೇ ನಿರ್ವಹಣೆ.
3.ಕುಡಿಯುವ ನೀರು ಸೇರಿದಂತೆ ಯಾವುದೇ ಕುಂದುಕೊರತೆ ಆಗದಂತೆ ವಿಶೇಷ ಕಾಳಜಿ.
4.ವಿಶೇಷ ತರಬೇತಿ ಪಡೆದ ಮಹಿಳಾ ಅಧಿಕಾರಿಗಳಿಂದ ಪಿಂಕ್ ಬೂತ್‌ನಲ್ಲಿ ಕಾರ್ಯನಿರ್ವಹಣೆ.
5. ಇಂದಿನ ಟ್ರೆಂಡ್‌ಗನುಗುಣವಾಗಿ ಸೆಲ್ಫಿ ಸ್ಪಾಟ್ ನಿರ್ಮಾಣ.
6.ಮತದಾನದ ಮುಂಜಾನೆ ಬಾಳೆಕಂದು ತಳಿರು ತೋರಣಗಳ ಎರಡು ಬದಿಯಲ್ಲಿ ಪಿಂಕ್ ಪರದೆಯ ಮೂಲಕ ಸಿಂಗಾರ.
7.ವ್ಹೀಲ್ ಚೇರ್ ಸೇರಿದಂತೆ ಭದ್ರತೆ ಜೊತೆಗೆ ಕುಡಿಯುವ ನೀರಿನ ವ್ಯವಸ್ಥೆ.
8.ಮತದಾನದ ದಿನ ಮುಂಜಾನೆ ವಿಶೇಷ ರಂಗೋಲಿ ಸ್ವಾಗತ ಚಿತ್ತಾರದ ಜೊತೆಗೆ ಮತಗಟ್ಟೆಗೆ ತೆರಳುವ ಎರಡು ಬದಿಯಲ್ಲಿ ವಿಶೇಷ ಗಿಡಗಳ ಕುಂಡಗಳ ಜೋಡಣೆಗಳ ಮೂಲಕ ಸ್ವಾಗತ ಸೇರಿದಂತೆ ಇನ್ನೂ ಹಲವಾರು ಆಕರ್ಷಣೆ.