
ಶಿವಮೊಗ್ಗ : ಡಿ.ಕೆ. ಶಿವಕುಮಾರ್ ನಿಜವಾದ ಹಿಂದೂ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಿಜವಾದ ಹಿಂದೂ ಎಂದು ಮುಕ್ತಕಂಠದಿAದ ಕೆ.ಎಸ್. ಈಶ್ವರಪ್ಪ ಹೊಗಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಡಿ.ಕೆ. ಶಿವಕುಮಾರ್ ಯಾರಿಗೂ ಅಂಜದೇ ನಾನು ಹಿಂದೂವಾಗಿಯೇ ಹುಟ್ಟಿರುವೆ. ಹಿಂದೂ ಆಗಿಯೇ ಸಾಯುವೆ. ಎಂದು ಹೇಳುವ ಮೂಲಕ ನಿಜವಾದ ಹಿಂದೂ ಆಗಿದ್ದಾರೆ. ಸ್ವಾತಂತ್ರ್ಯ ಪೂರ್ವದಲ್ಲಿ ಎಲ್ಲಾ ಕಾಂಗ್ರೆಸಿಗರು ನಿಜವಾದ ಹಿಂದೂಗಳೇ ಆಗಿದ್ದರು. ಗಾಂಧೀಜಿಯವರು ಕೂಡ ತಮ್ಮ ಮರಣದ ಸಂದರ್ಭದಲ್ಲೂ ಹೇ ರಾಮ್ ಎಂದು ಉದ್ಘಾರ ಮಾಡಿಯೇ ನಿಧನರಾಗಿದ್ದರು. ಆ ಲಿಸ್ಟ್ ನಲ್ಲಿ ನಮ್ಮ ಡಿಕೆಶಿಯವರೂ ಇರುತ್ತಾರೆ ಎಂದರು.
ಹಾಗಂತ ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ಅನ್ನು ಬಿಡುವುದಿಲ್ಲ. ಆರ್.ಎಸ್.ಎಸ್. ಅನ್ನು ಅವರು ಹೊಗಳಿಯೂ ಇಲ್ಲ. ಆದರೆ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದ್ದಾರೆ. ಖರ್ಗೆಯವರಂತೆ ವಿರೋಧಭಾಸದ ಹೇಳಿಕೆ ನೀಡಿಲ್ಲ. ಇವರದು ನಿಜವಾದ ಹಿಂದುತ್ವ. ಇದು ನನಗೆ ಇಷ್ಟವಾಗಿದೆ. ಬಹುಶಃ ಕಾಂಗ್ರೆಸ್ ನ ಬಹಳಷ್ಟು ಜನರು ಹಿಂದೂಗಳೇ ಆಗಿದ್ದಾರೆ. ಆದರೆ, ರಾಜಕಾರಣಕ್ಕಾಗಿ ಓಲೈಕೆ ಹೇಳಿಕೆಗಳನ್ನು ನೀಡುತ್ತಾರೆ ಎಂದರು.